ನವದೆಹಲಿ:ಭಾರತದ ಮಹತ್ವಾಕಾಂಕ್ಷಿಯ ಮೊದಲ ಮಾನವ ಸಹಿತ ಗಗನಯಾನ ಯೋಜನೆಯು ಕರೊನಾ ಬಿಕ್ಕಟ್ಟಿನ ಕಾರಣ ತುಸು ವಿಳಂಬ ಆಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ (ಇಸ್ರೊ) ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಆಸ್ಟ್ರೋನಾಟಿಕಲ್ ಕಾಂಗ್ರೆಸ್ (ಐಎಸಿ) 2020ರ ಸಮಗ್ರ ಅಧಿವೇಶನದಲ್ಲಿ ಮಾತನಾಡಿದ ಅವರು, 2022ರ ಆಗಸ್ಟ್ ವೇಳೆಗೆ ಉಡಾವಣೆಯಾಗಬೇಕಿದ್ದ ಗಗನಯಾನ ಮಿಷನ್ ಕೊಂಚ ನಿಧಾನವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಗಗನಯಾನ ಮಿಷನ್​ಗೂ ಪೂರ್ವಭಾವಿಯಾಗಿ ಎರಡು ಬಾರಿ ಮಾನವ ರಹಿತ ಮಿಷನ್ ಕೈಗೊಳ್ಳಲಾಗುತ್ತದೆ. ಅದರಲ್ಲಿ ಮೊದಲನೇ ಮಿಷನ್ ಈ ವರ್ಷದ ಡಿಸೆಂಬರ್​ನಲ್ಲಿ ನಡೆಯಬೇಕಿತ್ತಾದರೂ ಕರೊನಾ ಕಾರಣದಿಂದ ಅದು ಮುಂದೂಡಿಕೆಯಾಗಿದೆ. ಗಗನಯಾತ್ರಿಗಳಿಗೆ ರಷ್ಯಾದಲ್ಲಿ ತರಬೇತಿ ನೀಡಲಾಗುತ್ತಿದ್ದು, ಕರೊನಾ ಕಾರಣದಿಂದ ತರಬೇತಿಯೂ ಕೂಡ ಮಧ್ಯದಲ್ಲಿ ಕೆಲ ತಿಂಗಳು ಸ್ಥಗಿತವಾಗಿತ್ತು. 2022ರಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ 2018ರಲ್ಲಿ ಘೋಷಿಸಿದ್ದರು.ಇದನ್ನೂ ಓದಿ:ಸಹೋದರಿಯರ ಮೇಲೆ ಆ್ಯಸಿಡ್​ ಎರಚಿದ್ದವನ ಗುಂಡು​ ಹಾರಿಸಿ ಬಂಧಿಸಿದ ಪೊಲೀಸರು…
59 ದೇಶಗಳೊಂದಿಗೆ ಒಪ್ಪಂದ: ಬಾಹ್ಯಾಕಾಶ ಸಹಕಾರ ಕ್ಷೇತ್ರದಲ್ಲಿನ ಅಭಿವೃದ್ಧಿಗಾಗಿ 59 ದೇಶಗಳೊಂದಿಗೆ 250 ಒಪ್ಪಂದ ಅಥವಾ ದಾಖಲೆಗಳಿಗೆ ಭಾರತ ಸಹಿ ಹಾಕಿದ್ದು, ಇದರಿಂದ ಬಾಹ್ಯಾಕಾಶ ಯೋಜನೆಗಳಿಗೆ ಸಹಾಯವಾಗಲಿದೆ ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ. ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ರಷ್ಯಾ, ಅಮೆರಿಕ, ಫ್ರಾನ್ಸ್, ಜಪಾನ್ ಮತ್ತು ಇಸ್ರೇಲ್ ಭಾರತದ ಪ್ರಮುಖ ಸಹಕಾರ ಪಾಲುದಾರ ರಾಷ್ಟ್ರಗಳಾಗಿವೆ. ನವೆಂಬರ್ ಮೊದಲ ವಾರದಲ್ಲಿ ಪಿಎಸ್​ಎಲ್​ವಿಸಿ-49 ಉಡಾವಣೆಯನ್ನು ನಡೆಸಲು ಯೋಜಿಸುತ್ತಿದ್ದೇವೆ ಎಂದಿದ್ದಾರೆ.
ತಮಿಳುನಾಡಿನ ಮೂವರು ವಿದ್ಯಾರ್ಥಿಗಳು ತಯಾರಿಸಿರುವ ಇಂಡಿಯನ್ ಸ್ಯಾಟ್ ಹೆಸರಿನ ಪುಟ್ಟ (ನ್ಯಾನೊ) ಉಪಗ್ರಹವನ್ನು ಅಮೆರಿಕದ ನಾಸಾ ಉಡಾವಣೆ ಮಾಡಲಿದೆ. ಚೆನೈ ಮೂಲದ ಸ್ಟೇಸ್ ಕಿಡ್ಸ್ ಇಂಡಿಯಾ ಮಾರ್ಗದರ್ಶನದಲ್ಲಿ ಎಂ.ಅಡ್ನಾನ್, ಎಂ.ಕೇಶವನ್ ಮತ್ತು ವಿ.ಅರುಣ್ ಈ ಪುಟ್ಟ ಉಪಗ್ರಹ ತಯಾರಿಸಿದ್ದಾರೆ. ನಾಸಾ ಸಹಯೋಗದೊಂದಿಗೆ ನಡೆಸಲಾದ ಬಾಹ್ಯಾಕಾಶ ವಿಜ್ಞಾನಿಗಳ ಜಾಗತಿಕ ಸ್ಪರ್ಧಾತ್ಮಕ ಕಾರ್ಯಕ್ರಮವಾದ ಕ್ಯೂಬ್ಸ್ ಇನ್ ಸ್ಪೇಸ್ ಸ್ಪರ್ಧೆಯಲ್ಲಿ ಈ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ. 3 ಸೆಂ.ಮೀ ಗಾತ್ರ ಹಾಗೂ 64 ಗ್ರಾಂ ತೂಕವಿದ್ದರೂ ಈ ಉಪಗ್ರಹ ಭೂಮಿಗೆ ಸಂಕೇತಗಳನ್ನು ರವಾನಿಸುವ ಸಾಮರ್ಥ್ಯ ಹೊಂದಿದೆ.
ನಮ್ಮ ಹೆಣ್ಮಕ್ಕಳನ್ನು ಮುಟ್ಟಿದರೆ ನಿಮಗೆ ಮರಣವೇ ಶಿಕ್ಷೆ: ಲವ್ ಜಿಹಾದಿಗಳಿಗೆ ಅಸ್ಸಾಂ ಸಚಿವನ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − three =
Remember me
