ನವದೆಹಲಿ:ಪ್ರತಿದಿನ 95 ಸಾವಿರಕ್ಕೂ ಅಧಿಕ ಕರೊನಾ ಪ್ರಕರಣಗಳನ್ನು ಕಂಡಿರುವ ಭಾರತದಲ್ಲಿ ಇದೀಗ ಸೋಂಕು ಅತ್ಯಂತ ಕಡಿಮೆ ಪ್ರಮಾಣಕ್ಕೆ ಇಳಿಕೆಯಾಗಿದೆ. ಸೋಮವಾರ 36,500 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದು ಕಳೆದ 100 ದಿನಗಳಲ್ಲಿನ ಏಕದಿನ ಏರಿಕೆಯ ಕನಿಷ್ಠ ದಾಖಲೆಯಾಗಿದೆ. ಈ ಹಿಂದೆ ಜುಲೈ 17ರಂದು 35 ಸಾವಿರ ಪ್ರಕರಣಗಳು ಪತ್ತೆಯಾಗಿದ್ದವು. ಅದಾದ ನಂತರ ಇದೇ ಮೊದಲನೇ ಬಾರಿಗೆ ಇಷ್ಟು ಕಡಿಮೆ ಸೋಂಕು ವರದಿಯಾಗಿದೆ.
ಅತಿ ಹೆಚ್ಚು ಸೋಂಕು ವರದಿಯಾಗುತ್ತಿದ್ದ ಮಹಾರಾಷ್ಟ್ರದಲ್ಲಿ 3,650 ಪ್ರಕರಣ ಬೆಳಕಿಗೆ ಬಂದಿದೆ. ಕೇರಳದಲ್ಲಿ 4,300, ಪಶ್ಚಿಮ ಬಂಗಾಳ 4,120, ಕರ್ನಾಟಕದಲ್ಲಿ 3,130 ಪ್ರಕರಣ ಪತ್ತೆಯಾಗಿದೆ.
ಹಿಂದಿನ ದಿನಗಳಿಗೆ ಹೋಲಿಸಿದರೆ ಸೋಮವಾರ ಕರೊನಾ ಪರೀಕ್ಷೆಯ ಸಂಖ್ಯೆಯೂ ಕಡಿಮೆಯಾಗಿತ್ತು. ಕಳೆದ ವಾರದಲ್ಲಿ ಪ್ರತಿದಿನ 14 ಲಕ್ಷದವರೆಗೆ ಪರೀಕ್ಷೆ ಮಾಡಲಾಗಿತ್ತು. ವಿಜಯದಶಮಿ ಹಬ್ಬದ ದಿನ 9.6 ಲಕ್ಷ ಜನರಿಗೆ ಪರೀಕ್ಷೆ ನಡೆಸಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 79.46 ಲಕ್ಷಕ್ಕೆ ಏರಿದೆ. 488 ಸೋಂಕಿತರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 1.19 ಲಕ್ಷ ದಾಟಿದೆ. 63,800 ಜನರು ಗುಣಮುಖರಾಗಿದ್ದು, ಚೇತರಿಸಿಕೊಂಡವರ ಸಂಖ್ಯೆ 72 ಲಕ್ಷಕ್ಕೂ ಅಧಿಕವಾಗಿದೆ. ಗುಣಮುಖ ಪ್ರಮಾಣ ಶೇ. 90.62 ವರದಿಯಾಗಿದೆ. 6.25 ಲಕ್ಷ ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. ಸಕ್ರಿಯ ಪ್ರಕರಣಗಳಲ್ಲಿ ಶೇ. 78 ಪಾಲನ್ನು ಪ್ರಮುಖ 10 ರಾಜ್ಯಗಳು ಹೊಂದಿವೆ. ದೇಶದಲ್ಲಿ ಸೆಪ್ಟೆಂಬರ್ 1ರಂದು ಶೇ. 77 ವರದಿಯಾಗಿದ್ದ ಮರಣ ಪ್ರಮಾಣ ಇದೀಗ ಶೇ. 1.5ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಕೊಟ್ಟಿದೆ.
ಮತ್ತಷ್ಟು ಅನ್​ಲಾಕ್ ಇಲ್ಲ
ಲಾಕ್​ಡೌನ್ ನಂತರ ಅನ್​ಲಾಕ್ ಪ್ರಕ್ರಿಯೆ ಆರಂಭಿಸಿರುವ ಕೇಂದ್ರ ಸರ್ಕಾರ, ನವೆಂಬರ್​ನಲ್ಲಿ ಹೆಚ್ಚಿನ ಸಡಿಲಿಕೆ ನೀಡಲಾಗುವುದಿಲ್ಲ ಎಂದು ತಿಳಿಸಿದೆ. ಸೆಪ್ಟೆಂಬರ್ 30ರಂದು ಬಿಡುಗಡೆ ಮಾಡಲಾಗಿದ್ದ ಅನ್​ಲಾಕ್ 5ರ ಮಾರ್ಗಸೂಚಿಯನ್ನೇ ನವೆಂಬರ್ 30ರವರೆಗೆ ಅನುಸರಿಸುವಂತೆ ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಕಂಟೇನ್ಮೆಂಟ್ ವಲಯಗಳಲ್ಲಿ ಮುಂದಿನ ತಿಂಗಳ ಅಂತ್ಯದವರೆಗೂ ಕಠಿಣ ಲಾಕ್​ಡೌನ್ ಜಾರಿಯಲ್ಲಿರಲಿದೆ. ಅಂತರರಾಜ್ಯ ಪ್ರಯಾಣಕ್ಕೆ ವಿಶೇಷ ಅನುಮತಿ ಅವಶ್ಯಕತೆ ಇರುವುದಿಲ್ಲ. ಸೆಪ್ಟೆಂಬರ್ 30ರಂದು ಬಿಡುಗಡೆಯಾದ ಮಾರ್ಗಸೂಚಿಯಲ್ಲಿ ಚಿತ್ರಮಂದಿರ, ಈಜುಕೊಳ, ಮನರಂಜನಾ ಪಾರ್ಕ್​ಗಳನ್ನು ಭಾಗಶಃ ತೆರೆಯಲು ಅನುಮತಿ ನೀಡಲಾಗಿತ್ತು. ಕಾರ್ಯಕ್ರಮಗಳಲ್ಲಿ ನೂರು ಜನರಿಗೆ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಶಾಲಾ ಕಾಲೇಜು ಪುನರಾರಂಭಕ್ಕೆ ಅನುಮತಿ ನೀಡಿದ್ದು, ಅದರ ನಿರ್ಧಾರವನ್ನು ಆಯಾ ರಾಜ್ಯ ಸರ್ಕಾರಗಳಿಗೆ ಬಿಡಲಾಗಿದೆ.
ವಾಯುಮಾಲಿನ್ಯದಿಂದ ಮೃತರ ಸಂಖ್ಯೆ ಶೇ.15 ಹೆಚ್ಚಳ
ಜಾಗತಿಕವಾಗಿ ವಾಯುಮಾಲಿನ್ಯದಿಂದಾಗಿ ಕರೊನಾಕ್ಕೆ ಬಲಿಯಾದವರ ಸಂಖ್ಯೆ ಶೇ. 15 ಹೆಚ್ಚಳವಾಗಿದೆ ಎನ್ನುವುದು ಅಧ್ಯಯನವೊಂದರಿಂದ ತಿಳಿದುಬಂದಿದೆ. ಕಾರ್ಡಿಯೊವ್ಯಾಸ್ಕುಲಾರ್ ರಿಸರ್ಚ್ ಜರ್ನಲ್​ನಲ್ಲಿ ಪ್ರಕಟವಾಗಿರುವ ವರದಿಯಲ್ಲಿ ಈ ಅಂಶ ಪ್ರಸ್ತಾಪವಾಗಿದೆ. ಯುರೋಪ್​ನಲ್ಲಿ ಶೇ. 19, ಉತ್ತರ ಅಮೆರಿಕದಲ್ಲಿ ಶೇ. 17, ಪೂರ್ವ ಏಷ್ಯಾದಲ್ಲಿ ಶೇ. 27, ಝೆಕ್ ಗಣರಾಜ್ಯ ಶೇ. 29, ಜರ್ಮನಿ ಶೇ. 26, ಸ್ವಿಜರ್​ಲೆಂಡ್ ಶೇ. 22, ಬೆಲ್ಜಿಯಂ ಶೇ. 21, ನೆದರ್ಲೆಂಡ್ ಶೇ. 19, ಇಟಲಿ ಶೇ. 15, ಬ್ರಿಟನ್​ನಲ್ಲಿ ಶೇ. 14 ಸಾವು ಅಧಿಕವಾಗಲು ವಾಯುಮಾಲಿನ್ಯ ಕಾರಣ ಎಂದು ವರದಿ ಹೇಳಿದೆ. ಭಾರತದ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗಿದ್ದು, ಕರೊನಾದಿಂದಾಗಿ ಸಾವನ್ನಪು್ಪವವರ ಸಂಖ್ಯೆಯೂ ಹೆಚ್ಚಾಗುವ ಆತಂಕ ಎದುರಾಗಿದೆ. ಪಿಎಂ 2.5ರಲ್ಲಿ ಘನ ಮೀಟರ್​ಗೆ ಒಂದು ಮೈಕ್ರೋಗ್ರಾಂ ಮಾಲಿನ್ಯ ಹೆಚ್ಚಾದರೆ ಕರೊನಾ ಮರಣ ಪ್ರಮಾಣ ಶೇ. 8 ಹೆಚ್ಚಳವಾಗುತ್ತದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯ ವರದಿ ಮಾಡಿದೆ.
ಫ್ರಾನ್ಸ್​ನಲ್ಲಿ ದಿನಕ್ಕೆ ಲಕ್ಷ ಪ್ರಕರಣ?
ಯುರೋಪ್​ನ ಫ್ರಾನ್ಸ್​ನಲ್ಲಿ ಕರೊನಾ ಸೋಂಕು ಶರವೇಗದಲ್ಲಿ ಹರಡುತ್ತಿದೆ. ಇನ್ನು ಕೆಲ ದಿನಗಳಲ್ಲಿ ಏಕದಿನ ಏರಿಕೆ ಒಂದು ಲಕ್ಷ ಮುಟ್ಟುವ ಸಾಧ್ಯತೆಯಿದೆ ಎಂದು ದೇಶದ ವೈಜ್ಞಾನಿಕ ಸಲಹೆ ಮಂಡಳಿಯ ಮುಖ್ಯಸ್ಥ ಪ್ರೊ. ಜೀನ್ ಫ್ರಾಂಕೋಯಿಸ್ ಡೆಲ್​ಫ್ರೈಸಿ ಎಚ್ಚರಿಸಿದ್ದಾರೆ. ದೇಶದಲ್ಲಿ ಅ. 25ರಂದು 50 ಸಾವಿರಕ್ಕೂ ಅಧಿಕ ಪ್ರಕರಣ ಪತ್ತೆಯಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + fifteen =
Remember me
