ನವದೆಹಲಿ:ಕೋವಿಡ್​ ಸೋಂಕಿನಿಂದಾಗಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಪಡೆಯಲು ಸಹಾಯವಾಗುವಂತೆ ಕೋವಿಡ್​​ 19 ಸಾವು ಎಂಬ ಪ್ರಮಾಣಪತ್ರಗಳನ್ನು ನೀಡುವ ಬಗ್ಗೆ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಜಾರಿ ಮಾಡಿದೆ. ಈ ಬಗ್ಗೆ ಸರ್ಕಾರದ ವಿಳಂಬನೀತಿಯನ್ನು ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂ ಕೋರ್ಟ್​ ಮುಂದೆ, ಸರ್ಕಾರಿ ವಕೀಲರು ಶನಿವಾರ ಸಂಜೆ ಅಫಿಡೆವಿಟ್​ ಮೂಲಕ ಮಾಹಿತಿ ನೀಡಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಐಸಿಎಂಆರ್​ ಜಂಟಿಯಾಗಿ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ, ಆರ್‌ಟಿ-ಪಿಸಿಆರ್ ಪರೀಕ್ಷೆ, ಮಾಲಿಕ್ಯುಲರ್ ಪರೀಕ್ಷೆ, ರಾಪಿಡ್​-ಆ್ಯಂಟಿಜನ್​​ ಪರೀಕ್ಷೆ ಮೂಲಕ, ಅಥವಾ ಆಸ್ಪತ್ರೆಯಲ್ಲಿ ಅಥವಾ ಇತರ ಒಳರೋಗಿಗಳ ಸೌಲಭ್ಯವಿರುವ ಕೇಂದ್ರದಲ್ಲಿ ತನಿಖೆಗಳ ಮೂಲಕ ಅಥವಾ ವೈದ್ಯರಿಂದ ನಿರ್ಧರಿಸಲ್ಪಟ್ಟ ಕೋವಿಡ್ -19 ಪ್ರಕರಣಗಳನ್ನು ಮಾತ್ರ ಪರಿಗಣಿಸಲಾಗುವುದು.
ಇದನ್ನೂ ಓದಿ:ಸಂಕಷ್ಟದಲ್ಲಿ ಶುಲ್ಕ ರಿಯಾಯಿತಿ ನೀಡಿ ; ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಎಸ್. ಮುನಿಸ್ವಾಮಿ ಸಲಹೆ
ಕರೊನಾ ಪಾಸಿಟೀವ್​ ಬಂದ ಪರೀಕ್ಷೆಯ ದಿನಾಂಕದಿಂದ ಅಥವಾ ಕೋವಿಡ್ -19 ಪ್ರಕರಣವೆಂದು ವೈದ್ಯಕೀಯವಾಗಿ ನಿರ್ಧರಿಸಿದ ದಿನಾಂಕದಿಂದ 30 ದಿನಗಳೊಳಗೆ ರೋಗಿಯು ಆಸ್ಪತ್ರೆಯಲ್ಲಿ ಅಥವಾ ಆಸ್ಪತ್ರೆಯ ಹೊರಗೆ(ಮನೆಯಲ್ಲಿ ಅಥವಾ ಇತರ ಶುಶ್ರೂಷಾ ಕೇಂದ್ರಗಳಲ್ಲಿ) ಸಾವನ್ನಪ್ಪಿದ್ದರೆ, ಅದನ್ನು ಕೋವಿಡ್ -19 ನಿಂದ ಆದ ಸಾವು ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಲಾಗಿದೆ.
ಜೊತೆಗೆ, ಕರೊನಾ ರೋಗಿಯನ್ನು 30 ದಿನಗಳಿಗಿಂತ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಅಥವಾ ಒಳರೋಗಿ ಸೌಲಭ್ಯದಲ್ಲಿ ದಾಖಲಿಸಲಾಗಿದ್ದು ಅವರು ನಂತರ ಸಾವನ್ನಪ್ಪಿದರೆ ಕೂಡ ಕೋವಿಡ್ -19 ಸಾವು ಎಂದು ಪರಿಗಣಿಸಲಾಗುತ್ತದೆ. ಆದರೆ, ವಿಷ, ಆತ್ಮಹತ್ಯೆ, ಹತ್ಯೆ ಮತ್ತು ಅಪಘಾತದಿಂದ ಸಂಭವಿಸುವ ಸಾವುಗಳನ್ನು ಕೋವಿಡ್ -19 ಸ್ಥಿತಿಯಿದ್ದರೂ ಸಹ, ಕೋವಿಡ್ -19 ಸಾವು ಎಂದು ಪರಿಗಣಿಸಲಾಗುವುದಿಲ್ಲ ಎಂದು ಮಾರ್ಗಸೂಚಿಗಳಲ್ಲಿ ಹೇಳಲಾಗಿದೆ.(ಏಜೆನ್ಸೀಸ್)
ತಾರಾಸಂಗಮ: ರಣವೀರ್​, ದೀಪಿಕಾ ಜೊತೆ ಪಿ.ವಿ.ಸಿಂಧು ಡಿನ್ನರ್!

ಬೆಂಗಳೂರಿಗರೇ, ಎಚ್ಚರ! 3 ತಿಂಗಳಲ್ಲಿ 6 ಪಟ್ಟು ಹೆಚ್ಚಿದೆ ಡೆಂಘೆ ಜ್ವರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
