ಬೆಂಗಳೂರು:ಕಳೆದ 24 ಗಂಟೆಗಳಲ್ಲಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಹಾಗೂ ಶಿವಮೊಗ್ಗ ಜಿಲ್ಲೆ ಕರೊನಾ ಸೋಂಕಿನಿಂತ ತತ್ತರಗೊಂಡಿದೆ. ನಿನ್ನೆ ಸಂಜೆ 5 ಗಂಟೆಯಿಂದ ಇಲ್ಲಿಯವರೆಗೆ 54 ಹೊಸ ಸೋಂಕಿತರನ್ನು ಪತ್ತೆ ಹಚ್ಚಲಾಗಿದೆ. ಇವರ ಪೈಕಿ ಹೆಚ್ಚಿನವರು ಪರ ಊರುಗಳಿಂದ ರಾಜ್ಯಕ್ಕೆ ವಾಪಸಾದವರು.
ಇದಾಗಲೇ ಶಿವಮೊಗ್ಗ ಜಿಲ್ಲೆ ಗ್ರೀಜ್​ ಝೋನ್​ ಪಟ್ಟದಿಂದ ಹೊರಕ್ಕೆ ಬಂದು, ತನ್ನೊಳಗೆ 9 ಹೊಸ ಸೋಂಕಿತರನ್ನು ಸೇರಿಸಿಕೊಂಡು ಬಿಟ್ಟಿದೆ.
ವೈರಸ್​ನ ಸುಳಿವೇ ಇಲ್ಲದೆ ಹಸಿರು ವಲಯ (ಗ್ರೀನ್​ ಝೋನ್​) ಎಂದು ಕರೆಸಿಕೊಂಡು ತಣ್ಣಗಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ 9 ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯ ಶಿಕಾರಿಪುರದಲ್ಲಿ ಎಂಟು ಹಾಗೂ ತೀರ್ಥಹಳ್ಳಿಯಲ್ಲಿ ಒಂದು ಪ್ರಕರಣಗಳು ಬೆಳಕಿವೆ ಬಂದಿವೆ. ಈ 9 ಮಂದಿ ಗುಜರಾತ್​ನ ಅಮಹದಾಬಾದ್​ಗೆ ಪ್ರಯಾಣ ಬೆಳೆಸಿ ಬಂದವರಾಗಿದ್ದಾರೆ.
ಇದನ್ನೂ ಓದಿ:ಸ್ಪಿರುಲಿನಾ ಕರೊನಾಕ್ಕೆ ರಾಮಬಾಣವೆ? ಸಂಶೋಧನಾಲಯ ಏನು ಹೇಳಿದೆ?
ಅದೇ ರೀತಿ, ರಾಜಸ್ಥಾನದ ಅಜಮೀರ್​ನಿಂದ ಪ್ರಯಾಣ ಬೆಳೆಸಿ ಬಂದ ಬೆಳಗಾವಿ 22ಮಂದಿ, ಬಾಗಲಕೋಟೆಯ 7 ಹಾಗೂ ದಾವಣಗೆರೆ ಓರ್ವನಿಗೆ ಕರೊನಾ ಸೋಂಕು ತಗುಲಿದೆ. ಮಹಾರಾಷ್ಟ್ರದಿಂದ ಬಂದ ಕಲಬುರಗಿಯ ಕಮಲಾಪುರದ ಓರ್ವನಲ್ಲಿ ಸೋಂಕು ಪತ್ತೆಯಾಗಿದೆ. ಬೆಳಗಾವಿಯಲ್ಲಿ ಕಂಡುಬಂದಿರುವ ಹೊಸ ಸೋಂಕಿತರ ಪೈಕಿ ಹೆಚ್ಚಿನವರು 3ರಿಂದ 12 ವರ್ಷ ಒಳಗಿನವರು.
ಸೋಂಕಿತನೊಬ್ಬನ ಸಂಪರ್ಕಕ್ಕೆ ಬಂದಿರುವ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ 7 ಮಂದಿಗೂ ಸೋಂಕು ತಗುಲಿದೆ. ಬೆಂಗಳೂರು ನಗರ 3, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ 1, ಕಲಬುರಗಿಯಲ್ಲಿ 1, ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ 1 ಹಾಗೂ ದಾವಣಗೆರೆ 1 ಹೊಸ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.
ಇದನ್ನೂ ಓದಿ:ವಾಸನೆಯಿಂದಲೂ ಕಂಡುಹಿಡಿಯಬಹುದು ಕರೊನಾ: ಅದು ಹೇಗೆ?
ನಿಮ್ಮ ಜಿಲ್ಲೆಯ ವಿವರ ಹೇಗಿದೆ? ಇಲ್ಲಿದೆ ವಿವರ:

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:20 − seventeen =
Remember me
