ನವದೆಹಲಿ:ಕರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ನಡುವೆಯೇ ಭಾರತದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿಯಲ್ಲಿಯೂ ಈ ವೈರಸ್‌ ಹೆಚ್ಚುತ್ತಲೇ ಸಾಗಿದೆ.ಕಳೆದ 24 ಗಂಟೆಗಳಲ್ಲಿ 53 ಮಂದಿ ಯೋಧರಿಗೆ ಸೋಂಕು ತಗುಲಿರುವುದು ವರದಿಯಾಗಿದೆ. ಇವರಲ್ಲಿ 29 ಕೇಸ್‌ಗಳು ಒಡಿಶಾ ಒಂದರಿಂದಲೇ ಪತ್ತೆಯಾಗಿವೆ.
ಈ ಮೂಲಕ ಅತಿದೊಡ್ಡ ಕಾವಲು ಪಡೆಯಾಗಿರುವ ಬಿಎಸ್‌ಎಫ್‌ನಲ್ಲಿ ಇಲ್ಲಿಯವರೆಗೆ 1,018 ಮಂದಿಗೆ ಕರೊನಾ ವೈರಸ್‌ ತಗುಲಿದೆ. ಈ ಪೈಕಿ 659 ಸಿಬ್ಬಂದಿ ಚೇತರಿಸಿಕೊಂಡಿದ್ದಾರೆ ಮತ್ತು 354 ಮಂದಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಬೈಕ್‌ ಬೆಲೆ 60 ಸಾವಿರ- ಫ್ಯಾನ್ಸಿ ನಂಬರ್‌ಗೆ ಖರ್ಚು ಮಾಡಿದ್ದು ಕೇಳಿದ್ರೆ ಗಾಬರಿ ಬೀಳ್ತೀರಾ!
ಇದಾಗಲೇ ಐವರು ಯೋಧರು ಈ ಮಾರಕ ವೈರಸ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ನಾಲ್ಕು ಮಂದಿ ಚೇತರಿಸಿಕೊಂಡಿದ್ದು, ಇನ್ನುಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬಿಎಸ್‌ಎಫ್ ಮಾತ್ರವಲ್ಲದೇ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್‌) ಯೋಧರಲ್ಲಿಯೂ ಸೋಂಕು ಪತ್ತೆಯಾಗುತ್ತಿದೆ. ಇದಾಗಲೇ 1,219 ಸಿಆರ್‌ಪಿಎಫ್ ಸಿಬ್ಬಂದಿಗೆ ಕೊರೊನಾವೈರಸ್ ಸೋಂಕು ತಗುಲಿದೆ.
ದೇಶಾದ್ಯಂತ ಒಟ್ಟು 5,85,493 ಕೊರೋನಾ ವೈರಸ್ ಪ್ರಕರಣಗಳಿದ್ದು, 17,400 ಜನ ಇಲ್ಲಿವರೆಗೆ ಮೃತಪಟ್ಟಿದ್ದಾರೆ.
ಕರೊನಾ ಕೂಪವಾಗಿದ್ದ ಬೃಹತ್ ಕೊಳೆಗೇರಿಗೆ ಯಶಸ್ಸು ತಂದ ನಾಲ್ಕು ‘ಟಿ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
