ನವದೆಹಲಿ:ಭಾರತದಿಂದ ವಿದೇಶಗಳಿಗೆ ತೆರಳುವ ಭಾರತೀಯರ ಅನುಕೂಲಕ್ಕಾಗಿ ಕೋವಿಡ್​ ಲಸಿಕೆಯ ಎರಡನೇ ಹಾಗೂ ಮುನ್ನೆಚ್ಚರಿಕೆ (ಬೂಸ್ಟರ್​) ಡೋಸ್​ ನಡುವಿನ ಅಂತರವನ್ನು ಈಗಿರುವ ಒಂಬತ್ತು ತಿಂಗಳಿಂದ ಆರು ತಿಂಗಳಿಗೆ ಇಳಿಸುವ ಸಾಧ್ಯತೆಯಿದೆ. ವಿಶೇಷವಾಗಿ, ಬೂಸ್ಟರ್​ ಡೋಸ್​ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿರುವ ದೇಶಗಳಿಗೆ ಪ್ರಯಾಣಿಸುವ ಭಾರತೀಯರ ಸುಗಮ ಪ್ರಯಾಣಕ್ಕಾಗಿ ಈ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.
ಬೂಸ್ಟರ್​ ಡೋಸ್​ಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಪರಿಶೀಲಿಸುತ್ತಿರುವ ಸರ್ಕಾರದ ತಜ್ಞರ ಸಮಿತಿಯೊಂದು ಈ ವಿಚಾರವನ್ನು ಚರ್ಚಿಸಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿ ಅನ್ವಯ ಪ್ರಸ್ತುತ ಎರಡನೇ ಹಾಗೂ ಮೂರನೇ ಬೂಸ್ಟರ್​ ಡೋಸ್​ ನಡುವಿನ ಅಂತರ ಒಂಬತ್ತು ತಿಂಗಳು, ಅಂದರೆ 39 ವಾರವಾಗಿದೆ. ನಂತರ ಅದನ್ನು ಚುನಾವಣಾ ಕಾರ್ಯನಿರತ ಅಧಿಕಾರಿಗಳಿಗಾಗಿ ಪರಿಷ್ಕರಿಸಿ ಮೂರು ತಿಂಗಳಿಗೆ ಇಳಿಸಲಾಗಿತ್ತು.
ಚೀನಾದಲ್ಲಿ ಬಲವಂತದ ಟೆಸ್ಟ್​:“ಶೂನ್ಯ & ಕೋವಿಡ್​’ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಜಿದ್ದಿಗೆ ಬಿದ್ದಿರುವ ಚೀನಾ, ನಾಗರಿಕರಿಗೆ ಬಲವಂತದಿಂದ ಕರೊನಾ ಪರೀೆ ನಡೆಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳನ್ನು ಬಲವಂತವಾಗಿ ನೆಲದಲ್ಲಿ ಮಲಗಿಸಿ ಕೈಕಾಲು ಹಿಡಿದುಕೊಂಡು ಟೆಸ್ಟ್​ ಮಾಡುತ್ತಿರುವ ಒಂದು ವಿಡಿಯೋ ವೈರಲ್​ ಆಗಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಚೀನಾದ ಪ್ರಜೆಗಳು ನಿಜವಾದ ಕರೊನಾ ವ್ಯಾಧಿಗಿಂತ ಅದನ್ನು ಕಟ್ಟಿ ಹಾಕಲು ಹೇರಲಾಗಿರುವ ಲಾಕ್​ಡೌನ್​ ಮತ್ತು ಇತರ ರ್ನಿಬಂಧಗಳಿಗೆ ಹೆಚ್ಚು ಭಯಪಡುತ್ತಾರೆ ಎನ್ನುವುದಕ್ಕೆ ಶಾಂಘೈ ಮತ್ತಿತರ ಪ್ರದೇಶಗಳಿಂದ ಬರುತ್ತಿರುವ ವರದಿಗಳು ಸಾಯಾಗಿವೆ. ಕರೊನಾ ಪರೀಕ್ಷಾ ಕೇಂದ್ರವೊಂದರಲ್ಲಿ ಪುರುಷನೊಬ್ಬ ಮಹಿಳೆಯನ್ನು ನೆಲದ ಮೇಲೆ ಅದುಮಿ ಹಿಡಿದು ಪರೀಕ್ಷೆ ನಡೆಸುವ ದೃಶ್ಯ ಟ್ವಿಟರ್​ನಲ್ಲಿ ವೈರಲ್​ ಆಗಿದ್ದು ನೆಟ್ಟಿಗರು ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಇದೊಂದು ಅಸಹನೀಯ ದುರಂತವಾಗಿದೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ಮಾನವ ಹಕ್ಕುಗಳ ಉಲ್ಲಂನೆಕರೊನಾ ನಿಯಂತ್ರಣ ನೆಪದಲ್ಲಿ ಚೀನಾದಲ್ಲಿ ವ್ಯಾಪಕವಾಗಿ ಮಾನವ ಹಕ್ಕುಗಳ ಉಲ್ಲಂನೆ ಆಗುತ್ತಿದೆ ಎಂಬ ಆರೋಪ ಕೇಳಿಬರತೊಡಗಿದೆ. ನಿಯಮ ಪಾಲನೆಗೆ ತಪು$್ಪವ ಜನರನ್ನು ಥಳಿಸುವುದು, ಜನರು ಹೊರಗೆ ಬಾರದಂತೆ ಮನೆಗಳ ಬಾಗಿಲುಗಳನ್ನು ವೆಲ್ಡ್​ ಮಾಡುವುದು, ಕಬ್ಬಿಣದ ಗೇಟ್​ ಅಳವಡಿಸುವುದು ಇವೇ ಮುಂತಾದ ಕ್ರಮಗಳಿಗೆ ಅಧಿಕಾರಿಗಳು ಮುಂದಾಗಿರುವುದು ಜನರ ಅಸಹನೆಯ ಕಟ್ಟೆಯೊಡೆಯಲು ಕಾರಣವಾಗಿದೆ. ಶ್ವೇತವಸ್ತ್ರಧಾರಿ ವೈದ್ಯಕಿಯ ಸಿಬ್ಬಂದಿ ಜನರನ್ನು ಹೊಡೆದು ಕರೆದುಕೊಂಡು ಹೋಗುವುದೇ ಮುಂತಾದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಕೋವಿಡ್​ ಸಂತ್ರಸ್ತ ಮಕ್ಕಳಿಗೆ ಕೆವಿಯಲ್ಲಿ ಕಲಿಕೆಗೆ ಅವಕಾಶನವದೆಹಲಿ: ಕೇಂದ್ರ ಸರ್ಕಾರದ ನಿರ್ದೇಶನಾನುಸಾರ ಕೇಂದ್ರೀಯ ವಿದ್ಯಾಲಯಗಳಲ್ಲಿ ಈ ಬಾರಿ ಕೋವಿಡ್​ನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಪ್ರವೇಶಾವಕಾಶ ಸಿಗಲಿದೆ. ಇಂತಹ ವಿದ್ಯಾರ್ಥಿಗಳ ಶುಲ್ಕವನ್ನು ಪಿಎಂ ಕೇರ್ಸ್​ ಫಾರ್​ ಚಿಲ್ಡ್ರನ್​​ ನಿಧಿಯಿಂದ ಭರಿಸಲಾಗುತ್ತದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಈ ಪ್ರವೇಶಾವಕಾಶ ಲಭ್ಯವಿದೆ. ಇಂತಹ ಮಕ್ಕಳಿಗೆ 23 ವರ್ಷ ತನಕ ಅವರ ಶಿಕ್ಷಣಕ್ಕೆ ಹಣಕಾಸಿನ ನೆರವನ್ನು ಸರ್ಕಾರ ನೀಡಲಿದೆ. ಒಂದನೇ ತರಗತಿಯಿಂದ 12ನೇ ತರಗತಿ ತನಕ ಇವರಿಗೆ ಉಚಿತ ಶಿಕ್ಷಣ ಸಿಗಲಿದ್ದು, ವಿದ್ಯಾಲಯ ವಿಕಾಸ ನಿಧಿ ಶುಲ್ಕ, ಟ್ಯೂಷನ್​ ಶುಲ್ಕದಿಂದ ವಿನಾಯಿತಿ ಸಿಗಲಿದೆ.
ಡಬ್ಲ್ಯುಎಚ್​ಒ ವರದಿಗೆ ಭಾರತ ಆಕ್ಷೇಪಭಾರತದಲ್ಲಿ 2020 ಜನವರಿ 1ರಿಂದ 2021 ಡಿಸೆಂಬರ್​ 31ರ ನಡುವೆ, ಸರ್ಕಾರ ವರದಿ ಮಾಡಿರುವುದಕ್ಕಿಂತ 47 ಲಕ್ಷ ಅಧಿಕ ಜನರು ಕರೊನಾ ವ್ಯಾಧಿಗೆ ಬಲಿಯಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಗುರುವಾರ ಹೇಳಿದೆ. ದುರ್ಬಲ ಆರೋಗ್ಯ ವ್ಯವಸ್ಥೆಯಿರುವ ದೇಶಗಳಲ್ಲಿ ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ಹೆಚ್ಚು ಹಣ ಹೂಡುವ ಅಗತ್ಯದತ್ತ ಬೆಟ್ಟು ಮಾಡುತ್ತದೆ ಎಂದು ಡಬ್ಲ್ಯುಎಚ್​ಒ ಮಹಾ&ನಿರ್ದೇಶಕ ಟೆಡ್ರೋಸ್​ ಅಧಾನಂ ಘೇಬ್ರಿಯೆಸಸ್​ ಹೇಳಿದ್ದಾರೆ. ಜಗತ್ತಿನಾದ್ಯಂತ ಸರ್ಕಾರಗಳು ಹೇಳಿರುವುದಕ್ಕಿಂತ ಮೂರು ಪಟ್ಟು ಜಾಸ್ತಿ ಜನರು, ಅಂದರೆ 1.49 ಕೋಟಿ ಮಂದಿ ಮೃತಪಟ್ಟಿದ್ದಾರೆ ಎಂದು ಡಬ್ಲ್ಯುಎಚ್​ಒ ಹೇಳಿದೆ. ಈ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಸಾವಿನ ಸಂಖ್ಯೆ ಲೆಕ್ಕ ಹಾಕಲು ಡಬ್ಲ್ಯುಎಚ್​ಒ ಅನುಸರಿಸುವ ಗಣಿತೀಯ ಮಾಡೆಲ್​ಗೂ ಆಕ್ಷೇಪ ದಾಖಲಿಸಿದೆ. ಡಬ್ಲ್ಯುಎಚ್​ಒದ “ಅಂಕಿಸಂಖ್ಯೆ ವಿಚಾರದಲ್ಲಿ ದೋಷ ಇದೆ ಹಾಗೂ ವೈಜ್ಞಾನಿಕವಾಗಿ ಪ್ರಶ್ನಾರ್ಹವಾಗಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
