ಮುಂಬೈ :ಡೆಲ್ಟಾ ಪ್ಲಸ್​ ಕರೊನಾ ರೂಪಾಂತರಿ ಸೋಂಕಿನಿಂದಾಗಿ ಈವರೆಗೆ ಮಹಾರಾಷ್ಟ್ರದಲ್ಲಿ ಮೂರು ಸಾವುಗಳು ವರದಿಯಾಗಿದ್ದು, ಮೂರೂ ಪ್ರಕರಣಗಳು ಹಿರಿಯ ನಾಗರೀಕರದ್ದಾಗಿವೆ.
ಮುಂಬೈನ 63 ವರ್ಷ ವಯಸ್ಸಿನ ಕರೊನಾ ಸೋಂಕಿತ ಮಹಿಳೆಯು ಜುಲೈ 27 ರಂದು ಮೃತಪಟ್ಟಿದ್ದು, ಜಿನೋಮ್​ ಸೀಕ್ವೇಂಸಿಂಗ್​ನಿಂದ ಅವರು ಡೆಲ್ಟಾ ಪ್ಲಸ್​ ರೂಪಾಂತರಿಯ ಸೋಂಕು ಹೊಂದಿದ್ದರೆಂಬುದು ಇದೀಗ ಖಚಿತವಾಗಿದೆ. ಕಳೆದ ತಿಂಗಳಲ್ಲಿ ರಾಯಗಡದ 69 ವರ್ಷದ ಪುರುಷ ಮತ್ತು ರತ್ನಗಿರಿಯ 80 ವರ್ಷದ ಮಹಿಳೆ ಇದೇ ರೂಪಾಂತರಿಯ ಸೋಂಕಿನಿಂದ ಮೃತಪಟ್ಟಿದ್ದರು.
ಇದನ್ನೂ ಓದಿ:ಕೆಲಸದಾಕೆಯ ಕರಾಮತ್ತು: 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
ಇತ್ತೀಚೆಗೆ ಮೃತಪಟ್ಟ ಮುಂಬೈನ ಸೋಂಕಿತೆಯು ಹಲವು ಕೋರ್ಮಾರ್ಬಿಡಿಟೀಸ್​ ಹೊಂದಿದ್ದರು. ಆಕ್ಸಿಜನ್​ ಸಪೋರ್ಟ್​ ಕೊಟ್ಟು, ರೆಮ್​ಡೆಸಿವಿರ್​ ಚುಚ್ಚುಮದ್ದಿನಿಂದ ಕೂಡ ಚಿಕಿತ್ಸೆ ನೀಡಲಾಗಿದ್ದರೂ ಫಲಕಾರಿಯಾಗಿರಲಿಲ್ಲ. ನಗರದಲ್ಲಿ ಡೆಲ್ಟಾ ಪ್ಲಸ್​ ರೂಪಾಂತರಿಗೆ ಪಾಸಿಟೀವ್ ಬಂದಿದ್ದ ಏಳು ಜನರಲ್ಲಿ ಒಬ್ಬರಾಗಿದ್ದ ಈಕೆ ಕರೊನಾ ಲಸಿಕೆ ಕೂಡ ಪಡೆದಿದ್ದರು ಎನ್ನಲಾಗಿದೆ.
ಮುಂಬೈನ 7 ಜನ ಸೋಂಕಿತರೊಂದಿಗೆ ಬೇರೆ ಜಿಲ್ಲೆಗಳಲ್ಲಿ ಇನ್ನೂ 13 ಜನರಲ್ಲಿ ಡೆಲ್ಟಾಪ್ಲಸ್​ ರೂಪಾಂತರಿಯ ಸೋಂಕು ಕಂಡುಬಂದಿದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ದೇಶಾದ್ಯಂತ ಈವರೆಗೆ 65 ಸೋಂಕು ಪ್ರಕರಣಗಳಲ್ಲಿ ಈ ರೂಪಾಂತರಿ ಕಂಡುಬಂದಿದೆ.(ಏಜೆನ್ಸೀಸ್)
15 ಕೋಟಿ ಮಕ್ಕಳು-ಯುವಜನರು ಶಿಕ್ಷಣ ವ್ಯವಸ್ಥೆಯ ಹೊರಗುಳಿದಿದ್ದಾರೆ : ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

ಫ್ರಿಜ್ಜಲ್ಲಿ ವೃದ್ಧನ ಶವ ಪತ್ತೆ! ಮೊಮ್ಮಗ ಕೊಟ್ಟ ಕಾರಣಕ್ಕೆ ಪೊಲೀಸರು ತಬ್ಬಿಬ್ಬು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − twelve =
Remember me
