ನವದೆಹಲಿ:ಕಳೆದ ಒಂದು ವಾರದಲ್ಲಿ ಭಾರತದಲ್ಲಿ ಕರೊನಾ ಸೋಂಕಿನ ಪ್ರಕರಣಗಳು ದುಪ್ಪಟ್ಟಾಗಿದ್ದು ಕನಿಷ್ಠ 12 ರಾಜ್ಯಗಳಲ್ಲಿ ಸೋಂಕು ಹೆಚ್ಚುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಏಪ್ರಿಲ್ 18ರಿಂದ 24ರ ವರೆಗಿನ ಏಳು ದಿನದಲ್ಲಿ ದೇಶದಲ್ಲಿ 15,700ಕ್ಕೂ ಅಧಿಕ ಕೇಸ್​ಗಳು ದೃಢಪಟ್ಟಿವೆ. ಅದಕ್ಕೂ ಹಿಂದಿನ ವಾರದಲ್ಲಿ 8,050 ಪ್ರಕರಣ ವರದಿಯಾಗಿದ್ದು ಒಂದು ವಾರದಲ್ಲಿ ಶೇಕಡ 95 ಏರಿಕೆ ದಾಖಲಾಗಿದೆ. ಸತತ 11 ವಾರ ಸೋಂಕು ಇಳಿಕೆಯಾದ ನಂತರ ಈ ಎರಡು ವಾರಗಳಲ್ಲಿ ವ್ಯಾಧಿಪೀಡಿತರ ಸಂಖ್ಯೆ ಹೆಚ್ಚಾಗಿದೆ. ಹಿಂದಿನ ವಾರದಲ್ಲಿ ಹೆಚ್ಚಿದ ಸೋಂಕಿನಲ್ಲಿ ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದ ಪಾಲು ಹೆಚ್ಚಿದೆ. ರಾಷ್ಟ್ರ ರಾಜಧಾನಿ ಪ್ರದೇಶದ (ಎನ್​ಸಿಆರ್) ನಗರಗಳಲ್ಲೇ ಅಧಿಕ ಪ್ರಕರಣಗಳು ದಾಖಲಾಗಿವೆ. ನಂತರ, ಏಪ್ರಿಲ್ 24ರಂದು ಅಂತ್ಯವಾದ ವಾರದಲ್ಲಿ ಕರ್ನಾಟಕ ಸಹಿತ ಇನ್ನೂ ಒಂಬತ್ತು ರಾಜ್ಯಗಳಲ್ಲಿ ಕರೊನಾ ಸೋಂಕಿನಲ್ಲಿ ಏರಿಕೆ ಕಂಡು ಬಂದಿದೆ. ಕೇರಳ, ಮಹಾರಾಷ್ಟ್ರ, ತಮಿಳುನಾಡು, ಬಂಗಾಳ, ರಾಜಸ್ಥಾನ ಮತ್ತು ಪಂಜಾಬ್ ಅವುಗಳಲ್ಲಿ ಪ್ರಮುಖವಾಗಿವೆ.
ಹೆಚ್ಚುತ್ತಿರುವ ಪ್ರತಿರೋಧ:ಚೀನಾದಲ್ಲಿ ಅನುಸರಿಸಲಾಗುತ್ತಿರುವ ಝೀರೋ ಕೋವಿಡ್ ನೀತಿಗೆ ಪ್ರತಿರೋಧ ಹೆಚ್ಚಾಗುತ್ತಿದೆ. ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಆರ್ಥಿಕತೆಗೆ ಹಾನಿಯಾಗಿದೆ ಎಂಬ ಭೀತಿಯ ನಡುವೆ ಎಣ್ಣೆ ಮತ್ತು ಕಬ್ಬಿಣ ಅದಿರಿನ ಷೇರು ಮೌಲ್ಯ ಕುಸಿದಿದೆ. ಇಡೀ ಶಾಂಘೈ ನಗರದಲ್ಲಿ ಲಾಕ್​ಡೌನ್ ಹೇರುವ ಸಾಧ್ಯತೆ ಹಿನ್ನೆಲೆಯಲ್ಲಿ ಜನರು ಗಾಬರಿಯಿಂದ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ.
ಸಕ್ರಿಯ ಕೇಸ್ 16,522ಕ್ಕೆ ಏರಿಕೆ:ಭಾರತದಲ್ಲಿ ಸೋಮವಾರ ಕರೊನಾ ಸೋಂಕಿನ 2,541 ಹೊಸ ಕೇಸ್​ಗಳು ದೃಢಪಟ್ಟಿದ್ದು 30 ಜನರು ಮೃತಪಟ್ಟಿದ್ದಾರೆ. ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 16,522ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಬೀಜಿಂಗ್​ನಲ್ಲಿ ಸಾಮೂಹಿಕ ಪರೀಕ್ಷೆ:ಚೀನಾದ ವಾಣಿಜ್ಯ ಕೇಂದ್ರ ಶಾಂಘೈಯಲ್ಲಿ ನಾಲ್ಕನೇ ವಾರವೂ ಕರೊನಾ ಸೋಂಕಿನ ಅಬ್ಬರ ಮುಂದುವರಿದಿದ್ದು ಸೋಮವಾರ ಒಂದೇ ದಿನ 51 ಜನರು ಬಲಿಯಾಗಿದ್ದಾರೆ. ಇದು ಗರಿಷ್ಠ ದೈನಿಕ ಸಾವಾಗಿದೆ. ಈ ನಡುವೆ, ಚೀನಾ ರಾಜಧಾನಿ ಬೀಜಿಂಗ್​ನ ಒಂದು ಪ್ರಮುಖ ಜಿಲ್ಲೆಯಲ್ಲಿ ಮೂರು ದಿನ ಕಾಲದ ಸೋಂಕು ಪತ್ತೆಯ ಸಾಮೂಹಿಕ ಪರೀಕ್ಷೆ ಸೋಮವಾರ ಆರಂಭವಾಗಿದೆ. 35 ಲಕ್ಷ ಜನಸಂಖ್ಯೆಯ ಚಾವೋಯಾಂಗ್ ಜಿಲ್ಲೆಯ ನಿವಾಸಿಗಳು ಮೂರು ಸುತ್ತಿನ ಸಾಮೂಹಿಕ ನ್ಯೂಕ್ಲಿಕ್ ಆಸಿಡ್ ಟೆಸ್ಟ್​ಗೆ ಒಳಪಡಬೇಕೆಂದು ಅಧಿಕಾರಿಗಳು ಆದೇಶಿಸಿದ್ದಾರೆ. ಸೋಂಕಿನ ಇತ್ತೀಚಿನ ಅಬ್ಬರದ ವೇಳೆ ಈ ಜಿಲ್ಲೆಯಲ್ಲೇ ಅತಿ ಹೆಚ್ಚು ಪ್ರಕರಣಗಳು ದೃಢಪಟ್ಟಿದ್ದರಿಂದ ಸರ್ಕಾರ ಸಾಮೂಹಿಕ ಪರೀಕ್ಷೆಗೆ ಮುಂದಾಗಿದೆ. ಸೋಮವಾರ, ಬುಧವಾರ ಮತ್ತು ಶುಕ್ರವಾರ ಪರೀಕ್ಷೆ ನಡೆಯಲಿದೆ. ಭಾನುವಾರ ಚೀನಾದಲ್ಲಿ 20,190 ಹಾಗೂ ಶಾಂಘೈಯಲ್ಲಿ 2,472 ಪಾಸಿಟಿವ್ ಕೇಸ್​ಗಳು ವರದಿಯಾಗಿವೆ.
ಮಾಸ್ಕ್​ ಧರಿಸುವುದು ಕಡ್ಡಾಯ, ಉಗುಳಿದ್ರೂ ದಂಡ: ಸರ್ಕಾರದಿಂದ ಹೊಸದಾಗಿ ಮತ್ತೆ ಆದೇಶ..

ಹಿಜಾಬ್​ಗಾಗಿ ಪಿಯುಸಿ ಪರೀಕ್ಷೆಯನ್ನೇ ಬಹಿಷ್ಕರಿಸಿದ ಆರು ವಿದ್ಯಾರ್ಥಿನಿಯರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 3 =
Remember me
