ನವದೆಹಲಿ:ದೇಶಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವ (ಆಜಾದಿ ಕಾ ಅಮೃತ ಮಹೋತ್ಸವ್) ನಡೆಯುತ್ತಿದೆ. ಸ್ವಾತಂತ್ರ್ಯ ಪಡೆದು 75 ವರ್ಷ ಸಂದಿದ್ದನ್ನು ಉತ್ಸವವಾಗಿ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಕೋವಿಡ್​ ಬೂಸ್ಟರ್ ಡೋಸ್​ಗೂ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಅದು ಕೂಡ 75 ದಿನಗಳ ನಡೆಯಲಿದೆ.
ಜುಲೈ 15ರಿಂದಲೇ ಬೂಸ್ಟರ್ ಡೋಸ್ ಅಭಿಯಾನ 75 ದಿನ ನಡೆಯಲಿದ್ದು, ಅಂದಿನಿಂದ ಎಲ್ಲ ಸರ್ಕಾರಿ ಲಸಿಕೀಕರಣ ಕೇಂದ್ರಗಳಲ್ಲಿ 18ರಿಂದ 59 ವರ್ಷದವರೆಗಿನ ಎಲ್ಲರೂ ಉಚಿತವಾಗಿ ಬೂಸ್ಟರ್ ಡೋಸ್ ಪಡೆಯಬಹುದು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಮತ್ತೊಂದೆಡೆ ಬೂಸ್ಟರ್ ಡೋಸ್ ಪಡೆಯಲು ವಿಧಿಸಲಾಗಿದ್ದ ಅಂತರವನ್ನು ಕೂಡ ಕೇಂದ್ರ ಆರೋಗ್ಯ ಸಚಿವಾಲಯ ತಗ್ಗಿಸಿದೆ. ಎರಡನೇ ಡೋಸ್ ತೆಗೆದುಕೊಂಡ 9 ತಿಂಗಳ ನಂತರ ಬೂಸ್ಟರ್ ಡೋಸ್ ತೆಗೆದುಕೊಳ್ಳಬಹುದು ಎಂದು ಮೊದಲು ಹೇಳಲಾಗಿತ್ತು. ಆದರೆ ಇದೀಗ ಎರಡನೇ ಡೋಸ್ ಪಡೆದು ಆರು ತಿಂಗಳಾಗಿದ್ದರೆ ಸಾಕು, ಬೂಸ್ಟರ್​ ಡೋಸ್ ಪಡೆಯಬಹುದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಕಾರು ಚಲಾಯಿಸುತ್ತಿರುವಾಗಲೇ ಹೃದಯಾಘಾತ; ಹೊಲಕ್ಕೆ ನುಗ್ಗಿದ ವಾಹನ, 29 ವರ್ಷದ ಇಂಜಿನಿಯರ್ ಸಾವು..
ಫ್ರೀ ಊಟ, ಫ್ರೀ ಟಿಕೆಟ್.. ಡೆಲಿವರಿ ಬಾಯ್ಸ್​ಗೆ ಭಾರಿ ಆಫರ್!; ಅನಾವರಣ ಆಯ್ತು ಸಂಕಷ್ಟಗಳ ಸರಮಾಲೆ..


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
