ಅಗರ್​​ತಲಾ:ಇತ್ತೀಚೆಗಷ್ಟೇ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊರ್ವ ತುರ್ತು ನಿರ್ಗಮನದ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ್ದು, ದೂರಿನ ಆಧಾರದ ಮೇರೆಗೆ ಪೊಲೀಸರು ಆತನನ್ನು ಬಂಧಿಸಿದ್ದರು. ಇದೀಗ ಆತ ಡೋರ್​ ತೆಗೆಯಲು ಇದ್ದ ಬಲವಾದ ಕಾರಣವೇನು ಎಂಬುದನ್ನು ವಿಚಾರಣೆ ನಡೆಸಿದ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಡೇಟಿಂಗ್​​​ ​​ಆ್ಯಪ್​​​ನಲ್ಲಿ ಬೆಂಗಳೂರು ಮಹಿಳೆಯ ವಿಚಿತ್ರ ಪ್ರೊಪೈಲ್​; ನಾನು ಎದುರಿಸುತ್ತಿರುವ ​​​ಸಮಸ್ಯೆಯನ್ನ ಬಗೆಹರಿಸಿದ್ರೆ ನನ್ನನ್ನ ಡೇಟ್​​ಗೆ ಕರೆದುಕೊಂಡು ಹೋಗಬಹುದು ..!
ಘಟನೆಯ ವಿವರ:180 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ 6E-457 ಇಂಡಿಗೋ ವಿಮಾನ ಗುರುವಾರ (ಸೆ.21) ಗುವಾಹಟಿಯಿಂದ ಅಗರ್​​ತಲಾಗೆ ಪ್ರಯಾಣಿಸುತ್ತಿತ್ತು. ವಿಮಾನವು ಪ್ರಯಾಣಿಸುತ್ತಿದ್ದ ವೇಳೆ ತುರ್ತು ಬಾಗಿಲಿನ ಪಕ್ಕದಲ್ಲಿ ಕುಳಿತ್ತಿದ್ದ ವ್ಯಕ್ತಿಯೊಬ್ಬ ಏಕಾಏಕಿ ಅದನ್ನು ತೆರೆಯಲು ಪ್ರಯತ್ನಿಸಿದ್ದ. ಆತನ ಪಕ್ಕದಲ್ಲಿದ್ದ ಸಹ ಪ್ರಯಾಣಿಕರೊಬ್ಬರು ತಡೆಯಲು ಯತ್ನಿಸಿದರೂ, ಬಾಗಿಲು ತೆರೆಯಲು ತನ್ನ ಪ್ರಯತ್ನವನ್ನು ನಿರಂತರವಾಗಿ ಮುಂದುವರಿಸಿದ್ದ ಎಂದು ಹೇಳಲಾಗಿದೆ.
ಫ್ಲೈಟ್ ಅಟೆಂಡೆಂಟ್‌ಗಳು ಕೂಡಲೇ ಆತನನ್ನು ತಡೆಯುವ ಪ್ರಯತ್ನ ಮಾಡಿದ್ದು, ಕಿಟಿಕಿಯಿಂದ ಸೀಟಿನ ಪಕಕ್ಕೆ ಎಳೆದು ಕೂರಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಯಿತು. ಪ್ರಯಾಣಿಕನನ್ನು ವಿಮಾನವನ್ನು ಅಗರ್ತಲಾದಲ್ಲಿ ಲ್ಯಾಂಡಿಂಗ್​ ಮಾಡಿದ ಬಳಿಕ ಪೊಲೀಸರು ವ್ಯಕ್ತಿಯನ್ನು ಬಂಧಿಸಿದರು. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆತ ಮಾದಕ ಮಾತ್ರೆ ಸೇವಿಸಿರುವುದು ಬೆಳಕಿಗೆ ಬಂದಿತ್ತು.
ಇದನ್ನೂ ಓದಿ:ಅಳಿವಿನಂಚಿನಲ್ಲಿ ಶವದ ಹೂವು ಖ್ಯಾತಿಯ ‘ರಾಫ್ಲೇಷಿಯಾ’, ಕಾರಣ ತಿಳಿಸಿದ ವಿಜ್ಞಾನಿಗಳು…
ಆದ್ರೆ, ಇದೀಗ ಸುದೀರ್ಘ ವಿಚಾರಣೆಯ ನಂತರ ಹೊರಬಂದ ವರದಿಯ ಪ್ರಕಾರ, ಗುವಾಹಟಿ-ಅಗರ್ತಲಾ ಇಂಡಿಗೋ ವಿಮಾನದ ತುರ್ತು ಬಾಗಿಲು ತೆರೆಯಲು ಪ್ರಯತ್ನಿಸಿದ ವ್ಯಕ್ತಿ ಖಿನ್ನತೆಯಿಂದ ಬಳಲುತ್ತಿದ್ದರು ಮತ್ತು ವಿಮಾನದಿಂದ ಜಿಗಿಯಲು ನಿರ್ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪಶ್ಚಿಮ ತ್ರಿಪುರಾದ ಜಿರಾನಿಯಾ ಮೂಲದ ಬಿಸ್ವಜಿತ್ ದೇಬಾತ್ (41) ವಿಮಾನದೊಳಗಿದ್ದ ನೂರಾರು ಪ್ರಯಾಣಿಕರ ಜೀವಕ್ಕೆ ಅಪಾಯ ತಂದೊಡ್ಡಿದ್ದರು. ಇದರೊಟ್ಟಿಗೆ ವಿಮಾನದ ಸಿಬ್ಬಂದಿಗಳೊಂದಿಗೆ ವಾಗ್ವಾದಕ್ಕಿಳಿದ ಕಾರಣಕ್ಕಾಗಿ ಅವರನ್ನು ಬಂಧಿಸಲಾಗಿದೆ ಎಂದು ಅಗರ್ತಲಾ ವಿಮಾನ ನಿಲ್ದಾಣ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ಅಭಿಜಿತ್ ಮಂಡಲ್ ತಿಳಿಸಿದ್ದಾರೆ,(ಏಜೆನ್ಸೀಸ್).
ಮಹಿಳಾ ಪೊಲೀಸ್​ ಮೇಲೆ ದಾಳಿ ಮಾಡಿದ್ದ ವ್ಯಕ್ತಿ ಎನ್​ಕೌಂಟರ್​ನಲ್ಲಿ ಬಲಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − fifteen =
Remember me
