ಕರೊನಾ ವೈರಸ್ ವ್ಯಾಪಿಸುವುದನ್ನು ತಡೆಯುವ ಕ್ರಮವಾಗಿ ಲಾಕ್​ಡೌನ್ ಘೊಷಿಸಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ, ‘ಆರೋಗ್ಯ ಸೇತು’ ಮೊಬೈಲ್ ಆಪ್ ಡೌನ್​ಲೋಡ್ ಮಾಡಿಕೊಳ್ಳುವಂತೆ ದೇಶದ ಜನರಿಗೆ ಕರೆ ನೀಡಿದ್ದರು. ನಮ್ಮ ಸಮೀಪದಲ್ಲಿ ಕೋವಿಡ್-19 ಪಾಸಿಟಿವ್ ವ್ಯಕ್ತಿಗಳು ಇದ್ದಾರೆಯೇ ಎಂದು ಈ ಆಪ್ ಮೂಲಕ ತಿಳಿಯಬಹುದು.
ಆರೋಗ್ಯ ಸೇತು ಆಪ್ ಖಾಸಗಿತನದ ಉಲ್ಲಂಘನೆಗೆ ದಾರಿ ಮಾಡುತ್ತದೆ ಹಾಗೂ ಕಣ್ಗಾವಲು ಇಡಲು ನೆರವಾಗುತ್ತದೆ ಎಂಬುದು ಡಿಜಿಟಲ್ ಹಕ್ಕುಗಳ ತಜ್ಞರ ಅಭಿಪ್ರಾಯ. ಡಿಜಿಟಲ್ ಹಕ್ಕುಗಳ ಸಂಘಟನೆಯಾದ ಇಂಟರ್​ನೆಟ್ ಫ್ರೀಡಂ ಫೌಂಡೇಶನ್, ಈ ಆಪ್ ‘ಖಾಸಗಿ ಮಾಹಿತಿಯ ಗಣಿ’ ಎಂದು ವರ್ಣಿಸಿದೆ. ನಿಯಂತ್ರಣ ಕನಿಷ್ಠೀಕರಣ (ಮಿನಿಮೈಸೇಶನ್), ಕಟ್ಟುನಿಟ್ಟು ಉದ್ದೇಶದ ಮಿತಿ, ಪಾರದರ್ಶಕತೆ ಹಾಗೂ ಹೊಣೆಗಾರಿಕೆಯ ಅಂಶಗಳಿಗೆ ಅದು ಬದ್ಧವಾಗಿಲ್ಲ ಎನ್ನುವುದು ಅವರ ವಾದ. ಆದರೆ ಕೇಂದ್ರ ಸರ್ಕಾರ ಇದನ್ನು ತಳ್ಳಿಹಾಕಿದೆ. ಡೇಟಾವನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
5 ಕೋಟಿ ಡೌನ್​ಲೋಡ್
ಆಹಾರ, ಇನ್ನಿತರ ಸೇವಾ ಪೂರೈಕೆದಾರರಿಗೆ ಈ ಆಪನ್ನು ಕಡ್ಡಾಯಗೊಳಿಸಲಾಗಿದೆ. ಕೇಂದ್ರ ಸರ್ಕಾರದ ನೌಕರರಿಗೂ ಕಡ್ಡಾಯ. ದೇಶವ್ಯಾಪಿ ಲಾಕ್​ಡೌನ್ ತೆರವು ಮಾಡಿದ ನಂತರ ಸಾರ್ವಜನಿಕ ಸಾರಿಗೆಗಳಲ್ಲಿ ಮತ್ತು ವಿಮಾನ ನಿಲ್ದಾಣಗಳಲ್ಲಿ ಇದನ್ನು ಕಡ್ಡಾಯಗೊಳಿಸುವ ಸಂಭವವಿದೆ.
ಡೌನ್​ಲೋಡ್ ಬಳಿಕ ನಾವು ನೀಡುವ ಪ್ರತಿಕ್ರಿಯೆ ಆಧಾರದಲ್ಲಿ ಆ ವ್ಯಕ್ತಿಗೆ ಕೋವಿಡ್-19 ಸೋಂಕಿನ ಲಕ್ಷಣವಿರುವುದು ಕಂಡು ಬಂದರೆ ಆ ಮಾಹಿತಿ ಸರ್ಕಾರದ ಸರ್ವರ್​ಗೆ ರವಾನೆಯಾಗುತ್ತದೆ. ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಅಗತ್ಯವಿದ್ದರೆ ಐಸೋಲೇಷನ್ ಪ್ರಕ್ರಿಯೆ ಆರಂಭಿಸಲು ಇದರಿಂದ ಸರ್ಕಾರಕ್ಕೆ ನೆರವಾಗುತ್ತದೆ.
ಕೋಲ್ಕತಾದಲ್ಲಿ ಪಾನಮತ್ತರಾಗಿ ಜಾಲಿರೈಡ್​ ಹೊರಟವರು ತಲುಪಿದ್ದು ಎಲ್ಲಿಗೆ…?

ಟೆಸ್ಟ್ ನಂ.1 ಪಟ್ಟದಿಂದ ಕುಸಿದ ಭಾರತ ಐಸಿಸಿ ರ‍್ಯಾಂಕಿಂಗ್; ಏಕದಿನದಲ್ಲಿ ನಂ. 2, ಟಿ20ಯಲ್ಲಿ ನಂ. 3

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
