ನವದೆಹಲಿ:ದೇಶದಲ್ಲಿ ಕರೊನಾ ಸೋಂಕಿನ ಪ್ರಕರಣಗಳು ಇಳಿಮುಖ ಆಗುತ್ತಿದ್ದು ಭಾನುವಾರ 14,146 ಪ್ರಕರಣಗಳು ದೃಢಪಟ್ಟಿವೆ. 144 ಜನರು ಮೃತಪಟ್ಟಿದ್ದು ಸಾವಿನ ಸಂಖ್ಯೆ 4,52,124ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,95,846ಕ್ಕೆ ಇಳಿದಿದ್ದು ಒಟ್ಟು ಸೋಂಕಿನ ಶೇಕಡ 0.57 ಆಗಿದೆ. ರಾಷ್ಟ್ರೀಯ ಚೇತರಿಕೆ ದರವೂ ಶೇ. 98.10 ಆಗಿದೆ. ಇದು 2020ರ ಮಾರ್ಚ್ ನಂತರದ ಗರಿಷ್ಠ ಚೇತರಿಕೆ ದರವಾಗಿದೆ. ಕಳೆದ 24 ಗಂಟೆಗಳಲ್ಲಿ 19,788 ರೋಗಿಗಳು ಗುಣಮುಖರಾಗಿದ್ದಾರೆ. ಗುಣ ಹೊಂದಿದವರ ಒಟ್ಟು ಸಂಖ್ಯೆ 3,34,19,749 ಆಗಿದೆ. ದೈನಿಕ ಪಾಸಿಟಿವಿಟಿ ದರ ಶೇ. 1.29 ಆಗಿದ್ದು ಸತತ 48 ದಿನಗಳಿಂದ ಶೇ. 3ಕ್ಕಿಂತ ಕಡಿಮೆಯಾಗಿದೆ. ದೇಶದಲ್ಲಿ ಇದುವರೆಗೆ 59,09,35,381 ಸ್ಯಾಂಪಲ್​ಗಳ ಪರೀಕ್ಷೆ ನಡೆಸಲಾಗಿದೆ.
ಲಸಿಕೆ ಅಭಿಯಾನಕ್ಕೆ ಶ್ಲಾಘನೆ:ಭಾರತದ ಕರೊನಾ-ತಡೆ ಲಸಿಕೆ ಅಭಿಯಾನ ಹಾಗೂ ಉತ್ಪಾದನೆ ಬಗ್ಗೆ ವಿಶ್ವ ಬ್ಯಾಂಕ್ ಮೆಚ್ಚುಗೆ ವ್ಯಕ್ತಪಡಿಸಿದೆ. ಶುಕ್ರವಾರ ವಾಷಿಂಗ್ಟನ್​ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಿದ್ದ ವಿಶ್ವ ಬ್ಯಾಂಕ್ ಸಮೂಹದ ಅಧ್ಯಕ್ಷ ಡೇವಿಡ್ ಮಲ್ಪಾಸ್, ಭಾರತದ ಸಾಧನೆಗಾಗಿ ಅಭಿನಂದಿಸಿದರು. ವ್ಯಾಕ್ಸಿನ್ ಉತ್ಪಾದನೆ ಹಾಗೂ ವಿತರಣೆಯಲ್ಲಿ ಭಾರತದ ಜಾಗತಿಕ ಪಾತ್ರವನ್ನು ಮಲ್ಪಾಸ್ ಶ್ಲಾಘಿಸಿದರು. ವಿಶ್ವ ಬ್ಯಾಂಕ್ ಹಾಗೂ ಅದರ ಅಂಗಸಂಸ್ಥೆಗಳಾದ ಇಂಟರ್​ನ್ಯಾಷನಲ್ ಫೈನಾನ್ಸ್ ಕಾಪೋರೇಷನ್ (ಐಎಫ್​ಸಿ) ಮತ್ತು ಮಲ್ಟಿಲ್ಯಾಟರಲ್ ಇನ್​ವೆಸ್ಟ್​ಮೆಂಟ್ ಗ್ಯಾರಂಟಿ ಏಜೆನ್ಸಿ (ಎಂಐಜಿಎ) ಭಾರತಕ್ಕೆ ಬೆಂಬಲ ನೀಡುವುದನ್ನು ಮುಂದುವರಿಸಲಿವೆ ಎಂದು ಮಲ್ಪಾಸ್ ಆಶ್ವಾಸನೆ ನೀಡಿದರು.
ರಷ್ಯಾದಲ್ಲಿ ಗರಿಷ್ಠ ಕೇಸ್:ರಷ್ಯಾದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು ಭಾನುವಾರ ಗರಿಷ್ಠ ದೈನಿಕ ಪ್ರಕರಣಗಳು ದಾಖಲಾಗಿವೆ. ದಾಖಲೆಯ 34,303 ಕೇಸ್​ಗಳು ಈ ಅವಧಿಯಲ್ಲಿ ದೃಢಪಟ್ಟಿವೆ ಎಂದು ರಾಷ್ಟ್ರೀಯ ಕರೊನಾ ಕಾರ್ಯಪಡೆ ತಿಳಿಸಿದೆ. ಶನಿವಾರ 20,174 ಕೇಸ್​ಗಳು ಪತ್ತೆಯಾಗಿದ್ದವು.
ಮೆಕ್ಕಾ ಮಸೀದಿಯಲ್ಲಿ ದೈಹಿಕ ಅಂತರ ರದ್ದು
ಮುಸ್ಲಿಮರ ಪವಿತ್ರ ಸ್ಥಳವಾದ ಸೌದಿ ಅರೇಬಿಯಾದ ಮೆಕ್ಕಾದ ಕಾಬಾದಲ್ಲಿರುವ ಬೃಹತ್ ಮಸೀದಿಯಲ್ಲಿ ಸಾಮಾಜಿಕ ಅಂತರ ನಿಯಮವನ್ನು ಅಧಿಕೃತವಾಗಿ ರದ್ದು ಮಾಡಿದಂತಿದೆ. ಜನರು ಅಂತರ ಕಾಯ್ದುಕೊಳ್ಳಲು ಮಸೀದಿ ಒಳಗೆ ಹಾಗೂ ಸುತ್ತಮುತ್ತ ನೆಲದ ಮೇಲೆ ಹಾಕಿದ್ದ ಗುರುತನ್ನು ಸಿಬ್ಬಂದಿ ಅಳಿಸಿ ಹಾಕಿದ್ದಾರೆ. ಸೋಂಕು ಸ್ಪೋಟದ ನಂತರ ಇದೇ ಮೊದಲ ಬಾರಿಗೆ ಹೀಗೆ ಮಾಡಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 1 =
Remember me
