ನವದೆಹಲಿ:ಭಾರತದಲ್ಲಿ ಕರೊನಾ ಅಟ್ಟಹಾಸ ಮುಂದುವರಿಯುತ್ತಲೇ ಇದ್ದು, ಪ್ರತಿದಿನ ದಾಖಲೆ ಪ್ರಮಾಣದಲ್ಲಿ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದು ಕರೊನಾ ಅರ್ಭಟದ ಎರಡನೇ ಅಲೆಯ ಆರಂಭವೆಂಬ ಆತಂಕವೂ ಎದುರಾಗಿದೆ. ಆದರೆ, ಪ್ರಕರಣ ಹೆಚ್ಚಾಗಲು ಪರೀಕ್ಷೆಗಳ ಸಂಖ್ಯೆಯಲ್ಲಿನ ಏರಿಕೆ, ದೇಶದಲ್ಲಿ ಆರ್ಥಿಕ ಚಟುವಟಿಕೆಯ ಹೆಚ್ಚಳ ಮತ್ತು ನಿಯಮ ಅನುಸರಣೆಗೆ ಜನರಲ್ಲಿ ಇರುವ ಅಸಡ್ಡೆ ಕೂಡ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿರುವುದು ನಿಜ. ಆದರೆ, ಇದು ಎಲ್ಲಡೆಯಲ್ಲೂ ಏಕರೂಪವಾಗಿಲ್ಲ ಎಂಬುದನ್ನು ಗಮನಿಸಬೇಕು. ಸೋಂಕು ಪ್ರಸರಣವು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಹೆಚ್ಚಾಗುತ್ತಿದೆ. ಇಂಥ ಕಡೆಗಳಲ್ಲಿ ಜನಸಂಖ್ಯೆ ಹೆಚ್ಚಿದೆ. ರೋಗಲಕ್ಷಣ ಇಲ್ಲ ಅಥವಾ ಅಲ್ಪವಾಗಿರುತ್ತದೆ. ಹೀಗಾಗಿ ಜನರು ಹೆಚ್ಚಿನ ಜಾಗೃತೆ ವಹಿಸುತ್ತಿಲ್ಲ. ಇದರಿಂದ ಸೋಂಕು ವೃದ್ಧಿಸುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಸಾಂಕ್ರಾಮಿಕ ಮತ್ತು ಪಸರಿಸುವ ಸೋಂಕಿನ ವಿಭಾಗದ ಮುಖ್ಯಸ್ಥ ಡಾ. ಸಮಿರನ್ ಪಂಡಾ ಹೇಳಿದ್ದಾರೆ.
ದೇಶದ 20 ದೊಡ್ಡ ರಾಜ್ಯಗಳ ಪೈಕಿ 10ರಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗಿದ್ದು, ಈ ಅಂಕಿ ಅಂಶ ದಿನದಿಂದ ದಿನಕ್ಕೆ ಹೊಸ ದಾಖಲೆಯನ್ನು ಬರೆಯುತ್ತದೆ. ಮೇ ತಿಂಗಳಿನಿಂದ ಏರುಗತಿಯಲ್ಲೇ ಇರುವ ಸೋಂಕಿನ ಸಂಖ್ಯೆ ಇಳಿಕೆಯೆಡೆಗೆ ಮುಖ ಕಂಡಿಲ್ಲ. ಆದರೆ, ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕರೊನಾ ಅಟ್ಟಹಾಸ ಒಂದು ಹಂತದ ನಂತರ ಇಳಿಕೆಯ ಹಾದಿಯಲ್ಲಿದೆ. ಹೀಗಾಗಿ ಭಾರತದಲ್ಲಿ ಕರೊನಾದ ಎರಡನೇ ಅಲೆ ಶುರುವಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ ನಾಲ್ಕು ದಿನಗಳಿಂದಲೂ 75 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿದ್ದು, ಶನಿವಾರ 78,479 ಹೊಸ ಪ್ರಕರಣ ವರದಿಯಾಗಿದೆ. ಇದು ದೇಶದಲ್ಲಿ ಏಕದಿನದ ಗರಿಷ್ಠ ಸಂಖ್ಯೆಯಾಗಿದೆ. ಸೋಂಕು ದೃಢಗೊಳ್ಳುವ ವೇಗ ಹೀಗೆ ಹೊಸ ಮುಂದುವರಿದರೆ ಏಕದಿನದ ಜಾಗತಿಕ ದಾಖಲೆಯು ಭಾರತದಲ್ಲೆ ನಿರ್ವಣವಾಗುತ್ತದೆ. ಅಮೆರಿಕದಲ್ಲಿ ಈ ಹಿಂದೆ ಒಂದೇ ದಿನ 78,586 ಹೊಸ ಪ್ರಕರಣಗಳು ವರದಿಯಾದ ಈವರೆಗಿನ ದಾಖಲೆ ಜಾಗತಿಕ ದಾಖಲೆಯಾಗಿದೆ.
ಭಾರತದಲ್ಲಿ 213 ದಿನಗಳಲ್ಲಿ ಕರೊನಾ ಸಂಖ್ಯೆ 35 ಲಕ್ಷ ತಲುಪಿದೆ. ಗುಣಮುಖರ ಪ್ರಮಾಣ ಶೇಕಡ 76.61 ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಮರಣ ಪ್ರಮಾಣ ಶೇಕಡ 1.79ಕ್ಕೆ ಇಳಿದಿದೆ. ಕಳೆದ 24 ತಾಸಿನಲ್ಲಿ 19 ಸಾವಿರ ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 35.59 ಲಕ್ಷಕ್ಕೇರಿದೆ. ಹೊಸದಾಗಿ 130 ಮಂದಿ ಸೋಂಕಿಗೆ ಬಲಿಯಾಗಿದ್ದು, ಮೃತರ ಸಂಖ್ಯೆ 63.700ಕ್ಕಿಂತಲೂ ಅಧಿಕವಾಗಿದೆ. ಈವರೆಗೆ 27.26 ಲಕ್ಷ ರೋಗಿಗಳು ಗುಣಮುಖರಾಗಿದ್ದು, ಇನ್ನೂ 7.68 ಲಕ್ಷ ಸಕ್ರಿಯ ಪ್ರಕರಣಗಳಿವೆ.
ಚಿಕಿತ್ಸೆಗೆ ಎಲ್​ಎಂಡಬ್ಲು್ಯಎಚ್ ಸಹಕಾರಿ:ರಕ್ತ ಹೆಪ್ಪುಗಟ್ಟುವಿಕೆ ತಡೆಗಟ್ಟಲು ಬಳಸುವ ಲೊ ಮೊಲೆಕ್ಯೂರ್ ವೇಟ್ ಹೆಪ್ರೇನ್ (ಎಲ್​ಎಂಡಬ್ಲು್ಯಎಚ್) ಔಷಧ ಕರೊನಾ ರೋಗಿಗಳ ಚಿಕಿತ್ಸೆಗೆ ಸಹಕಾರಿಯಾಗಿದೆ ಎಂದು ಪುಣೆ ಮೂಲದ ತಜ್ಞ ಸುಭಾಲ್ ದೀಕ್ಷಿತ್ ಅಭಿಪ್ರಾಯಪಟ್ಟಿದ್ದಾರೆ. ಎಲ್​ಎಂಡಬ್ಲು್ಯಎಚ್ ಇಂಜೆಕ್ಷನ್ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಸಮಯವನ್ನು ಕಡಿಮೆ ಮಾಡುತ್ತದೆ. ಇದರಿಂದ ಚೇತರಿಕೆ ಪ್ರಮಾಣ ಹೆಚ್ಚಾಗಿದೆ ಹಾಗೂ ಹಠಾತ್ ಸಾವಿನ ಪ್ರಮಾಣ ಶೇಕಡ 90ರಷ್ಟು ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಇಟಲಿಯಲ್ಲಿನ ಸೋಂಕಿತರ ಮರಣೋತ್ತರ ವರದಿಗಳಲ್ಲಿ ರಕ್ತನಾಳಗಳಲ್ಲಿ ಸಣ್ಣ ರಕ್ತ ಹೆಪ್ಪುಗಟ್ಟುವಿಕೆ (ಮೈಕ್ರೋ ಥ್ರಂಬಸ್) ಅಥವಾ ಉರಿಯೂತ ಉಂಟಾಗಿರುವುದು ಕಂಡು ಬಂದಿದೆ. ಭಾರತದಲ್ಲಿ ಕರೊನಾ ಪ್ರಾರಂಭವಾದಾಗಿನಿಂದಲೂ ವೈದ್ಯರು ರಕ್ತ ಹೆಪ್ಪುಗಟ್ಟುವಿಕೆ ತಡೆಗಟ್ಟಲು ಎಲ್​ಎಂಡಬ್ಲು್ಯಎಚ್ ಅನ್ನು ಹೆಚ್ಚಾಗಿ ಬಳಸುತ್ತಿದ್ದಾರೆ ಎಂದು ಸುಭಾಲ್ ದೀಕ್ಷಿತ್ ಹೇಳಿದ್ದಾರೆ.
ಅಧಿವೇಶನಕ್ಕೆ ಮುಂಜಾಗ್ರತಾ ಕ್ರಮ:ಕರೊನಾ ಬಿಕ್ಕಟ್ಟಿನ ನಡುವೆಯೇ ಸಂಸತ್​ನ ಮುಂಗಾರು ಅಧಿವೇಶನ ನಡೆಸಲು ಭರದ ಸಿದ್ದತೆ ಗಳನ್ನು ಮಾಡಲಾಗುತ್ತಿದ್ದು, ಸಂಸದರ ಸುರಕ್ಷತೆ ನಿಟ್ಟಿನಲ್ಲಿ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ದೆಹಲಿಯ ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆಯ (ಏಮ್್ಸ) ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಜತೆ ಸಭೆ ನಡೆಸಿದ್ದಾರೆ. ಅಳವಡಿಸಿಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಡಾ.ಗುಲೇರಿಯಾ ಸಲಹೆಗಳನ್ನು ನೀಡಿದ್ದಾರೆ. ಮಿನಿ ಕ್ಲೂಬಿಕಲ್​ನಲ್ಲಿ ಸಂಸದರು ಕುಳಿತುಕೊಳ್ಳುವ ಆಸನಗಳ ಮಧ್ಯೆ ದೈಹಿಕ ಅಂತರ ಕಾಪಾಡುವುದರ ಜತೆಗೆ ಇಬ್ಬರ ಆಸನಗಳ ಮಧ್ಯೆ ಪ್ಲೆಕ್ಸಿಗ್ಲಾಸ್ ಹಾಳೆಯನ್ನು ಅಳವಡಿಸಲಾಗುತ್ತದೆ. ಸಂಸದರು ಕೂತಲ್ಲಿಂದಲೇ ಮಾತನಾಡಲು ಅವಕಾಶ ಮಾಡಿಕೊಡಲಾಗುತ್ತಿದೆ. ಇದರಿಂದಾಗಿ ಗಾಳಿಯಲ್ಲಿ ಉಸಿರಿನ ಕಣಗಳು ಹರಡುವುದು ತಗ್ಗಲಿದೆ ಎಂದು ಸಲಹೆ ನೀಡಿದ್ದಾರೆ. ಸಂಸತ್​ನಲ್ಲಿ ಆರ್​ಟಿ-ಪಿಸಿಆರ್ ಪರೀಕ್ಷಾ ಯಂತ್ರವನ್ನು ನಿಯೋಜಿಸುವ ಬಗ್ಗೆಯೂ ಚರ್ಚೆ ನಡೆದಿದೆ.
9 ತಾಸಿನ ನಿದ್ದೆಯೇ ಉದ್ಯೋಗ; ಲಕ್ಷ ರೂ. ಸಂಬಳ; ಷರತ್ತುಗಳು ಅನ್ವಯ….!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − two =
Remember me
