ಚಂಡೀಗಢ:ಹಿರಿಯ ಪೊಲೀಸ್ ಅಧಿಕಾರಿಗಳ ಕಿರುಕುಳ ತಾಳಲಾರದೆ ಅಸಿಸ್ಟೆಂಟ್​ ಸಬ್​ ಇನ್​ಸ್ಪೆಕ್ಟರೊಬ್ಬರು ಪೊಲೀಸ್ ಠಾಣೆಯೊಳಗೇ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ನಡೆದಿದೆ. ಅಲ್ಲದೆ ಸಾಯುವ ಮುನ್ನ ಈ ಅಧಿಕಾರಿ ತನ್ನ ಆತ್ಮಹತ್ಯೆಗೆ ಕಾರಣ ಏನೆಂಬುದನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
ಹರಿಯಾಣ ಪೊಲೀಸ್​ ಠಾಣೆಯ ಎಎಸ್ಐ ಸತೀಶ್ ಕುಮಾರ್​ (52) ಆತ್ಮಹತ್ಯೆ ಮಾಡಿಕೊಂಡವರು. ಇಂದು ಬೆಳಗ್ಗೆ ಇವರು ಠಾಣೆಯೊಳಗೇ ಶೂಟ್ ಮಾಡಿಕೊಂಡು ಸಾವಿಗೀಡಾಗಿದ್ದಾರೆ. ತಾಂಡಾ ಪೊಲೀಸ್ ಠಾಣೆಯ ಸ್ಟೇಷನ್​ ಹೌಸ್ ಆಫೀಸರ್ ಓಂಕಾರ್ ಸಿಂಗ್ ವಿರುದ್ಧ ಕಿರುಕುಳ ಆರೋಪ ಹೊರಿಸಿ ವಿಡಿಯೋ ಮಾಡಿದ್ದು, ಡೆತ್​​ನೋಟ್ ಕೂಡ ಸಿಕ್ಕಿದೆ.
ಗುರುವಾರ ಪರಿಶೀಲನೆಗೆ ಬಂದಿದ್ದ ಓಂಕಾರ್ ಸಿಂಗ್​, ಬಾಕಿ ಇರುವ ಕೇಸ್​ಗಳ ಬಗ್ಗೆ ಪ್ರಶ್ನಿಸಿದ್ದರು. ಪಂಜಾಬ್​ ಮತ್ತು ಹರಿಯಾಣ ಹೈಕೋರ್ಟ್​ಗಳಲ್ಲಿ ಮರುದಿನ ವಿಚಾರಣೆಗೆ ಬರಲಿದ್ದ ಕೇಸ್​ಗಳ ಕುರಿತು ಪ್ರಶ್ನಿಸಿದ್ದರು. ಆ ಪೈಕಿ ಒಂದರ ತನಿಖೆಯ ಜವಾಬ್ದಾರಿ ಮಾತ್ರ ತನ್ನಗಾಗಿದ್ದು, ಉಳಿದವುಗಳ ಬಗ್ಗೆ ಸಂಬಂಧಪಟ್ಟ ತನಿಖಾಧಿಕಾರಿಗಳನ್ನು ಕೇಳಬೇಕು ಎಂದು ಸತೀಶ್ ಉತ್ತರಿಸಿದ್ದರು. ಆದರೆ ಆ ಬಳಿಕ ಓಂಕಾರ್ ಸಿಂಗ್​ ತನಗೆ ಕಿರುಕುಳ ನೀಡಲಾರಂಭಿಸಿದ್ದು, ರೆಕಾರ್ಡ್ ಬುಕ್​ನಲ್ಲಿ ದೂರು ಕೂಡ ದಾಖಲಿಸಿದ್ದರು ಎಂದು ಸತೀಶ್ ಹೇಳಿಕೊಂಡಿದ್ದಾರೆ. ಹೀಗೆ ಸತಾಯಿಸುವ ಬದಲು ನೀವು ನನಗೆ ಶೂಟ್ ಮಾಡಿದ್ದರೆ ಒಳ್ಳೆಯದಿತ್ತು ಎಂದು ನಾನು ಅವರಿಗೆ ಉತ್ತರಿಸಿದ್ದಾಗಿ ಹೇಳಿಕೊಂಡಿರುವ ಸತೀಶ್ ಕುಮಾರ್, ಕೊನೆಗೆ ತಾವೇ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೆ. 6ರಂದು ಇನ್ನೊಬ್ಬ ಎಎಸ್​​ಐ ಮುಕ್ತ್ಸರ್ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪೊಲೀಸರು ಹಿರಿಯ ಅಧಿಕಾರಿಗಳಿಂದ ಸಮಸ್ಯೆ ಎದುರಿಸುತ್ತಿದ್ದರೆ ತಮ್ಮನ್ನು ಸಂಪರ್ಕಿಸುವಂತೆ ಹೊಷಿಯಾರ್​ಪುರದ ಎಸ್​ಪಿ ಸರ್ತಾಜ್​ ಸಿಂಗ್ ಚಾಹಲ್​ ಈ ಪ್ರಕರಣದ ಬಳಿಕ ಇತರ ಪೊಲೀಸರಿಗೆ ತಿಳಿಸಿದ್ದಾರೆ.
ಮದ್ವೆಯಾದ 3 ತಿಂಗಳ ಬಳಿಕ ಗೊತ್ತಾಯ್ತು ಆ ವಿಷ್ಯ!; ಭಯದಿಂದ ಆತ್ಮಹತ್ಯೆಗೆ ಯತ್ನಿಸಿದ 52 ವರ್ಷದ ವರ..
ಹಿಜಾಬ್ ಜತೆ ಸಿಖ್ಖರ ಕಿರ್ಪನ್​ ಮತ್ತು ಟರ್ಬನ್​ ಹೋಲಿಕೆ ಇಲ್ಲ: ಸುಪ್ರೀಂ ಕೋರ್ಟ್​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + eight =
Remember me
