ನವದೆಹಲಿ:ದೇಶದಲ್ಲಿ ಕರೊನಾ ವ್ಯಾಪಕವಾಗಿ ಹೆಚ್ಚಳವಾಗುತ್ತಿದ್ದು, ಸೋಂಕಿನಿಂದ ಮೃತರಾದವರ ಸಂಖ್ಯೆ 10 ಸಾವಿರದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 115 ಜನರು ಸಾವನ್ನಪ್ಪಿದ್ದು ಸೋಂಕಿತರ ಸಂಖ್ಯೆ 10,033ಕ್ಕೆ ತಲುಪಿದೆ. ದೇಶದಲ್ಲಿ ಮಾರ್ಚ್ 12ರಂದು ಮೊದಲ ಸಾವು ವರದಿಯಾಗಿತ್ತು. ಏಪ್ರಿಲ್ 28ಕ್ಕೆ ಒಂದು ಸಾವಿರದ ಗಡಿ ದಾಟಿತ್ತು. ಮೊದಲೆಲ್ಲ ಒಂದು ಸಾವಿರ ಸಾವು ಸಂಭವಿಸಲು ಹತ್ತಕ್ಕೂ ಹೆಚ್ಚು ದಿನಗಳ ಕಾಲಾವಕಾಶ ಬೇಕಿತ್ತು. ಆದರೆ ಇದೀಗ ಆ ಸಂಖ್ಯೆ ಕೇವಲ 3 ದಿನಗಳಿಗೆ ಇಳಿದಿದೆ. ವಿಶ್ವದ ಸಾವಿನ ಪಟ್ಟಿಯಲ್ಲಿ ಭಾರತ 8ನೇ ಸ್ಥಾನಕ್ಕೆ ಏರಿದೆ.
ಕಳೆದ 24 ತಾಸಿನಲ್ಲಿ 5,000 ಹೊಸ ಸೋಂಕು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 3.48 ಲಕ್ಷಕ್ಕೆ ಏರಿಕೆಯಾಗಿದೆ. 4,200 ಜನರು ಸೋಂಕಿನಿಂದ ಗುಣಮುಖರಾಗಿದ್ದು, 1.53 ಲಕ್ಷ ಸಕ್ರಿಯ ಪ್ರಕರಣಗಳು ಬಾಕಿಯಿವೆ. ಗುಣಮುಖ ಪ್ರಮಾಣವು ಶೇ. 52.47ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಪ್ರತಿನಿತ್ಯ 3 ಲಕ್ಷಕ್ಕೂ ಹೆಚ್ಚು ಸ್ಯಾಂಪಲ್​ಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಸಾವಿನ ಸಂಖ್ಯೆಯಲ್ಲಿ ಮಹಾರಾಷ್ಟ್ರದಲ್ಲಿ 4,200, ಗುಜರಾತ್​ನಲ್ಲಿ 1,500, ದೆಹಲಿಯಲ್ಲಿ 1,400, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ 450ಕ್ಕೂ ಹೆಚ್ಚು ಸಾವು ವರದಿಯಾಗಿದೆ.
ಇದನ್ನೂ ಓದಿ;ಮಲೇರಿಯಾ ಮಾತ್ರೆ ಕರೊನಾ ನಿವಾರಿಸುವುದು ಅಮೆರಿಕಕ್ಕೇಕೆ ಬೇಕಿಲ್ಲ…?
ನ್ಯೂಜಿಲ್ಯಾಂಡ್​ಗೆ ಮತ್ತೆ ಕರೊನಾ:24 ದಿನಗಳಿಂದ ಹೊಸ ಪ್ರಕರಣಗಳು ಪತ್ತೆಯಾಗಿರದ ನ್ಯೂಜಿಲ್ಯಾಂಡ್​ನಲ್ಲಿ ಮಂಗಳವಾರ ಎರಡು ನೂತನ ಪ್ರಕರಣ ಪತ್ತೆಯಾಗಿದೆ. ಸೋಂಕಿತರಿಬ್ಬರೂ ಬ್ರಿಟನ್​ನಿಂದ ಮರಳಿದವರು ಎನ್ನಲಾಗಿದೆ. ಕಳೆದ ವಾರವಷ್ಟೇ ಪೂರ್ತಿ ದೇಶವನ್ನು ಹಸಿರು ವಲಯ ಎಂದು ಅಲ್ಲಿನ ಪ್ರಧಾನಿ ಘೋಷಿಸಿದ್ದರು. ಒಬ್ಬ ಸೋಂಕಿತನೂ ದೇಶದಲ್ಲಿಲ್ಲ ಎಂದು ತಿಳಿಸಲಾಗಿತ್ತು. ಬ್ರಿಟನ್​ನಲ್ಲಿರುವ ಪೋಷಕರು ಸಾಯುವ ಸ್ಥಿತಿಯಲ್ಲಿದ್ದಾರೆ ಎನ್ನುವ ಕಾರಣಕ್ಕೆ ಇಬ್ಬರು ಮಹಿಳೆಯರಿಗೆ ಅಲ್ಲಿಗೆ ತೆರಳಲು ಅನುಮತಿ ನೀಡಲಾಗಿತ್ತು. ಇವರಿಬ್ಬರು ಜೂನ್ 7ರಂದು ದೇಶಕ್ಕೆ ವಾಪಾಸಾಗಿದ್ದು ಕ್ವಾರಂಟೈನ್​ನಲ್ಲಿದ್ದರು. ಇದೀಗ ಅವರಿಬ್ಬರಲ್ಲೂ ಸೋಂಕು ದೃಢವಾಗಿದೆ.

ಜುಲೈ ಮಧ್ಯಕ್ಕೆ ಭಾರತದಲ್ಲಿ 8 ಲಕ್ಷ ಪ್ರಕರಣ?:ಭಾರತದಲ್ಲಿ ಜುಲೈ 15ರ ವೇಳೆಗೆ ಕರೊನಾ ಪ್ರಕರಣ 8 ಲಕ್ಷದ ಗಡಿ ದಾಟಲಿದೆ ಎಂದು ತಜ್ಞರ ತಂಡವೊಂದು ಹೇಳಿದೆ. ಮಿಚಿಗನ್ ವಿಶ್ವವಿದ್ಯಾಲಯದ ದತ್ತಾಂಶ ವಿಜ್ಞಾನಿಗಳ ತಂಡವು ಭಾರತದಲ್ಲಿ ಸೋಂಕು ಹರಡುವಿಕೆ ಕುರಿತಾಗಿ ಅಧ್ಯಯನ ನಡೆಸಿದ್ದು ಈ ವರದಿಯನ್ನು ಸಿದ್ಧಪಡಿಸಿದೆ. ಕರೊನಾ ಬಾಧಿತ ದೇಶಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತ ಜುಲೈನಲ್ಲಿ ಮೂರನೇ ಸ್ಥಾನಕ್ಕೇರಲಿದೆ. ಕರೊನಾ ಅಲೆಯ ಗರಿಷ್ಠ ಮಟ್ಟ 8 ಲಕ್ಷವಲ್ಲದೆ ಅದಕ್ಕೂ ಮೇಲಕ್ಕೇರಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ. ಮುಂದಿನ ಒಂದೆರೆಡು ತಿಂಗಳುಗಳ ಕಾಲ ಭಾರತದಲ್ಲಿ ಕರೊನಾ ಆರ್ಭಟ ಅತ್ಯಂತ ಹೆಚ್ಚಿರಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ;ಕರೊನಾದ ಸಾವಿನ ಕುಣಿಕೆಯಿಂದ ಪಾರು ಮಾಡುತ್ತಿದೆ ಈ ಔಷಧ…!
ಬೀಜಿಂಗ್​ನಲ್ಲಿ ಕರೊನಾ ತೀವ್ರ:ಚೀನಾದ ಬೀಜಿಂಗ್​ನಲ್ಲಿ ಕರೊನಾ ವೈರಸ್ ಮತ್ತೊಮ್ಮೆ ಹರಡಲಾರಂಭಿಸಿದ್ದು, ಪರಿಣಾಮ ತೀವ್ರವಾಗಲಿದೆ ಎಂದು ನಗರದ ವಕ್ತಾರ ಕ್ಸು ಹೆಜಿಯಾನ್ ತಿಳಿಸಿದ್ದಾರೆ. 24 ತಾಸಿನಲ್ಲಿ 27 ನೂತನ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಐದೇ ದಿನಗಳಲ್ಲಿ ನಗರದ ವಿವಿಧ ಭಾಗದಲ್ಲಿ ಒಟ್ಟು 106 ಪ್ರಕರಣಗಳು ದೃಢವಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಕೂಡ ಎಚ್ಚರಿಕೆ ನೀಡಿದೆ. ಬೀಜಿಂಗ್​ನಲ್ಲಿ ಮಾರ್ಕೆಟ್ ಒಂದರಲ್ಲಿ ಸೋಂಕು ಮರು ಕಾಣಿಸಿಕೊಂಡಿದ್ದು, ಮಾರ್ಕೆಟ್ ಬಂದ್ ಮಾಡಲಾಗಿದ್ದು, ಎಲ್ಲ ವ್ಯಾಪಾರಿಗಳನ್ನು ಪರೀಕ್ಷಿಸಲಾಗಿದೆ. ಪ್ರತಿ ದಿನ 90 ಸಾವಿರಕ್ಕೂ ಹೆಚ್ಚು ಪರೀಕ್ಷೆ ನಡೆಸುತ್ತಿರುವುದಾಗಿ ಹೆಜಿಯಾನ್ ಹೇಳಿದ್ದಾರೆ.
ಈ ಕಾರನ್ನು ಒಮ್ಮೆ ಚಾರ್ಜ್​ ಮಾಡಿದರೆ, ಬೆಂಗಳೂರಿನಿಂದ ಬೀದರ್​ಗೆ ಹೋಗಬಹುದು…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + seven =
Remember me
