ಹೈದರಾಬಾದ್​:ಕಾನೂನು ಬಾಹಿರವಾಗಿ, ಒಂದು ಲಕ್ಷಕ್ಕೆ ಮಾರಾಟವಾಗಿದ್ದ ನವಜಾತ ಶಿಶುವನ್ನು ಪೊಲೀಸರು ರಕ್ಷಿಸಿದ ಘಟನೆ ಹೈದರಾಬಾದ್​ನ ನಚರಾಮ್​​ನಲ್ಲಿ ನಡೆದಿದೆ.ಶಿಶುವನ್ನು ಮಾರಾಟ ಮಾಡಿದ ದಂಪತಿ ಹಾಗೂ ಅದಕ್ಕೆ ಸಹಾಯ ಮಾಡಿದ ಮಧ್ಯವರ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಮೀನಾ ಎಂಬಾಕೆ ತನ್ನ ಮೊದಲ ಹಾಗೂ ಎರಡನೇ ಹೆರಿಗೆಯಲ್ಲಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಳು. ಆದರೆ ಆ ಇಬ್ಬರೂ ಹುಟ್ಟಿ ಕೆಲವೇ ದಿನಗಳಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಮೂರನೇ ಬಾರಿ ಮೀನಾ ಗರ್ಭಿಣಿಯಾದಾಗ ಮತ್ತೆ ಹೆಣ್ಣು ಮಗು ಆಗಿಬಿಟ್ಟರೆ, ಅದರ ಖರ್ಚು, ವೆಚ್ಚಗಳ ಬಗ್ಗೆ ಭಯಗೊಂಡು ನಾಲ್ಕು ತಿಂಗಳಾದಾಗಲೇ ಮಾರಲು ನಿರ್ಧರಿಸಿದರು. ಅದರಂತೆ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್​​ನಲ್ಲಿ ಕೆಲಸ ಮಾಡುತ್ತಿದ್ದ ಓರ್ವಳು ಮಗುವನ್ನು ಖರೀದಿಸಲು ಮುಂದೆ ಬಂದು, 1 ಲಕ್ಷ ರೂ.ಆಫರ್ ಮಾಡಿದರು.ಹಾಗೇ ಮೀನಾಗೆ ಹೆರಿಗೆಯಾಗುತ್ತಿದ್ದಂತೆ ಜಾನಕಿ ಒಂದು ಲಕ್ಷ ರೂ.ತಂದು, ಮಗುವನ್ನು ಕೊಡುವಂತೆ ಹೇಳಿದಳು. ಆದರೆ ಮೀನಾಗೆ ಈ ಬಾರಿ ಗಂಡು ಮಗು ಆಗಿದ್ದರಿಂದ ದಂಪತಿ ಮನಸು ಬದಲಿಸಿದ್ದರು. ನಾವು ಮಗುವನ್ನು ಕೊಡುವುದಿಲ್ಲ ಎಂದು ಜಾನಕಿಗೆ ಹೇಳಿದರು.ಇದನ್ನೂ ಓದಿ:ಮದ್ವೆಯಾಗಿ ವರ್ಷ ಕಳೆದಿಲ್ಲ ಮಾವನಿಂದಲೇ ಸೊಸೆ ಗರ್ಭಿಣಿ?: ಆ ಒಂದು ಮಾತಿಗೆ ಅತ್ತೆಯ ಹತ್ಯೆ!
ಇದರಿಂದ ಸಿಟ್ಟಿಗೆದ್ದ ಜಾನಕಿ, ಮಗುವನ್ನು ಕೊಡದೆ ಇದ್ದರೆ ಮುಂದೆ ಪರಿಣಾಮ ಭೀಕರವಾಗಿರುತ್ತದೆ. ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೆದರಿಸಿದರು. ಮೊದಲೇ ಬಡತನದಿಂದ ಬೇಯುತ್ತಿದ್ದ ಮೀನಾ ಮತ್ತು ಆಕೆಯ ಪತಿ ರಾಜೇಶ್ವರ್​ ಜಾನಕಿ ಬೆದರಿಕೆಗೆ ಹೆದರಿ ಮಗುವನ್ನು ಕೊಟ್ಟರು.  ಅದಾದ ಬಳಿಕ ರಾಚಕೊಂಡ ಠಾಣೆಯಲ್ಲಿ ದೂರು ದಾಖಲಿಸಿದರು. ಆದರೆ ಇದೀಗ ಪೊಲೀಸರು ದಂಪತಿ ಹಾಗೂ ಜಾನಕಿ ಮೂವರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
