ನವದೆಹಲಿ:ದೇಶದಲ್ಲಿ ಕರೊನಾ ಎರಡನೇ ಅಲೆ ಆತಂಕ ಬೆನ್ನಲ್ಲೇ, ಸೋಂಕು ಪ್ರಕರಣಗಳ ಸಂಖ್ಯೆ 95 ಲಕ್ಷ ಸಮೀಪಿಸಿದೆ. ಸದ್ಯ ಪ್ರತಿದಿನ ಸರಾಸರಿ 40 ಸಾವಿರ ಪ್ರಕರಣಗಳು ವರದಿಯಾಗುತ್ತಿದ್ದು, ಕೆಲ ದಿನಗಳಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1 ಕೋಟಿ ತಲುಪುವ ಸಾಧ್ಯತೆ ಇದೆ. ಸೋಂಕಿತರ ಮರಣ ಪ್ರಮಾಣ ಪ್ರತಿದಿನ ಸರಾಸರಿ 500 ಇದ್ದು, ಈವರೆಗೆ 1.36 ಲಕ್ಷ ಮಂದಿ ಕರೊನಾಗೆ ಬಲಿಯಾಗಿದ್ದಾರೆ.
ಪ್ರತಿದಿನದ ಸಾವುಗಳಲ್ಲಿ ಶೇಕಡ 71 ಪ್ರಕರಣಗಳು ಎಂಟು ರಾಜ್ಯಗಳಿಂದ ವರದಿಯಾಗುತ್ತಿವೆ. ದೆಹಲಿ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಹರಿಯಾಣ, ಪಂಜಾಬ್, ಕೇರಳ, ಉತ್ತರಪ್ರದೇಶ ಮತ್ತು ರಾಜಸ್ಥಾನದಲ್ಲಿ ಹೆಚ್ಚು ಸಾವುಗಳು ದಾಖಲಾಗುತ್ತಿವೆ. ನವೆಂಬರ್ 28ರವರೆಗೆ 13.95 ಕೋಟಿಗೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಶನಿವಾರ ಒಂದೇ ದಿನ 12,83,449 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಕೇರಳದಲ್ಲಿ ಶನಿವಾರ ಎಲ್ಲ ರಾಜ್ಯಗಳಿಗಿಂತ ಅಧಿಕ ಅಂದರೆ 6,250 ಪ್ರಕರಣಗಳು ವರದಿಯಾಗಿವೆ. ಹಲವು ರಾಜ್ಯಗಳಲ್ಲಿ ಕರೊನಾ ಪ್ರಕರಣಗಳು ಈ ಮೊದಲಿಗಿಂತಲೂ ತೀವ್ರ ಮಟ್ಟಕ್ಕೆ ಏರುತ್ತಿರುವುದರಿಂದಾಗಿ ಆಯಾ ಸರ್ಕಾರಗಳು ಮತ್ತೆ ಲಾಕ್​ಡೌನ್ ನಿರ್ಬಂಧಗಳನ್ನು ವಿಧಿಸಿವೆ. ರಾತ್ರಿ ಕರ್ಫ್ಯೂ, ಮಾಸ್ಕ್ ಧರಿಸದಿದ್ದರೆ ಅಧಿಕ ದಂಡ ಸೇರಿ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ.
ತಜ್ಞರ ತಂಡದೊಂದಿಗೆ ಮೋದಿ ಸಂವಾದ:ಕರೊನಾ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ವಿವಿಧ ತಜ್ಞರ ಮೂರು ತಂಡಗಳ ಜತೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ. ಜಿನೋವಾ ಬಯೋಫಾರ್ವ, ಬಯೋಲಾಜಿಕಲ್ ಇ ಹಾಗೂ ಡಾ. ರೆಡ್ಡೀಸ್ ತಂಡಗಳ ಜತೆ ಮೋದಿ ಲಸಿಕೆ ಅಭಿವೃದ್ಧಿ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಚೆನ್ನೈನಲ್ಲಿ ಆಸ್ಟ್ರಾಜೆನಿಕಾದ ಕೋವಿಶೀಲ್ಡ್ ಲಸಿಕೆಯ ಕ್ಲಿನಿಕಲ್ ಪ್ರಯೋಗಕ್ಕೆ ಒಳಗಾಗಿದ್ದ ಸ್ವಯಂಸೇವಕನೊಬ್ಬ ತನ್ನ ಆರೋಗ್ಯದ ಮೇಲೆ ಅಡ್ಡಪರಿಣಾಮಗಳು ಉಂಟಾಗಿವೆ ಎಂದು ಆರೋಪಿಸಿದ್ದಾನೆ. ಸದ್ಯ ನಡೆಯುತ್ತಿರುವ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಿಲ್ಲಿಸುವುದರ ಜತೆಗೆ ತನಗೆ 5 ಕೋಟಿ ರೂ. ಪರಿಹಾರ ನೀಡಬೇಕು ಎಂದು ಆತ ಪುಣೆಯ ಸೆರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾಗೆ ನೋಟಿಸ್ ಕಳುಹಿಸಿದ್ದಾನೆ. ಆದರೆ ಇದನ್ನು ಸೆರಂ ತಿರಸ್ಕರಿಸಿದೆ. ಸುಳ್ಳು ಆರೋಪ ಮಾಡಿರುವ ಕಾರಣಕ್ಕೆ ಆತನ ವಿರುದ್ಧ 100 ಕೋಟಿ ರೂ. ಮಾನಹಾನಿ ಮೊಕದ್ದಮೆ ಹೂಡಲು ಸಿದ್ಧತೆ ನಡೆಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
