ನವದೆಹಲಿ:ಕೋವಿಡ್​ ಸಾಂಕ್ರಾಮಿಕತೆಯ ದೈನಿಕ ಪ್ರಕರಣದಲ್ಲಿ ಇಳಿಮುಖವಾಗುತ್ತಿದ್ದು ಇದು ಸೋಂಕಿನ ಮೂರನೇ ಅಲೆಯ ಉತ್ತುಂಗದ ಅಂತ್ಯದ ಸೂಚನೆ ಎಂದು ಸರ್ಕಾರ ಗುರುವಾರ ಅಭಿಪ್ರಾಯಪಟ್ಟಿದೆ. ಕಳೆದ ವರ್ಷ ಕಾಡಿದ ಎರಡನೇ ಅಲೆಯ ಉತ್ತುಂಗದ ಸಮಯದಲ್ಲಿ ದೈನಿಕ ಕೇಸ್​ ಸಂಖ್ಯೆ ನಾಲ್ಕು ಲಕ್ಷವನ್ನೂ ದಾಟಿತ್ತು. ಲಾಂತರ ಜನರು ಬಲಿಯಾಗಿದ್ದರು. ಜನವರಿ 21ರಂದು 3,47,254 ಕೇಸ್​ಗಳು ದಾಖಲಾಗಿದ್ದು ಅದು ಮೂರನೇ ಅಲೆಯ ಉತ್ತುಂಗವಾಗಿತ್ತು. ಅಂದಿನಿಂದಲೂ ದೈನಿಕ ಪಾಸಿಟಿವ್​ ಪ್ರಮಾಣ ಕಡಿಮೆಯಾಗುತ್ತಲೇ ಬಂದಿದೆ.
1.72 ಲಕ್ಷ ಹೊಸ ಕೇಸ್​ಗುರುವಾರ ಭಾರತದಲ್ಲಿ ಸೋಂಕಿನ 1,72,433 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಭಾರತದ ಸೋಂಕಿತರ ಒಟ್ಟು ಸಂಖ್ಯೆ 4,18,03,318ಕ್ಕೆ ಏರಿದೆ. 1,008 ಜನರು ಈ ಅವಧಿಯಲ್ಲಿ ಮೃತಪಟ್ಟಿದ್ದು ಸಾವಿನ ಒಟ್ಟು ಸಂಖ್ಯೆ 4,98,983ಕ್ಕೆ ತಲುಪಿದೆ. ಬಹಳ ದಿನಗಳ ನಂತರ ಮರಣದ ದೈನಿಕ ಪ್ರಮಾಣ ನಾಲ್ಕಂಕಿ ದಾಟಿದೆ.
ವಸತಿ ರಹಿತರಿಗೆ ಲಸಿಕೆಯಾವುದೇ ಅಧಿಕೃತ ಗುರುತು ಪತ್ರಗಳಿಲ್ಲದ 77 ಲಕ್ಷ ವಸತಿ ರಹಿತರಿಗೆ ಕೋವಿಡ್​ ಲಸಿಕೆಯ ಮೊದಲ ಡೋಸ್​ ಹಾಗೂ 14.55 ಲಕ್ಷ ಜನರಿಗೆ ಎರಡೂ ಡೋಸ್​ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್​ಗೆ ತಿಳಿಸಿದೆ. ಆದರೆ, ಯಾವುದೇ ಗುರುತು ಪತ್ರ ಇಲ್ಲದ ಕೇವಲ 4.82 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆಯೆಂದು ಕೇಂದ್ರ ಸರ್ಕಾರ ಅಫಿಡವಿಟ್​ನಲ್ಲಿ ಹೇಳಿರುವುದನ್ನು ನ್ಯಾಯಮೂತಿರ್ಗಳಾದ ಡಿ.ವೈ. ಚಂದ್ರಚೂಡ್​, ಸೂರ್ಯ ಕಾಂತ್​ ಮತ್ತು ವಿಕ್ರಂ ನಾಥ್​ ನ್ಯಾಯ ಪೀಠ ಗಮನಕ್ಕೆ ತಂದಿತು.
ಸಾವು ತಗ್ಗಿಸಲು ನೆರವಾಗದ ಲಾಕ್​ಡೌನ್​ಕೋವಿಡ್​-19 ಸಾಂಕ್ರಾಮಿಕತೆಯ ನಿಯಂತ್ರಣಕ್ಕೆ ಹೇರಲಾದ ಲಾಕ್​ಡೌನ್​ ಈ ವ್ಯಾಧಿಯಿಂದ ಸಂಭವಿಸಿದ ಸಾವಿನ ಪ್ರಮಾಣವನ್ನು ಇಳಿಸಲು ಗಮನಾರ್ಹ ಪರಿಣಾಮ ಬೀರಿಲ್ಲ ಎನ್ನುವುದು ಹೊಸ ಅಧ್ಯಯನವೊಂದರಿಂದ ತಿಳಿದು ಬಂದಿದೆ. ಲಾಕ್​ಡೌನ್​ನಿಂದಾಗಿ ಆಥಿರ್ಕ ಪರಿಸ್ಥಿತಿ ಹದಗೆಟ್ಟಿತು ಹಾಗೂ ಸಾಮಾಜಿಕ ಸಮಸ್ಯೆಗಳು ಸೃಷ್ಟಿಯಾದವು ಅಷ್ಟೇ ಎಂದು ಅಧ್ಯಯನ ಅಭಿಪ್ರಾಯಪಟ್ಟಿದೆ. 2020ರಲ್ಲಿ ಸಾಂಕ್ರಾಮಿಕತೆಯ ಆರಂಭ ಟ್ಟದಲ್ಲಿ ಹೇರಲಾದ ಲಾಕ್​ಡೌನ್​ನಿಂದ ಸಾವಿನ ಪ್ರಮಾಣವನ್ನು ಶೇಕಡ 0.2ರಷ್ಟನ್ನು ಮಾತ್ರ ತಗ್ಗಿಸಲು ಸಾಧ್ಯವಾಗಿತ್ತು ಎಂದು ಸಂಶೋಧಕರು ತೋರಿಸಿಕೊಟ್ಟಿದ್ದಾರೆ. ಅಮೆರಿಕ ಮತ್ತು ಯುರೋಪ್​ನಲ್ಲಿ ಸಾವಿನ ಪ್ರಮಾಣದ ಮೇಲೆ ಲಾಕ್​ಡೌನ್​ ಬೀರಿದ ಪರಿಣಾಮ ತೀರಾ ಕಡಿಮೆ ಅಥವಾ ನಗಣ್ಯವೇ ಆಗಿತ್ತು ಎಂದವರು ಹೇಳಿದ್ದಾರೆ.
ಕೋವಿಡ್​ ಪತ್ತೆಗೆ ಹೊಸ ಸಾಧನಉಸಿರಾಟ ವಿಶ್ಲೇಷಣೆ ಆಧಾರದಲ್ಲಿ ಕರೊನಾ ಸೋಂಕಿರುವುದನ್ನು ಕೇವಲ ಐದು ನಿಮಿಷದಲ್ಲಿ ಪತ್ತೆ ಮಾಡಬಹುದಾದ ಸಾಧನವೊಂದನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಸಮ್ಮೇಳನ, ವಿವಾಹ ಸಮಾರಂಭ ಮುಂತಾದ ಜನರು ದೊಡ್ಡ ಸಂಖ್ಯೆಯಲ್ಲಿ ಸೇರುವ ಕಡೆಗಳಲ್ಲಿ ಸಾಮೂಹಿಕವಾಗಿ ಪರೀೆ ನಡೆಸಲು ಕೈಯಿಂದಲೇ ಹಿಡಿದು ನಿರ್ವಹಿಸಬಲ್ಲ ಈ ಸಾಧನ ನೆರವಾಗುತ್ತದೆ ಎಂದು ಎಸಿಎಸ್​ ನ್ಯಾನೊ ರ್ಜನಲ್​ನಲ್ಲಿ ಪ್ರಕಟವಾಗಿರುವ ವರದಿ ಹೇಳಿದೆ. ಈ ಸಾಧನವು ದೇಹದೊಳಗೆ ಯಾವುದೇ ಉಪಕರಣ ತೂರಿಸದೆ ಸೋಂಕು ಪತ್ತೆ ಮಾಡುವ ಸಾಮರ್ಥ್ಯ ಹೊಂದಿದೆ.
ಲಸಿಕೆ ವಂಚನೆ ವರದಿ ಆಧಾರರಹಿತಲಸಿಕೆ ಲಾನುಭವಿಗಳು ಎರಡೂ ಡೋಸ್​ ಲಸಿಕೆ ಪಡೆಯದೆಯೇ ಅವರು ಸಂಪೂರ್ಣ ಡೋಸ್​ ಪಡೆದಿದ್ದಾರೆ ಎಂದು ನೋಂದಾಯಿಸಲಾಗುತ್ತಿದೆ ಎಂಬ ವರದಿಗಳು ಆಧಾರ ರಹಿತ ಹಾಗೂ ದಾರಿ ತಪ್ಪಿಸುವಂಥದ್ದೆಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಸ್ಪಷ್ಟಪಡಿಸಿದೆ. “ಲಸಿಕೆ ವಂಚನೆ’ ಬಗ್ಗೆ ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಸರ್ಕಾರ ಉಲ್ಲೇಖಿಸಿ ಈ ವಿವರಣೆ ನೀಡಿದೆ. ಲಸಿಕೆ ಅಭಿಯಾನದ ದತ್ತಾಂಶಗಳನ್ನು ಆರೋಗ್ಯ ಕಾರ್ಯಕರ್ತರೇ ಕೋವಿನ್​ ವ್ಯವಸ್ಥೆಯಲ್ಲಿ ನಮೂದಿಸುತ್ತಾರೆನ್ನುವ ಪರಿಜ್ಞಾನವೂ ವರದಿಗಾರರಿಗೆ ಇದ್ದಂತಿಲ್ಲ ಎಂದು ಸಚಿವಾಲಯ ಹೇಳಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
