ಲಕ್ನೋ:ಮಾಸ್ಕ್​ ಧರಿಸದೆ ಮನೆಯಿಂದ ಹೊರ ಬಂದಿದ್ದ ಇಬ್ಬರಿಗೆ ಪೊಲೀಸರೊಬ್ಬರು ರೈಲ್ವೆ ಹಳಿಯ ಪಕ್ಕದ ರಸ್ತೆಯಲ್ಲಿ ಉರುಳು ಸೇವೆ ಮಾಡಿಸಿ ಬಿಸಿ ಮುಟ್ಟಿಸಿದ್ದರು. ಈ ದೃಶ್ಯ ವೈರಲ್​ ಆಗುತ್ತಿದ್ದಂತೆ, ಎಚ್ಚೆತ್ತ ಮೇಲಧಿಕಾರಿಗಳು ಆ ಪೊಲೀಸ್​ನನ್ನು ಅಮಾನತು ಮಾಡಿದ್ದಾರೆ.
ಕರೊನಾ ಭೀತಿ ಇದ್ದರೂ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಕೊಟ್ವಾಲಿ ಪ್ರದೇಶದ ಮಂಗಳವಾರ ವ್ಯಕ್ತಿಗಳಿಬ್ಬರು ಮಾಸ್ಕ್​ ಹಾಕದೆ ಸಾರ್ವಜನಿಕವಾಗಿ ಓಡಾಡುತ್ತಿದ್ದರು. ಅವರನ್ನು ತಡೆದು ಪ್ರಶ್ನಿಸಿದ ಕೀ ಹೈಲೈಟ್ಸಾ ಠಾಣೆಯ ಪೊಲೀಸರೊಬ್ಬರು, ಮಾಸ್ಕ್​ ಧರಿಸುವಂತೆ ಎಚ್ಚರಿಕೆ ನೀಡುವ ಭರದಲ್ಲಿ ರೈಲ್ವೆ ಕ್ರಾಸಿಂಗ್​ ಪಕ್ಕದ ರಸ್ತೆಯಲ್ಲಿ ಸ್ವಲ್ಪ ದೂರ ಉರುಳುವ ಶಿಕ್ಷೆ ವಿಧಿಸಿದ್ದಾರೆ. ಪೊಲೀಸ್​ ಜತೆಯಲ್ಲೇ ಇದ್ದ ಹೋಂಗಾರ್ಡ್​ ಕೂಡ ಆ ವ್ಯಕ್ತಿಗಳಿಗೆ ಉರುಳುವಂತೆ ಒತ್ತಾಯಿಸಿದ್ದರು.
ಇದನ್ನೂ ಓದಿರಿಯುಪಿಎಸ್​​​ಸಿ : ಪೂರ್ವಭಾವಿ ಪರೀಕ್ಷೆ ದಿನಾಂಕ ಪ್ರಕಟಿಸಲು ನಿರ್ಧಾರ
ಮಾಸ್ಕ್​ ಧರಿಸುವಲ್ಲಿ ನಿರ್ಲಕ್ಷ್ಯ ತೋರಿ ಪೊಲೀಸ್​ ಕೋಪಕ್ಕೆ ಗುರಿಯಾದ ವ್ಯಕ್ತಿಗಳಿಬ್ಬರು ರಸ್ತೆಯಲ್ಲಿ ಉರುಳುವಾಗ ಪಕ್ಕದಲ್ಲೇ ಇದ್ದ ರೈಲ್ವೆ ಹಳಿ ಮೇಲೆ ರೈಲು ಹಾದುಹೋಗಿದೆ. ಆ ವೇಳೆ ಬಿಸಿಲು ಕೂಡ ಹೆಚ್ಚಾಗಿತ್ತು. ಆ ವ್ಯಕ್ತಿಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಉರುಳುವಂತೆ ಪಕ್ಕದಲ್ಲೇ ನಿಂತು ಹೋಂ ಗಾರ್ಡ್ ನಿರ್ದೇಶಿಸುತ್ತಿದ್ದ. ಈ ವೇಳೆ ಉಳುರುವುದನ್ನು ನಿಲ್ಲಿಸಿದ ಒಬ್ಬನ ಮೇಲೆ ಹೋಂ ಗಾರ್ಡ್ ಹಲ್ಲೆ ಮಾಡಿದ್ದಾನೆ. ಇದೆಲ್ಲದರ ವಿಡಿಯೋ ವೈರಲ್​ ಆಗಿದೆ. ರೈಲ್ವೆ ಹಳಿ ಪಕ್ಕದಲ್ಲೇ ಉರುಳುವಂತೆ ಮಾಡಿದ್ದು ಅಪಾಯಕಾರಿ ಎಂಬ ಟೀಕೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಇದು ಅರಿವಿಗೆ ಬರುತ್ತಿದ್ದಂತೆ ಎಚ್ಚತ್ತ ಹಾಪುರ್ ಪೊಲೀಸ್​ ಅಧೀಕ್ಷಕರು, ರೈಲ್ವೆ ಹಳಿ ಪಕ್ಕದಲ್ಲಿ ಉರುಳುವಂತೆ ಮಾಡಿ ಅಜಾಗರೂಕತೆಯಿಂದ ವರ್ತಿಸಿದ ಪೊಲೀಸ್​ಗೆ ಅಮಾನತು ಶಿಕ್ಷೆ ವಿಧಿಸಿದ್ದಾರೆ. ಈ ಬಗ್ಗೆ ಟ್ವಿಟರ್​ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿರಿಜೂಮ್ ವಿಡಿಯೋ ಕಾಲ್​ನಲ್ಲೇ ಅಪರಾಧಿಗೆ ಮರಣದಂಡನೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ!
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:17 − ten =
Remember me
