ನವದೆಹಲಿ:ದೇಶದಲ್ಲಿನ ಕರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 4 ಲಕ್ಷಕ್ಕಿಂತ ಕಡಿಮೆಯಾಗಿದ್ದು, ವೈರಸ್​ನ ಆತಂಕವನ್ನು ಕಡಿಮೆಗೊಳಿಸಿದೆ. ಭಾರತದಲ್ಲಿ ಭಾನುವಾರ 33 ಸಾವಿರ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 96.78 ಲಕ್ಷಕ್ಕೆ ಏರಿಕೆಯಾಗಿದೆ. 390 ಮಂದಿ ಸಾವನ್ನಪು್ಪವುದರೊಂದಿಗೆ ಮೃತರ ಸಂಖ್ಯೆ 1.40 ಲಕ್ಷ ತಲುಪಿದೆ. ಈವರೆಗೆ 91.39 ಲಕ್ಷ ಸೋಂಕಿತರು ಚೇತರಿಸಿಕೊಂಡಿದ್ದಾರೆ. ವಿಶ್ವಾದ್ಯಂತ ಭಾನುವಾರ 7,500 ಮಂದಿ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 15.41 ಲಕ್ಷ ತಲುಪಿದೆ. 5.35 ಲಕ್ಷ ಹೊಸ ಪ್ರಕರಣಗಳೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 6.73 ಕೋಟಿ ತಲುಪಿದೆ. 4.65 ಕೋಟಿ ಸೋಂಕಿತರು ಈವರೆಗೆ ಗುಣಮುಖರಾಗಿದ್ದಾರೆ.
ಅನುಮತಿ ಕೋರಿದ ಸೆರಂ, ಭಾರತ್ ಬಯೋಟೆಕ್:ಆಸ್ಟ್ರಾಜೆನೆಕಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಪುಣೆಯ ಸೆರಂ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಅನುಮತಿ ಕೋರಿ ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯಕ್ಕೆ (ಡಿಸಿಜಿಐ) ಅರ್ಜಿ ಸಲ್ಲಿಸಿದೆ. ಭಾರತ್ ಬಯೋಟೆಕ್ ಕೂಡ ಅರ್ಜಿ ಸಲ್ಲಿಸಿದೆ. ಅಮೆರಿಕ ಮೂಲದ ಫೈಜರ್ ಸಂಸ್ಥೆ ಈಗಾಗಲೇ ತುರ್ತು ಬಳಕೆಗೆ ಭಾರತದ ಅನುಮತಿ ಕೋರಿದೆ, ಈ ಮೂರೂ ಅರ್ಜಿಗಳ ಬಗ್ಗೆ 2 ವಾರಗಳ ಒಳಗಾಗಿ ಡಿಸಿಜಿಐ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಆಸ್ಟ್ರಾಜೆನೆಕಾ ಸಂಸ್ಥೆಯೊಂದಿಗೆ ಸೆರಂ ಇನ್ಸ್​ಟಿಟ್ಯೂಟ್ ಲಸಿಕೆ ತಯಾರಿಸಲು ಒಪ್ಪಂದ ಮಾಡಿಕೊಂಡಿದ್ದು, ದೇಶದ ವಿವಿಧೆಡೆ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ.
ಕರೊನಾ ಲಸಿಕೆಗಾಗಿ ದೇಶವು ಹೆಚ್ಚು ಸಮಯ ಕಾಯಬೇಕಾಗಿಲ್ಲ. ಕಳೆದ ಕೆಲವು ದಿನಗಳಲ್ಲಿ ಅನೇಕ ವಿಜ್ಞಾನಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದಿದ್ದೇನೆ. ಕೆಲವು ವಾರಗಳಲ್ಲಿ ಔಷಧ ಲಭ್ಯವಾಗಲಿದೆ ಎಂದು ಭಾವಿಸುತ್ತೇನೆ.
|ನರೇಂದ್ರ ಮೋದಿಪ್ರಧಾನಮಂತ್ರಿ
ನಿಯಮ ಉಲ್ಲಂಘಿಸಿದರೆ ಪ್ರಬಂಧ ಬರೆಯಬೇಕು!:ಕರೊನಾ ನಿಯಮಗಳನ್ನು ಉಲ್ಲಂಘಿಸುವವರಿಗೆ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ವಿಚಿತ್ರ ಶಿಕ್ಷೆ ಜಾರಿಗೆ ತರಲಾಗಿದೆ. ಯಾರೂ ಕರೊನಾ ಮುನ್ನೆಚ್ಚರಿಕಾ ನಿಯಮಗಳನ್ನು ಉಲ್ಲಂಘಿಸುತ್ತಾರೋ ಅವರು ಕರೊನಾ ಕುರಿತು ಪ್ರಬಂಧ ಬರೆಯಬೇಕು. ಇಲ್ಲದಿದ್ದರೆ ಅವರನ್ನು ಬಯಲು ಜೈಲಾಗಿ ಪರಿವರ್ತಿಸಲಾಗಿರುವ ಕ್ಯಾಪ್ಟನ್ ರೂಪ್ ಸಿಂಗ್ ಕ್ರೀಡಾಂಗಣದಲ್ಲಿ ಇರಿಸಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 6 =
Remember me
