ನವದೆಹಲಿ:ಕೋವಿಡ್ ಸಾಂಕ್ರಾಮಿಕತೆಯಿಂದ ಮೃತಪಟ್ಟವರ ಕುಟುಂಬಗಳು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವುದಕ್ಕೆ ಸಂಬಂಧಿಸಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್​ಡಿಎಂಎ) ಬುಧವಾರ ಮಾರ್ಗಸೂಚಿ ಪ್ರಕಟಿಸಿದೆ. ಪರಿಹಾರ ಕೋರುವವರು ಮೇ 23ರೊಳಗೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಎನ್​ಡಿಎಂಎ ಅಧಿಸೂಚನೆ ತಿಳಿಸಿದೆ.
2022ರ ಮಾರ್ಚ್ 20ರ ಮುಂಚೆ ಕರೊನಾದಿಂದ ಮರಣಿಸಿದವರ ಸಂಬಂಧಿಗಳು ಸರ್ಕಾರದ ಪರಿಹಾರ ಪಡೆಯಲು ಅರ್ಹರು ಎಂದು ಎನ್​ಡಿಎಂಎ ಸ್ಪಷ್ಟಪಡಿಸಿದೆ. ಕ್ಲೇಮುಗಳನ್ನು ಸಂಬಂಧಪಟ್ಟ ಪ್ರಾಧಿಕಾರಿಗಳು ಪರಿಶೀಲಿಸಿ ಅರ್ಜಿ ಸ್ವೀಕರಿಸಿದ 30 ದಿನದೊಳಗೆ ಪರಿಹಾರವನ್ನು ವಿತರಿಸಬೇಕು ಎಂದು ನಿರ್ದೇಶಿಸಿದೆ. ಕಟ್​ಆಫ್ ದಿನಾಂಕದ ನಂತರದ ಸಾವಿನ ಪ್ರಕರಣದಲ್ಲಿ ಮರಣಿಸಿದ 90 ದಿನದೊಳಗೆ ಕ್ಲೇಮುಗಳನ್ನು ಸಲ್ಲಿಸಬಹುದು. ಕೋವಿಡ್ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಕಳೆದ ವರ್ಷ ಆದೇಶಿಸಿದ್ದ ಸುಪ್ರೀಂ ಕೋರ್ಟ್, ಈ ಸಂಬಂಧ ಮಾರ್ಗಸೂಚಿ ರೂಪಿಸಿದ್ದು ಅದಕ್ಕನುಗುಣವಾಗಿ ಎನ್​ಡಿಎಂಎ ಅಧಿಸೂಚನೆ ಹೊರಡಿಸಿದೆ.
ಕೇರಳದಲ್ಲಿ ಮಾಸ್ಕ್ ಕಡ್ಡಾಯ:ಸಾರ್ವಜನಿಕ ಹಾಗೂ ಕೆಲಸದ ಸ್ಥಳಗಳಲ್ಲಿ ಮತ್ತು ಸಾರಿಗೆ ವಾಹನಗಳಲ್ಲಿ ಮಾಸ್ಕ್ ಧರಿಸುವುದನ್ನು ಕೇರಳ ಸರ್ಕಾರ ಮತ್ತೆ ಕಡ್ಡಾಯಗೊಳಿಸಿದೆ. ಈ ನಿಯಮವನ್ನು ಉಲ್ಲಂಘಿಸಿದರೆ ದಂಡ ವಿಧಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಸೋಂಕಿನ ಪ್ರಕರಣಗಳಲ್ಲಿ ಗಣನೀಯ ಇಳಿಕೆಯಾಗಿದ್ದರಿಂದ ಮಾಸ್ಕ್ ನಿಯಮವನ್ನು ಸರ್ಕಾರ ಸಡಿಲ ಗೊಳಿಸಿತ್ತು. ತಮಿಳುನಾಡು, ದೆಹಲಿ, ಪಂಜಾಬ್ ಮುಂತಾದ ರಾಜ್ಯಗಳು ಈಗಾಗಲೇ ಮಾಸ್ಕ್ ನಿಯಮವನ್ನು ಮತ್ತೆ ಜಾರಿಗೆ ತಂದಿದ್ದು ಕೇರಳ ಅದೇ ದಾರಿಯಲ್ಲಿ ಹೆಜ್ಜೆಯಿಟ್ಟಿದೆ. ರಾಜ್ಯದಲ್ಲಿ ಕಳವಳಕ್ಕೆ ಕಾರಣವಾಗುವ ಸನ್ನಿವೇಶವಿಲ್ಲ. ಆದರೆ ಇತರ ರಾಜ್ಯಗಳಲ್ಲಿ ಕೇಸ್​ಗಳ ಏರಿಕೆಯಾಗುತ್ತಿರುವುದರಿಂದ ಮುನ್ನೆಚ್ಚರಿಕೆಯಾಗಿ ಮಾಸ್ಕ್ ನಿಯಮವನ್ನು ಮತ್ತೆ ಜಾರಿಗೊಳಿಸಿರುವುದಾಗಿ ವೀಣಾ ತಿಳಿಸಿದ್ದಾರೆ.
ಬೂಸ್ಟರ್ ಡೋಸ್ ಅಂತರ ಇಳಿಕೆ:ಕರೊನಾ ಲಸಿಕೆಯ 2 ಡೋಸ್​ಗಳು, ಮುನ್ನೆಚ್ಚರಿಕೆ (ಬೂಸ್ಟರ್) ಡೋಸ್ ನಡುವಿನ ಅಂತರವನ್ನು ಸರ್ಕಾರ ಶೀಘ್ರವೇ ಈಗಿನ ಒಂಬತ್ತು ತಿಂಗಳಿಂದ ಆರು ತಿಂಗಳಿಗೆ ಇಳಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಲಸಿಕೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್​ಟಿಎಜಿಐ) ಈ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡುವ ನಿರೀಕ್ಷೆಯಿದೆ. ಎನ್​ಟಿಎಜಿಐ ಶುಕ್ರವಾರ ಸಭೆ ಸೇರಲಿದೆ.
2,927 ಹೊಸ ಕೇಸ್:ಬುಧವಾರ ಭಾರತದಲ್ಲಿ ಕರೊನಾ ಸೋಂಕಿನ 2,927 ಹೊಸ ಪ್ರಕರಣ ದೃಢಪಟ್ಟಿವೆ ಹಾಗೂ 32 ಜನರು ಮೃತಪಟ್ಟಿದ್ದಾರೆ. ದೇಶದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 4,30,65,496ಕ್ಕೆ ಏರಿದ್ದು ಒಟ್ಟು 5,23,654 ಜನರು ಮರಣಿಸಿದ್ದಾರೆ. ಸಕ್ರಿಯ ಪ್ರಕರಣಗಳಲ್ಲಿ ಒಂದು ದಿನದಲ್ಲಿ 643 ಏರಿಕೆಯಾಗಿದ್ದು ಒಟ್ಟು ಸೋಂಕಿತರಲ್ಲಿ ಸಕ್ರಿಯ ಕೇಸ್ ಪ್ರಮಾಣ ಶೇಕಡ 0.04 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ರಾಷ್ಟ್ರೀಯ ಚೇತರಿಕೆ ದರ ಶೇ. 98.75 ಆಗಿದೆ. ದೈನಿಕ ಪಾಸಿಟಿವಿಟಿ ದರ ಶೇ. 0.58 ಹಾಗೂ ಸಾಪ್ತಾಹಿಕ ಪಾಸಿಟಿವಿಟಿ ದರ ಶೇ. 0.59 ಆಗಿದೆ ಎಂದು ಸರ್ಕಾರ ವಿವರಿಸಿದೆ.
ಲಾಕ್​ಡೌನ್​ ಸೆಕ್ಸ್​: ಆರ್​ಟಿಐನಲ್ಲಿ ಬಹಿರಂಗವಾಯ್ತು ಆತಂಕಕಾರಿ ವಿಷಯ!

ಲಾಕ್​ಡೌನ್​ ಸೆಕ್ಸ್​: ಆರ್​ಟಿಐನಲ್ಲಿ ಬಹಿರಂಗವಾಯ್ತು ಆತಂಕಕಾರಿ ವಿಷಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 13 =
Remember me
