ಮುಂಬೈ:ವಿಮಾನ ಪ್ರಯಾಣ ಮಾಡುತ್ತಿದ್ದ ನಟಿಯನ್ನು ಲೈಂಗಿಕವಾಗಿ ಶೋಷಿಸಿದ ಆರೋಪದ ಮೇಲೆ ಸಹಪ್ರಯಾಣಿಕನಾಗಿದ್ದ ಬಿಸಿನೆಸ್​​ಮನ್​ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಾಪಾರಿಯನ್ನು ಉತ್ತರಪ್ರದೇಶದ ಘಾಜಿಯಾಬಾದ್​ ನಿವಾಸಿ ನಿತಿನ್​(36) ಎಂದು ಗುರುತಿಸಲಾಗಿದೆ.
ಮುಂಬೈ ನಿವಾಸಿಯಾದ 40 ವರ್ಷದ ಕಲಾವಿದೆಯು ಅಕ್ಟೋಬರ್​ 1 ರಂದು ದೆಹಲಿಗೆ ಹೋಗಿದ್ದು, ಅ.3 ರಂದು ದೆಹಲಿಯಿಂದ ಮುಂಬೈಗೆ ಹಿಂತಿರುಗುತ್ತಿದ್ದಳು. ವಿಮಾನವು ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ನಿಂತಾಗ ಆಕೆ ಓವರ್​ಹೆಡ್​ ಸ್ಟೋರೇಜ್​ನಿಂದ ತನ್ನ ಹ್ಯಾಂಡ್​ಬ್ಯಾಗ್​ ತೆಗೆದುಕೊಳ್ಳುತ್ತಿದ್ದಳು. ಆಗ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಆರೋಪಿಯು ನಟಿಯ ಸೊಂಟ ಹಿಡಿದು ತನ್ನೆಡೆಗೆ ಎಳೆದುಕೊಂಡ ಎನ್ನಲಾಗಿದೆ.
ಇದನ್ನೂ ಓದಿ:ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕೆಲ್ ಸ್ಲೇಟರ್ ಬಂಧನ
ಈ ಬಗ್ಗೆ ತಕ್ಷಣ ವಿಮಾನದ ಸಿಬ್ಬಂದಿಗೆ ತಿಳಿಸಿದಾಗ, ಅವರು ಆ ವ್ಯಕ್ತಿಯನ್ನು ಪಕ್ಕಕ್ಕೆ ಬಂದು ನಿಲ್ಲಲು ಹೇಳಿದ್ದರು. ನಂತರ ಈಮೇಲ್​ ಮೂಲಕ ಏರ್​ಲೈನ್ಸ್​​ಗೆ ದೂರು ನೀಡಿದ ನಟಿಯು, ವಿಮಾನ ನಿಲ್ದಾಣದಿಂದ ಹೊರಬಂದ ನಂತರ ಸಹಾರ್​ ಪೊಲೀಸ್​ ಠಾಣೆಯಲ್ಲೂ ಲಿಖಿತ ದೂರು ಸಲ್ಲಿಸಿದ್ದಳು.
ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ವಿಮಾನದ ಪ್ರಯಾಣಿಕರ ಮಾಹಿತಿ ಪಡೆದು, ನಟಿಯ ಸೀಟಿನ ಆಸುಪಾಸಿನಲ್ಲಿ ಕುಳಿತಿದ್ದವರ ಫೋಟೋಗಳನ್ನು ತರಿಸಿಕೊಂಡರು. ಸಂತ್ರಸ್ತ ನಟಿಯು ಆರೋಪಿಯನ್ನು ಗುರುತು ಹಿಡಿಯಲಾಗಿ ಆತನನ್ನು ಅ.14 ರಂದು ಪೊಲೀಸ್​ ಠಾಣೆಗೆ ಕರೆಸಿ, ವಿಚಾರಣೆಯ ನಂತರ ಬಂಧಿಸಲಾಯಿತು ಎನ್ನಲಾಗಿದೆ.(ಏಜೆನ್ಸೀಸ್)
ಯಾವುದೇ ಮಕ್ಕಳಿಗೆ ಶಾಲೆಯಲ್ಲಿ ಸೋಂಕು ತಗುಲಿಲ್ಲ: ಶಿಕ್ಷಣ ಸಚಿವ ನಾಗೇಶ್​

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್​ ರಾಮ್​ ರಹೀಂಗೆ ಜೀವಾವಧಿ ಶಿಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
