ನವದೆಹಲಿ:ಭಾರತದಲ್ಲಿ ಗುರುವಾರ ಕರೊನಾ ಸೋಂಕಿನ 2,364 ಹೊಸ ಪ್ರಕರಣಗಳು ದೃಢಪಟ್ಟಿವೆ ಹಾಗೂ 10 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಒಟ್ಟು ಸಂಖ್ಯೆ 4,31,29,563ಕ್ಕೆ ಏರಿದೆ.
ಒಟ್ಟು 5,24,303 ಮಂದಿ ಕೋವಿಡ್​ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಮರಣ ದರ ಶೇಕಡ 1.22 ಆಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 15,419ಕ್ಕೆ ಇಳಿದಿದ್ದು ಒಟ್ಟು ಸೋಂಕಿನ ಶೇಕಡ 0.04 ಆಗಿದೆ ಎಂದು ಸರ್ಕಾರ ವಿವರಿಸಿದೆ. ರಾಷ್ಟ್ರೀಯ ಚೇತರಿಕೆ ದರ ಶೇಕಡ 98.75 ಆಗಿದೆ. ಸಾಂಕ್ರಾಮಿಕತೆಯ ದೈನಿಕ ಪಾಸಿಟಿವಿಟಿ ದರ ಶೇ. 0.50 ಹಾಗೂ ಸಾಪ್ತಾಹಿಕ ಪಾಸಿಟಿವಿಟಿ ದರ ಶೇ. 0.55 ಆಗಿದೆ ಎಂದು ಸಚಿವಾಲಯ ಹೇಳಿದೆ.ದೇಶದಲ್ಲಿ ಇದುವರೆಗೆ 4,25,89,841 ರೋಗಿಗಳು ಗುಣಮುಖರಾಗಿದ್ದಾರೆ. ದೇಶದಾದ್ಯಂತ ನಡೆಸಲಾಗುತ್ತಿರುವ ಕೋವಿಡ್​ ತಡೆ ಲಸಿಕೆ ಅಭಿಯಾನದಡಿ ಇದುವರೆಗೆ ನೀಡಲಾದ ಲಸಿಕೆ ಪ್ರಮಾಣ 191.79 ಕೋಟಿ ಡೋಸ್​ ದಾಟಿದೆ.
ಗುರುವಾರ ವರದಿಯಾದ 10 ಸಾವಿನ ಪೈಕಿ ಆರು ಕೇರಳದಲ್ಲಿ ದಾಖಲಾಗಿದೆ. ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − nine =
Remember me
