ನವದೆಹಲಿ:ಕೋವಿಡ್-19 ಸೋಂಕಿನ ಅಂತ್ಯಕಾಲ ಇನ್ನೇನು ಸಮೀಪಿಸುತ್ತಿದೆ ಎಂಬ ಭರವಸೆ ಮೂಡುವ ಹೊತ್ತಿಗೆ ಮತ್ತೆ ಆತಂಕದ ಅಲೆ ಅಪ್ಪಳಿಸಿದೆ. ಕರೊನಾ ಸೋಂಕಿನ ಇನ್ನೊಂದು ಮಾರಕ ಪ್ರಭೇದ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದು, ಇದು ಡೆಲ್ಟಾ ರೂಪಾಂತರಿಗಿಂತಲೂ ಅಪಾಯಕಾರಿ ಎಂಬ ತಜ್ಞರ ಹೇಳಿಕೆ ಚಿಂತೆ ಹೆಚ್ಚಿಸಿದೆ.
ಹೊಸ ಪ್ರಭೇದ ಪತ್ತೆಯಾಗಿರುವ ಸುದ್ದಿ ಬಹಿರಂಗವಾಗುತ್ತಲೇ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ತಲ್ಲಣ ಉಂಟಾಗಿದೆ. ಸೆನ್ಸೆಕ್ಸ್, ನಿಫ್ಟಿ ಸಹಿತ ಜಗತ್ತಿನ ಇತರ ಷೇರು ಮಾರುಕಟ್ಟೆಗಳಲ್ಲಿ ಶುಕ್ರವಾರ ವ್ಯವಹಾರ ಮಂದಗತಿಯಲ್ಲಿ ನಡೆದಿದ್ದು, ಹೊಸ ಪ್ರಭೇದವು ಜಾಗತಿಕ ಆರ್ಥಿಕತೆಯ ಚೇತರಿಕೆಗೆ ದೊಡ್ಡ ಹೊಡೆತ ನೀಡಲಿದೆ ಎಂಬ ಆತಂಕಕ್ಕೆ ಕಾರಣವಾಗಿದೆ.
ರೂಪಾಂತರಿಗಳ ಗುಚ್ಛ:ಕರೊನಾ ವೈರಸ್​ನ ಹೊಸ ರೂಪಾಂತರಿಯನ್ನು ಬಿ.1.1.529 ಎಂದು ಹೆಸರಿಸಲಾಗಿದೆ. ‘ಈ ಪ್ರಭೇದವು ಹೊಸ ರೂಪಾಂತರಿಗಳ ಸಮೂಹವನ್ನೇ ಹೊಂದಿದೆ’ ಎಂದು ದಕ್ಷಿಣ ಆಫ್ರಿಕಾದ ಜೆನೊಮಿಕ್ ನಿಗಾ ಜಾಲದ ಟ್ಯೂಲಿಯೋ ಡೆ ಒಲಿವೆರಾ ಹೇಳಿದ್ದಾರೆ. ಇದು, ದೇಶದಲ್ಲಿ ಹೊಸ ಪ್ರಭೇದ ಹರಡುತ್ತಿರುವುದನ್ನು ಪತ್ತೆ ಮಾಡಿದ ಜಾಲವಾಗಿದೆ.
ಡಬ್ಲ್ಯುಎಚ್​ಒ ಸಭೆ:ಕರೊನಾ ವೈರಸ್​ನ ಹೊಸ ಪ್ರಭೇದದ ಮೇಲೆ ಕಣ್ಣಿಟ್ಟಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ), ಇದರ ಬಗ್ಗೆ ರ್ಚಚಿಸಲು ಶುಕ್ರವಾರ ವಿಶೇಷ ಸಭೆ ಆಯೋಜಿಸಿದೆ.
ವಿದ್ಯಾರ್ಥಿಗಳಿಂದ ಹರಡಿತೇ?:ದಕ್ಷಿಣ ಆಫ್ರಿಕಾದ ಪ್ರಿಟೋರಿಯಾ ಮತ್ತು ಅದರ ಸುತ್ತಮುತ್ತಲಿನ ಥವಾನೆ ಮೆಟ್ರೋಪಾಲಿಟನ್ ಪ್ರದೇಶ ದಲ್ಲಿ ಬಿ.1.1.529 ಪ್ರಭೇದ ಮೊದಲಿಗೆ ಪತ್ತೆಯಾಗಿದೆ.
ಗೌಟೆಂಗ್ ಪ್ರದೇಶದ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಸಭೆಗಳಿಂದಾಗಿ ಈ ಪ್ರಭೇದ ವ್ಯಾಪಕವಾಗಿ ಹರಡಿದೆ ಎಂದು ನಂಬಲಾಗಿದೆ. ಬೋಟ್ಸ್​ವಾನಾ, ಹಾಂಕಾಂಗ್ ಮತ್ತು ಇಸ್ರೇಲ್​ನಲ್ಲೂ ಹೊಸ ಪ್ರಭೇದ ಪತ್ತೆಯಾಗಿದೆ. ಹೊಸ ಪ್ರಭೇದ ಹಿಂದಿನ ರೂಪಾಂತರಿಗಳಿಗಿಂತ ಹೆಚ್ಚು ಅಪಾಯಕಾರಿಯೇ ಮತ್ತು ಹೆಚ್ಚು ವೇಗವಾಗಿ ಹರಡುತ್ತದೆಯೇ ಎನ್ನುವುದನ್ನು ತಿಳಿಯಲು ವಿಜ್ಞಾನಿಗಳು ಇನ್ನೂ ಸಂಶೋಧನೆ ನಡೆಸುತ್ತಿದ್ದಾರೆ.
ಏಡ್ಸ್ ರೋಗಿ ಮೂಲ?:ಹೊಸ ಪ್ರಭೇದದ ಮೂಲದ ಬಗ್ಗೆ ಹಲವು ಊಹಾಪೋಹ ಹರಿದಾಡುತ್ತಿವೆ. ಚಿಕಿತ್ಸೆ ಪಡೆಯದ ಒಬ್ಬ ಎಚ್​ಐವಿ/ಏಡ್ಸ್ ರೋಗಿಯಿಂದ ಈ ವೈರಸ್ ಹುಟ್ಟಿಕೊಂಡಿರಬಹುದು ಎಂದು ಲಂಡನ್​ನ ಯುಸಿಎಲ್ ಜೆನೆಟಿಕ್ಸ್ ಇನ್​ಸ್ಟಿಟ್ಯೂಟ್​ನ ಒಬ್ಬ ವಿಜ್ಞಾನಿ ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಜಗತ್ತಿನಲ್ಲೇ ಅತ್ಯಧಿಕ (82 ಲಕ್ಷ) ಎಚ್​ಐವಿ ಪೀಡಿತರಿದ್ದಾರೆ. 2020ರಲ್ಲಿ ದಕ್ಷಿಣ ಆಫ್ರಿಕಾದಲ್ಲೇ ಪತ್ತೆಯಾದ ಬೇಟಾ ಪ್ರಭೇದ ಕೂಡ ಎಚ್​ಐವಿ-ಸೋಂಕಿತ ವ್ಯಕ್ತಿಯಿಂದ ಬಂದಿರಬಹುದು ಎಂಬ ಅನುಮಾನವಿದೆ.
ಪ್ರಯಾಣ-ಸಂಬಂಧಿ ಸ್ಟಾಕ್ ಕುಸಿತ:ಹೊಸ ಪ್ರಭೇದದ ಹಿನ್ನೆಲೆಯಲ್ಲಿ ವಿಮಾನಯಾನದ ಮೇಲೆ ದೇಶಗಳು ನಿರ್ಬಂಧ ವಿಧಿಸಲು ಆರಂಭಿಸಿರುವುದರಿಂದ ಪ್ರಯಾಣ ಸಂಬಂಧಿ ಸ್ಟಾಕ್​ಗಳ ಮೌಲ್ಯ ಕುಸಿಯತೊಡಗಿದೆ. ಆಫ್ರಿಕಾ ಖಂಡದ ಆರು ದೇಶಗಳಿಂದ ಬರುವ ವಿಮಾನಗಳ ಮೇಲೆ ಬ್ರಿಟನ್, ಜರ್ಮನಿ ಮತ್ತು ಇಟಲಿ ತಾತ್ಕಾಲಿಕ ನಿಷೇಧ ವಿಧಿಸಿವೆ. ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದರೆ ಗಡಿ ನಿಯಮಗಳನ್ನು ಬಿಗಿಗೊಳಿಸಲಾಗುವುದೆಂದು ಆಸ್ಟ್ರೇಲಿಯಾ ಹೇಳಿದೆ. ದಕ್ಷಿಣ ಆಫ್ರಿಕಾ ವಿಮಾನಗಳನ್ನು ನಿರ್ಬಂಧಿಸಲು ಐರೋಪ್ಯ ಒಕ್ಕೂಟ ಕೂಡ ಚಿಂತನೆ ನಡೆಸಿದೆ.
ಯೆನ್ ಏರಿಕೆ:ಸಾಮಾನ್ಯವಾಗಿ ಹೂಡಿಕೆದಾರರ ಸ್ವರ್ಗ ಎಂದು ಪರಿಗಣಿಸಲಾಗುವ ಯೆನ್ ಮೌಲ್ಯ ಡಾಲರ್ ಎದುರು ಶೇಕಡ 0.4 ಏರಿದೆ. ಆದರೆ ದಕ್ಷಿಣ ಆಫ್ರಿಕಾ ಕರೆನ್ಸಿ ರ್ಯಾಂಡ್ ಕಳೆದ ಒಂದು ವರ್ಷದಲ್ಲಿ ಕಾಣದಂಥ ಕುಸಿತ ಅನುಭವಿಸಿದೆ.
ಆತಂಕ ಬೇಡ:ಕರೊನಾ ವೈರಸ್​ನ ಹೊಸ ಪ್ರಭೇದ ಭಾರತದಲ್ಲಿ ಇನ್ನೂ ಪತ್ತೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.
ಷೇರುಪೇಟೆ ತತ್ತರ:ಶುಕ್ರವಾರ ಮುಂಬೈ ಷೇರುಪೇಟೆಯಲ್ಲಿ ತಲ್ಲಣ ಸೃಷ್ಟಿಯಾಯಿತು. ಸೆನ್ಸೆಕ್ಸ್ 1687.94 ಹಾಗೂ ನಿಫ್ಟಿ 509.80 ಪಾಯಿಂಟ್ ಕುಸಿತ ಕಂಡಿತು.
ಧಾರವಾಡ ತಲ್ಲಣ:ಇಲ್ಲಿನ ಸತ್ತೂರಿನ ಎಸ್​ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 204ಕ್ಕೆ ಏರಿಕೆಯಾಗಿದೆ. ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ವ್ಯಾಪಕ ಕ್ರಮ ಕೈಗೊಂಡಿದ್ದು, ಹೊರರೋಗಿಗಳ ವಿಭಾಗವನ್ನು ಬಂದ್ ಮಾಡಲಾಗಿದೆ. ಹೆಚ್ಚಿನ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ ಪೊಲೀಸ್ ಆಯುಕ್ತ ಲಾಭೂರಾಮ್ ಹಾಗೂ ಆರೋಗ್ಯ ಇಲಾಖೆಯ ತಂಡ ಶುಕ್ರವಾರವೂ ಭೇಟಿ ನೀಡಿತ್ತು.ಮೊದಲು ಸೋಂಕಿತರಾದವರ ಟ್ರಾವೆಲ್ ಹಿಸ್ಟರಿ, ಜಿನೋಮ್ ಸಿಕ್ವೆನ್ಸಿ ಪರಿಶೀಲಿಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಎಸ್​ಡಿಎಂಗೆ ಸಾರ್ವಜನಿಕರ ಭೇಟಿ ಹಾಗೂ ರೋಗಿಗಳ ಸಹಾಯಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಎಸ್​ಡಿಎಂ ಸುತ್ತಲಿನ 500 ಮೀ. ಪ್ರದೇಶದ ಶಾಲೆ- ಕಾಲೇಜುಗಳಿಗೆ ಶುಕ್ರವಾರ ರಜೆ ಘೊಷಿಸಲಾಗಿತ್ತು. ಎಸ್​ಡಿಎಂ ಆವರಣದಲ್ಲಿ ಈಗಾಗಲೇ 1,000 ಜನರನ್ನು ತಪಾಸಣೆ ಮಾಡಲಾಗಿದೆ. 204 ಜನರಲ್ಲಿ ಸೋಂಕು ದೃಢಪಟ್ಟಿದೆ. ಸಂಸ್ಥೆಯ ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿ ಸುಮಾರು 3,500 ಜನರಿದ್ದಾರೆ.
ಹುಬ್ಬಳ್ಳಿಯಿಂದ ಹೆಚ್ಚಿನ ತಂಡಗಳನ್ನು ಕರೆಸಿ ಸ್ವಾಬ್ ಸಂಗ್ರಹಿಸಲಾಗುತ್ತಿದೆ. ಡಿಮ್ಹಾನ್ಸ್, ಕಿಮ್್ಸ ಹಾಗೂ ಎಸ್​ಡಿಎಂ ಪ್ರಯೋಗಾಲಯಗಳಿಂದ ಸಂಗ್ರಹಿತ ಮಾದರಿಗಳ ವರದಿ ಪಡೆಯಲಾಗುವುದು. ಎಲ್ಲ ವರದಿಗಳು ಶನಿವಾರ ಲಭ್ಯವಾಗುವ ಸಾಧ್ಯತೆ ಇದೆ. ಕಾಲೇಜಿನ ಆವರಣದ ಕಲಾಕ್ಷೇತ್ರದಲ್ಲಿ ನ. 17ರಂದು ನಡೆದ ವಿದ್ಯಾರ್ಥಿಗಳ ಕಾರ್ಯಕ್ರಮ, 19ರಂದು ನಡೆದ ಮದುವೆ ಸಮಾರಂಭ ಹಾಗೂ 25ರಂದು ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡವರೆಲ್ಲರೂ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಲು ಸೂಚಿಸಲಾಗಿದೆ. ಸೋಂಕಿತರು ಕೋವಿಡ್ ನಿರೋಧಕ ಲಸಿಕೆಯ ಎರಡೂ ಡೋಸ್ ಪಡೆದಿದ್ದು, ತೀವ್ರತರ ಲಕ್ಷಣಗಳಿಲ್ಲ. ಉತ್ತಮ ಚಿಕಿತ್ಸೆ, ಔಷಧೋಪಚಾರ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದ್ದಾರೆ.
ರಾಜ್ಯದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ದಿಢೀರ್ ಏರಿಕೆ ಕಂಡಿದ್ದು, ಶುಕ್ರವಾರ 402 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದಿನದ ಸೋಂಕು ಪ್ರಮಾಣ ದರ ಶೇ. 0.60ಕ್ಕೆ ಏರಿಕೆಯಾಗಿದೆ. ಕಳೆದ 4-5 ದಿನಗಳಿಂದ ಬೆಂಗಳೂರು ನಗರದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಏರುಗತಿ ಪಡೆದುಕೊಂಡಿದ್ದು, 224 ಪ್ರಕರಣಗಳು ವರದಿಯಾಗಿವೆ. ಧಾರವಾಡದಲ್ಲಿ 85, ಮೈಸೂರಿನಲ್ಲಿ 25, ದಕ್ಷಿಣ ಕನ್ನಡದಲ್ಲಿ 19 ಪ್ರಕರಣಗಳು ದೃಢಪಟ್ಟಿವೆ. ಉಳಿದಂತೆ 16 ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಒಂದಂಕಿಯಲ್ಲಿದ್ದು, 10 ಜಿಲ್ಲೆಗಳಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಕೋವಿಡ್ ಸೋಂಕಿತರಲ್ಲಿ ಬೆಂಗಳೂರು ನಗರ, ದಕ್ಷಿಣ ಕನ್ನಡ, ಧಾರವಾಡ, ಹಾಸನ, ಕೊಡಗು ಮತ್ತು ರಾಯಚೂರು ಜಿಲ್ಲೆಗಳಲ್ಲಿ ತಲಾ ಒಬ್ಬರಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಮರಣ ಪ್ರಮಾಣ ದರ ಶೇ. 1.49 ತಲುಪಿದೆ. ಈವರೆಗೂ ಮೃತಪಟ್ಟವರ ಒಟ್ಟು ಸಂಖ್ಯೆ 38,193ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ 277 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಒಟ್ಟು ಸಂಖ್ಯೆ 29.50 ಲಕ್ಷ ದಾಟಿದೆ. ಸದ್ಯ ರಾಜ್ಯದಲ್ಲಿ 6,611 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 11 =
Remember me
