ನವದೆಹಲಿ:ದೇಶದಲ್ಲಿ ಕರೊನಾ ಆರ್ಭಟ ಮುಂದುವರಿದಿದ್ದು, ಕಳೆದ 24 ತಾಸಿನಲ್ಲಿ 211 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 9,100ಕ್ಕಿಂತ ಹೆಚ್ಚಾಗಿದೆ. ಜಾಗತಿಕ ಸಾವಿನ ಪಟ್ಟಿಯಲ್ಲಿ ಭಾರತ 9ನೇ ಸ್ಥಾನದಲ್ಲಿದೆ. ದೇಶದಲ್ಲಿ ಹೊಸದಾಗಿ 7,600ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 3.17 ಲಕ್ಷಕ್ಕೆ ಏರಿಕೆಯಾಗಿದೆ. ಈವರೆಗೆ 1.59 ಲಕ್ಷ ರೋಗಿಗಳು ಗುಣಮುಖರಾಗಿದ್ದು, ಇನ್ನೂ 1.48 ಲಕ್ಷ ಸಕ್ರಿಯ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ 3.427 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 1.04 ಲಕ್ಷಕ್ಕೇರಿದೆ. ನಂತರದಲ್ಲಿ ತಮಿಳುನಾಡಿನಲ್ಲಿ 42 ಸಾವಿರ, ದೆಹಲಿಯಲ್ಲಿ 36 ಸಾವಿರ, ಗುಜರಾತ್​ನಲ್ಲಿ 23 ಸಾವಿರ, ಉತ್ತರಪ್ರದೇಶದಲ್ಲಿ 12 ಸಾವಿರ, ರಾಜಸ್ಥಾನದಲ್ಲಿ 12 ಸಾವಿರ ಹಾಗೂ ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದಲ್ಲಿ ಈವರೆಗೆ ತಲಾ 10 ಸಾವಿರ ಪ್ರಕರಣಗಳು ಬೆಳಕಿಗೆ ಬಂದಿವೆ.
ಮಹಿಳೆಯರ ಮರಣ ಸಾಧ್ಯತೆ ಹೆಚ್ಚಳ:ಭಾರತದಲ್ಲಿ ಪುರುಷರಲ್ಲಿ ಹೆಚ್ಚಾಗಿ ಕರೊನಾ ಕಾಣಿಸಿಕೊಳ್ಳುತ್ತಿದೆ. ಹಾಗಿದ್ದರೂ ದೇಶದಲ್ಲಿ ಸೋಂಕಿನಿಂದಾಗಿ ಮೃತರಾಗುವವರಲ್ಲಿ ಹೆಣ್ಣು ಮಕ್ಕಳೆ ಹೆಚ್ಚು ಎಂದು ಜಾಗತಿಕ ಆರೋಗ್ಯ ವಿಜ್ಞಾನದ ಜರ್ನಲ್​ನಲ್ಲಿ ವರದಿ ಪ್ರಕಟವಾಗಿದೆ. ದೇಶದಲ್ಲಿನ ಕರೊನಾ ಮರಣ ಪ್ರಮಾಣದಲ್ಲಿ (ಸಿಎಫ್​ಆರ್) ಶೇ. 2.9 ಪುರುಷರಿದ್ದರೆ ಶೇ. 3.3 ಮಹಿಳೆಯರಿದ್ದಾರೆ. ದೇಶದಲ್ಲಿ ಸೋಂಕಿತರ ಪೈಕಿ ಶೇ.66 ಪುರುಷರು, 44ರಷ್ಟು ಮಹಿಳೆಯರು ಇದ್ದಾರೆ. ಜಾಗತಿಕವಾಗಿ ಮರಣ ಪ್ರಮಾಣದಲ್ಲಿ ಪುರುಷರೇ ಹೆಚ್ಚಿನ ಪಾಲು ಹೊಂದಿದ್ದಾರೆ.
ಶೇ.45 ಸೋಂಕಿತರಲ್ಲಿ ರೋಗಲಕ್ಷಣವಿಲ್ಲ:ಕರೊನಾ ಸೋಂಕಿಗೆ ಒಳಗಾಗಿರುವವರಲ್ಲಿ ಶೇಕಡಾ 45ರಷ್ಟು ಜನರಲ್ಲಿ ಎಂದಿಗೂ ರೋಗಲಕ್ಷಣಗಳು ಕಂಡು ಬರುವುದಿಲ್ಲ. ಸದ್ದಿಲ್ಲದಂತೆ ಅವರ ದೇಹದಲ್ಲಿ ವೈರಸ್ ಹಾನಿಯುಂಟುಮಾಡುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ತಿಳಿಸಿದೆ. ಅಮೆರಿಕದ ಸ್ಕ್ರಿಪ್ಸ್ ರಿಸರ್ಚ್ ಟ್ರಾನ್ಸೆ್ಲೕಷನಲ್ ಇನ್ಸಿ್ಟಟ್ಯೂಟ್​ನ ವಿಜ್ಞಾನಿಗಳು ಈ ಕುರಿತು ಸಂಶೋಧನೆ ನಡೆಸಿದ್ದು, ರೋಗಲಕ್ಷಣ ಇಲ್ಲದವರು ಸೋಂಕು ಪಸರಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ತಿಳಿಸಿದೆ.
ರುಚಿ, ವಾಸನೆ ಅಗ್ರಾಹ್ಯವೂ ಲಕ್ಷಣ:ರುಚಿ ಮತ್ತು ವಾಸನೆ ಏಕಾಏಕಿ ಗೊತ್ತಾಗದಿರುವಂತೆ ಆಗುವುದು ಕೂಡ ಕರೊನಾ ರೋಗಲಕ್ಷಣ ಎಂದು ಕೇಂದ್ರ ಸರ್ಕಾರ ತಿಳಿಸಿದ್ದು, ಇವುಗಳನ್ನು ಕರೊನಾ ಪತ್ತೆಗಾಗಿ ವೈದ್ಯಕೀಯ ಸಿಬ್ಬಂದಿಗೆ ನೀಡಲಾಗಿರುವ ರೋಗಲಕ್ಷಣಗಳ ಪಟ್ಟಿಗೆ ಸೇರ್ಪಡೆ ಮಾಡಿದೆ. ಜ್ವರ, ಕೆಮ್ಮು, ಆಯಾಸ, ಉಸಿರಾಟದ ತೊಂದರೆ, ಎಕ್ಸಪೆಕ್ಟೊರೇಷನ್, ಮೈಯಾಲ್ಜಿಯಾ, ರೈನೋರಿಯಾ, ಗಂಟಲು ನೋವು ಮತ್ತು ಅತಿಸಾರ ಈಗಾಗಲೇ ಕರೊನಾ ರೋಗಲಕ್ಷಣ ಪಟ್ಟಿಯಲ್ಲಿವೆ.
ಕರ್ನಾಟಕ ಭವನದಲ್ಲಿ ಸೋಂಕು:ದೆಹಲಿಯ ಚಾಣಕ್ಯಪುರಿಯ ಕೌಟಿಲ್ಯ ಮಾರ್ಗದಲ್ಲಿರುವ ಕರ್ನಾಟಕ ಭವನ-1ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೂಮ್ ಬಾಯ್ ಒಬ್ಬನಲ್ಲಿ ಕರೊನಾ ಸೋಂಕಿರುವುದು ದೃಢವಾಗಿದ್ದು, ಹೋಲಿ ಫ್ಯಾಮಿಲಿ ಆಸ್ಪತ್ರೆಯ ಆರೋಗ್ಯ ಸಿಬ್ಬಂದಿ ಚಿಕಿತ್ಸೆ ನೀಡುತ್ತಿದ್ದಾರೆ. ಸೋಂಕಿತ 25 ವರ್ಷದ ಯುವಕನಾಗಿದ್ದು, ಕಳೆದೆರಡು ದಿನಗಳಿಂದ ಆತ ಭವನಕ್ಕೆ ಕೆಲಸಕ್ಕೆ ಬಂದಿಲ್ಲ. ಜ್ವರ ಕಾಣಿಸಿಕೊಂಡಿದ್ದರಿಂದ ಆತನನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈಗ ಕರೊನಾ ಸೋಂಕಿರುವುದು ಖಚಿತವಾಗಿದೆ ಎಂದು ಭವನದ ಸಿಬ್ಬಂದಿಯೊಬ್ಬರು ಹೇಳಿದ್ದಾರೆ. ಸೋಂಕಿತ ದೆಹಲಿ ಮೂಲದವನಾಗಿದ್ದು, ಭವನಕ್ಕೆ ಸಂಬಂಧಿಸದ ವ್ಯಕ್ತಿಗಳ ಸಂಪರ್ಕದಿಂದ ಸೋಂಕು ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಯುವಕನ ಸಂಪರ್ಕಕ್ಕೆ ಬಂದ ಭವನದ ಇತರೆ ಸಿಬ್ಬಂದಿ ಬಗ್ಗೆ ಮಾಹಿತಿ ಕಲೆ ಹಾಕಲಾಗಿದ್ದು, ಸಂಬಂಧಿಸಿದವರಿಗೆ ಹೋಮ್ ಕ್ವಾರಂಟೈನ್ ಗೆ ಸೂಚಿಸಲಾಗಿದೆ. ಸೋಂಕಿತ ವ್ಯಕ್ತಿಯಲ್ಲಿ ಸಣ್ಣ ಪ್ರಮಾಣದ ಕರೊನಾ ಲಕ್ಷಣಗಳಿರುವುದರಿಂದ ಹೋಮ್ ಕ್ವಾರಂಟೈನ್ ಗೆ ಒಳಪಡಿಸಿ ಚಿಕಿತ್ಸೆ ಕಲ್ಪಿಸಲು ಆಸ್ಪತ್ರೆ ನಿರ್ಧರಿಸಿದೆ. ದೆಹಲಿಯಲ್ಲಿ ರಾಜ್ಯ ಸರ್ಕಾರ ಮೂರು ಭವನಗಳಿದ್ದು, ಸ್ವಯಂ ಚಾಲಿತ ಸ್ಯಾನಿಟೈಸರ್ ಸಾಧನ ಇರಿಸಲಾಗಿದ್ದು, ಕರೊನಾ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಂಡಿದ್ದೇವೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಟಲಿಯಲ್ಲಿ 85 ರೂ.ಗೆ ಮನೆ ಮಾರಾಟ!:ಕರೊನಾದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಇಟಲಿಯಲ್ಲಿ ಕೇವಲ -ಠಿ; 85ಕ್ಕೆ (1 ಯುರೋ) ಮನೆ ಮಾರಾಟ ಮಾಡಲಾಗುತ್ತಿದೆ. ದೇಶದ ನಗರವೊಂದರಲ್ಲಿರುವ ಸಿನ್ಕಫ್ರೊಂಡಿ ಸಮುದಾಯವು ತಮ್ಮ ಮನೆಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ. ಯುವಜನತೆ ದೊಡ್ಡ ದೊಡ್ಡ ನಗರಗಳತ್ತ ಹೊರಟು ಹೋಗಿರುವುದರಿಂದಾಗಿ ಪುಟ್ಟ ನಗರ ಪಾಳು ಬೀಳುವ ಹಂತ ತಲುಪಿದೆ. ಹಾಗಾಗಿ ಕರೊನಾ ಮುಕ್ತವಾಗಿರುವ ಈ ನಗರವನ್ನು ಆಪರೇಷನ್ ಬ್ಯೂಟಿಫುಲ್ ಮೂಲಕ ಅಂದವಾಗಿ ಕಾಣಿಸುವ ಪಣ ತೊಡಲಾಗಿದೆ. ಇಲ್ಲಿರುವ ಖಾಲಿ ಮನೆಗಳನ್ನು 85 ರೂಪಾಯಿಗೆ ಮಾರಾಟಮಾಡಲಾಗುವುದು. ಖರೀದಿದಾರರು ಮೂರು ವರ್ಷದೊಳಗಾಗಿ ಮನೆಯನ್ನು ಅಂದವಾಗಿ ಕಾಣುವಂತೆ ಮಾಡಬೇಕು. ಈ ಸಮಯದಲ್ಲಿ ವರ್ಷಕ್ಕೆ 21 ಸಾವಿರ ರೂಪಾಯಿ ಸೇವಾ ಶುಲ್ಕವನ್ನು ಕಟ್ಟಬೇಕು. ಮೂರು ವರ್ಷದ ನಂತರ ಮನೆ ಅಂದವಾಗಿ ಕಾಣಿಸದಿದ್ದರೆ ಅವರಿಗೆ -ಠಿ; 17 ಲಕ್ಷ ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.
ಮಾಸ್ಕ್ ಧರಿಸಿದರೆ ಸೋಂಕಿನಿಂದ ಪಾರು:ಮಾಸ್ಕ್ ಧರಿಸುವುದರಿಂದ ಕರೊನಾ ಸೋಂಕು ಪಸರಿಸುವಿಕೆಯನ್ನು ಹೆಚ್ಚು ತಡೆಗಟ್ಟಬಹುದು ಎಂದು ದಿ ಪೊ›ಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿಯಲ್ಲಿ ಪ್ರಕಟವಾದ ಅಧ್ಯಯನವೊಂದು ತಿಳಿಸಿದೆ. ಕರೊನಾದಿಂದಾಗಿ ಹೆಚ್ಚು ಬಾಧಿತವಾಗಿದ್ದ ಇಟಲಿಯಲ್ಲಿ ಏ.6ರಿಂದ ಹಾಗೂ ನ್ಯೂಯಾರ್ಕ್ ನಗರದಲ್ಲಿ ಏ.17ರಿಂದ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದ ಬಳಿಕ ಸೋಂಕು ಪಸರಿಸುವಿಕೆಯಲ್ಲಿ ಬದಲಾವಣೆ ಕಂಡು ಬಂದಿತ್ತು. ಇಟಲಿಯಲ್ಲಿ ಏ. 6ರಿಂದ ಮೇ 9ರವರೆಗೆ ಸುಮಾರು 78 ಸಾವಿರ ಮಂದಿ ಸೋಂಕಿಗೆ ಒಳಗಾಗುವ ಅಪಾಯದಿಂದ ಪಾರಾದರು. ನ್ಯೂಯಾರ್ಕ್​ನಲ್ಲಿ ಏ.17ರಿಂದ ಮೇ9ರವರೆಗೆ ಸುಮಾರು 6 ಸಾವಿರ ಮಂದಿ ಸೋಂಕಿನಿಂದ ಪಾರಾಗಿದ್ದಾರೆ. ನ್ಯೂಯಾರ್ಕ್​ನಲ್ಲಿ ಆ ವೇಳೆ ಪ್ರತಿ ದಿನದ ಹೊಸ ಪ್ರಕರಣಗಳು ಶೇಕಡಾ 3ರಷ್ಟು ಇಳಿಕೆಯಾದವು ಎಂದು ತಜ್ಞರು ತಿಳಿಸಿದ್ದಾರೆ.
ಶೀಘ್ರ ರೆಮ್ಡಿಸಿವಿರ್ ಔಷಧ ಉತ್ಪಾದನೆ:ಕರೊನಾ ರೋಗಿಗಳ ಚಿಕಿತ್ಸೆಗೆ ನಿರ್ಬಂಧಿತ ತುರ್ತು ಬಳಕೆಗಾಗಿ ಭಾರತ ಶೀಘ್ರದಲ್ಲೇ ದೇಶಿಯ ಆಂಟಿ-ವೈರಲ್ ರೆಮ್ಡಿಸಿವಿರ್ ಔಷಧ ಉತ್ಪಾದನೆಯನ್ನು ಪ್ರಾರಂಭಿಸಲಿದೆ. ಈ ಔಷಧವನ್ನು ಕೇವಲ ಕರೊನಾದಿಂದ ತೀವ್ರ ಅನಾರೋಗ್ಯಕ್ಕೀಡಾಗಿರುವ ರೋಗಿಗಳಿಗೆ ಬಳಸಲು ಇತ್ತೀಚೆಗೆ ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ ಅನುಮೋದನೆ ನೀಡಿದೆ.
ಭಾರತ ತಪ್ಪು ಸ್ಪರ್ಧೆಯಲ್ಲಿ ಗೆಲ್ಲುತ್ತಿದೆ:ಭಾರತವು ತಪು್ಪ ಸ್ಪರ್ಧೆಯಲ್ಲಿ ಜಯ ಸಾಧಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೂರಿದ್ದಾರೆ. ಪ್ರಪಂಚದಲ್ಲಿ ಕರೊನಾಕ್ಕೆ ಹೆಚ್ಚು ಬಾಧಿತ ದೇಶಗಳ ಪಟ್ಟಿಯಲ್ಲಿ ದೇಶ ನಾಲ್ಕನೇ ಸ್ಥಾನಕ್ಕೆ ಏರಿರುವುದರಿಂದಾಗಿ ಅವರು ಈ ಮಾತನ್ನು ಹೇಳಿದ್ದಾರೆ. ಲಾಕ್​ಡೌನ್ ಹೆಸರಿನಲ್ಲಿ ಮತ್ತೆ ಮತ್ತೆ ಹುಚ್ಚುತನವನ್ನು ತೋರ್ಪಡಿಸಲಾಗುತ್ತಿದೆ. ಸರ್ಕಾರದ ಅಸಮರ್ಪಕತೆ ಮತ್ತು ಅತಿಯಾದ ದುರಹಂಕಾರದಿಂದ ಭಯಾನಕ ದುರಂತವೊಂದು ಸಂಭವಿಸಲಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
