ಮುಂಬೈ :ಕರೊನಾ ಸೋಂಕು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ಸಮಸ್ಯೆ ಪೊಲೀಸರನ್ನು ಕಾಡುತ್ತಿದೆ. ಕರೊನಾ ಚಿಕಿತ್ಸೆಯಲ್ಲಿ ಬಳಸುವ ಪ್ರಮುಖ ಔಷಧಿಯಾದ ರೆಮ್​ಡೆಸಿವಿರ್ ಇಂಜೆಕ್ಷನ್​ಗಳನ್ನು ಬ್ಲಾಕ್ ಮಾರ್ಕೆಟ್​ನಲ್ಲಿ ಹೆಚ್ಚಿನ ಬೆಲೆಗೆ ಮಾರುವ ಪ್ರಯತ್ನವನ್ನು ದುಷ್ಕರ್ಮಿಗಳು ಮಾಡುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಅತ್ಯಧಿಕ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರೆಮ್​ಡೆಸಿವಿರ್ ಇಂಜೆಕ್ಷನ್​ಗಳಿಗೆ ಭಾರೀ ಬೇಡಿಕೆ ಬಂದಿದೆ. ಆದ್ದರಿಂದ ಏಪ್ರಿಲ್ 8 ರಂದು ಮಹಾರಾಷ್ಟ್ರ ಸರ್ಕಾರ ಈ ಇಂಜೆಕ್ಷನ್​ಗಳಿಗೆ ಹೆಚ್ಚು ಹಣ ಪಡೆಯುವುದನ್ನು ತಡೆಯಲು ಅದರ ಬೆಲೆಯನ್ನು ಒಂದು ವಯಲ್​ಗೆ 1,100 ರೂ.ಗಳಿಂದ 1,400 ರೂ.ಗಳ ನಡುವೆ ನಿಗದಿಗೊಳಿಸಿದೆ. ಈ ವಿಪತ್ತಿನ ಸಮಯದಲ್ಲಿ ಈ ಔಷಧಿಯನ್ನು ಶೇಖರಿಸಿಡುವುದು ಮತ್ತು ಬ್ಲಾಕ್ ಮಾರ್ಕೆಟ್​​ನಲ್ಲಿ ಮಾರುವುದರ ವಿರುದ್ಧ ಔಷಧಿ ಮಾರಾಟಗಾರರಿಗೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ:ಬಾಡಿ ಬಿಲ್ಡರ್ ಯುವಕನ ಬರ್ಬರ ಹತ್ಯೆ, ಶವಾಗಾರದ ಮುಂದೆ ಪ್ರತಿಭಟನೆ
ನಿನ್ನೆ ಮುಂಬೈನಲ್ಲಿ ವ್ಯಕ್ತಿಯೊಬ್ಬನನ್ನು ಒಂದು ಡಜನ್ ರೆಮ್​ಡೆಸಿವಿರ್​ ಇಂಜೆಕ್ಷನ್ ವಯಲ್​ಗಳೊಂದಿಗೆ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇಪ್ಪತ್ತೆರಡು ವರ್ಷ ವಯಸ್ಸಿನ ಸರ್​ಫರಾಜ್ ಹುಸೈನ್ ಎಂಬುವ ಬಂಧಿತ ವ್ಯಕ್ತಿ.
ಕಳ್ಳ ಮಾರುಕಟ್ಟೆಯಲ್ಲಿ ಔಷಧಿ ಮಾರುವ ಪ್ರಯತ್ನದ ಬಗ್ಗೆ ಬಂದ ಖಚಿತ ಮಾಹಿತಿಯ ಮೇಲೆ ಅಂಧೇರಿ ಈಸ್ಟ್​ನ ಅಪರಾಧ ವಿಭಾಗದ ಪೊಲೀಸರು ನಿನ್ನೆ ಸಂಜೆ ಶೋಧ ನಡೆಸಿದರು. ಆ ಸಮಯದಲ್ಲಿ ಹುಸೈನ್ 12 ವಯಲ್​ಗಳನ್ನು ಹೊಂದಿರುವುದು ಪತ್ತೆಯಾಗಿದೆ. ಸದರಿ ವಯಲ್​ಗಳನ್ನು ಜಪ್ತಿ ಮಾಡಿಕೊಂಡಿರುವ ಪೊಲೀಸರು ಕೇಸು ದಾಖಲಿಸಿದ್ದಾರೆ.(ಏಜೆನ್ಸೀಸ್)
ಏಪ್ರಿಲ್ 11 ರಿಂದ ಕೆಲಸದ ಸ್ಥಳಗಳಲ್ಲೇ ಕರೊನಾ ಲಸಿಕೆ ಸೌಲಭ್ಯ
VIDEO | ಅನುಷ್ಕಾ ಶಕ್ತಿ ಪ್ರದರ್ಶನಕ್ಕೆ ವಿರಾಟ್ ಕೊಹ್ಲಿ ಬೌಲ್ಡ್ ಔಟ್ !
VIDEO | ವೇದಿಕೆಯ ಮೇಲೆ ಜಟಾಪಟಿ : ಮಿಸಸ್ ಶ್ರೀಲಂಕಾ ತಲೆಯಿಂದ ಮುಕುಟ ಕಿತ್ತುತೆಗೆದ ಮಿಸಸ್​ ವರ್ಲ್ಡ್ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + eleven =
Remember me
