ನವದಹೆಲಿ:ಎಷ್ಟೇ ಹೇಳಿದರೂ ಜನರು ಕರೊನಾ ನಿಯಮಗಳನ್ನು ಉಲ್ಲಂಘಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಜನರಲ್ಲಿ ಸಮರ್ಪಕ ರೀತಿಯಲ್ಲಿ ಜಾಗೃತಿ ಮೂಡಿಸಲು ಇಲ್ಲೊಂದು ಕಡೆ ಯಮರಾಜನ ಮೊರೆ ಹೋಗಲಾಗಿದೆ. ಹೀಗಾಗಿ ಸ್ವತಃ ಯಮರಾಜನೇ ಬೀದಿಗಳಿದು ಜಾಗೃತಿ ಮೂಡಿಸಲಾರಂಭಿಸಿದ್ದಾನೆ.
ಹೌದು.. ಹೀಗೆ ವಿನೂತನ ರೀತಿಯಲ್ಲಿ ಕರೊನಾ ಕುರಿತು ಜಾಗೃತಿಯನ್ನು ಉತ್ತರಪ್ರದೇಶದ ಮೊರದಾಬಾದ್​ನಲ್ಲಿ ಮಾಡಲಾಗುತ್ತಿದೆ. ಇಲ್ಲಿ ಜನರು ಕರೊನಾ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಹೆಚ್ಚಾದ್ದರಿಂದ ಈ ಉಪಾಯ ಮಾಡಲಾಗಿದೆ.
ಇದನ್ನೂ ಓದಿ:ನಿಮ್ಮೂರಿನ ಇನ್​ಸ್ಪೆಕ್ಟರ್​ ಬದಲಾಗಿದ್ದಾರಾ ನೋಡಿಕೊಳ್ಳಿ: 18 ಡಿವೈಎಸ್‌ಪಿ, 100 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ; ಇಲ್ಲಿದೆ ಪೂರ್ತಿ ಪಟ್ಟಿ
ಕಲಾವಿದನೊಬ್ಬನಿಗೆ ಯಮರಾಜನ ವೇಷ ತೊಡಿಸಿ, ಯಮನ ವಾಹನ ಕೋಣದ ಸಮೇತ ಆತನನ್ನು ಬೀದಿಗಿಳಿಸಿ ಜಾಗೃತಿ ಮೂಡಿಸುವಂತೆ ಮಾಡಲಾಗಿದೆ. ಮಾತ್ರವಲ್ಲ ಈ ಯಮರಾಜನ ಕೈಗೆ ಪ್ಲಕಾರ್ಡ್​ವೊಂದನ್ನೂ ಕೊಡಲಾಗಿದೆ. ಅದರಲ್ಲಿ, ‘ಭೂವಾಸಿಗಳೇ.. ದಯವಿಟ್ಟು ನಮ್ಮ ವರ್ಕ್​ಲೋಡ್ ಹೆಚ್ಚಿಸಬೇಡಿ. ಮಾಸ್ಕ್ ಹಾಕಿಕೊಳ್ಳಿ, ಅಂತರ ಕಾಪಾಡಿಕೊಳ್ಳಿ.. ಇಲ್ಲದಿದ್ದರೆ ನಾನೇ ಬರುತ್ತೇನೆ, ನಾನೇ ಯಮ..’ ಎಂಬುದನ್ನು ಅದರ ಮೇಲೆ ಬರೆಸಲಾಗಿದೆ. ಒಟ್ಟಿನಲ್ಲಿ ಜನರಿಗೆ ಹೆದರಿಸಿಯಾದರೂ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. (ಏಜೆನ್ಸೀಸ್)
ಇದನ್ನೂ ಓದಿ:ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!
Moradabad: A local artist, dressed as Yamraj, creats awareness among people about#COVID19pandemic, urging them to wear a mask and observe social distancing.pic.twitter.com/xeZd4fbbhE
— ANI UP/Uttarakhand (@ANINewsUP)April 9, 2021

18 ವರ್ಷ ಆದ್ರೆ ಸಾಕು- ಯಾವ ಧರ್ಮವನ್ನಾದ್ರೂ ಆಯ್ಕೆ ಮಾಡಿಕೊಳ್ಳಬಹುದು ಎಂದ ಸುಪ್ರೀಂಕೋರ್ಟ್​

ಈಗ ಮಾಡಿರೋದ್ರಲ್ಲಿ ಲೋಪವಿದೆಯಾ ಹೇಳಿ… ಯಾರ‍್ಯಾರದೋ ಮಾತು ಕೇಳಬೇಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
