ನವದೆಹಲಿ :ಕರೊನಾ ಮೂರನೇ ಅಲೆಯು ಮುಂದಿನ ಆರರಿಂದ ಎಂಟು ವಾರಗಳಲ್ಲಿ ಅಪ್ಪಳಿಸಬಹುದು ಎಂದು ದೆಹಲಿಯ ಆಲ್​ ಇಂಡಿಯ ಇನ್ಸ್​ಟಿಟ್ಯೂಟ್ ಆಫ್​ ಮೆಡಿಕಲ್ ಸೈನ್ಸಸ್​(ಏಮ್ಸ್) ನಿರ್ದೇಶಕ ಡಾ. ರಣದೀಪ್ ಗುಲೇರಿಯ ಅವರು ಎಚ್ಚರಿಸಿದ್ದಾರೆ. ಈ ಮುನ್ನ ಸಾಂಕ್ರಾಮಿಕರೋಗತಜ್ನರು ಕರೊನಾ ಮೂರನೇ ಅಲೆ ಅನಿವಾರ್ಯ ಮತ್ತು ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಆರಂಭವಾಗಲಿದೆ ಎಂದು ಹೇಳಿದ್ದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಗುಲೇರಿಯ, “ಕೋವಿಡ್​-ಸೂಕ್ತ ನಡವಳಿಕೆಯನ್ನು ಪಾಲಿಸದಿದ್ದರೆ 6-8 ವಾರಗಳಲ್ಲಿ 3ನೇ ಅಲೆ ಸಂಭವಿಸಬಹುದು. ಲಸಿಕಾಕರಣವು ಉತ್ತಮ ಗತಿ ಗಳಿಸುವವರೆಗೆ ನಾವು ಮತ್ತೊಂದು ದೊಡ್ಡ ಕರೊನಾ ಅಲೆ ಉಂಟಾಗದಂತೆ ತಡೆಯಲು ಪೂರ್ಣ ಪ್ರಯತ್ನ ಮಾಡಬೇಕು” ಎಂದಿದ್ದಾರೆ.
ಇದನ್ನೂ ಓದಿ:ಬಿಬಿಕೆ 2ನೇ ಇನ್ನಿಂಗ್ಸ್​ನಲ್ಲಿ ಈ ಸ್ಪರ್ಧಿಯದ್ದೇ ಹವಾ ಎಂದ ನೆಟ್ಟಿಗರು: ಟ್ರೋಫಿ ಗೆಲುವುದು ಖಚಿತವಂತೆ!
ದೊಡ್ಡ ಪ್ರಮಾಣದ ಜನಸಂಖ್ಯೆಗೆ ಲಸಿಕೆ ನೀಡಲಾಗುವ ತನಕ, ಕರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಗಂಭೀರತೆಯಿಂದ ಪಾಲಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ. ಸಾಂಕ್ರಾಮಿಕವನ್ನು ನಿಯಂತ್ರಿಸುವ ಕ್ರಮದ ಬಗ್ಗೆ ಮಾತನಾಡಿದ ಅವರು, ಆರ್ಥಿಕ ವ್ಯವಸ್ಥೆಯ ಮೇಲೆ ವಿಪರೀತ ಪ್ರಭಾವ ಹೊಂದಿದ ರಾಷ್ಟ್ರಮಟ್ಟದ ಲಾಕ್​ಡೌನ್​ ಪರಿಹಾರವಲ್ಲ. ಕೋವಿಡ್​ ಹಾಟ್​ಸ್ಪಾಟ್​ಗಳನ್ನು ಗುರುತಿಸಿ, ಸೋಂಕಿನಲ್ಲಿ ತೀವ್ರ ಏರಿಕೆ ಕಂಡಾಗ ಮಾತ್ರ ಲಾಕ್​ಡೌನ್​ ಮಾಡಬೇಕಾದೀತು ಎಂದಿದ್ದಾರೆ.(ಏಜೆನ್ಸೀಸ್)
ಮತ್ತೆ ಶಾಲೆ ಯಾವಾಗ ತೆರೆಯುತ್ತೆ ? ಕೇಂದ್ರ ಸರ್ಕಾರ ಏನು ಹೇಳುತ್ತೆ ನೋಡಿ

ಹೌಸಿಂಗ್​ ಸೊಸೈಟಿಯಲ್ಲಿ ಅನಧಿಕೃತ ಲಸಿಕಾ ಕಾರ್ಯಕ್ರಮ : ನಾಲ್ವರ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
