ನವದೆಹಲಿ:ಕರೊನಾ ಸೋಂಕು ಈಗ ಗಣ್ಯಾತಿಗಣ್ಯರ ದೇಹಗಳನ್ನೂ ಹೊಕ್ಕು ತನ್ನ ಪ್ರಭಾವ ಶುರುಮಾಡತೊಡಗಿದೆ. ರಾಜ್ಯಸಭಾ, ರಾಷ್ಟ್ರಪತಿಭವನ ಸೇರಿದಂತೆ ಎಲ್ಲೆಡೆಯೂ ಒಕ್ಕರಿಸಿದ್ದ ಈ ಮಹಾಮಾರಿ ಇದೀಗ ದೆಹಲಿಯ ಆರೋಗ್ಯ ಸಚಿವರ ದೇಹವನ್ನೂ ಹೊಕ್ಕಿದೆ!
ಸಚಿವ ಸತ್ಯೇಂದ್ರ ಜೈನ್ ಅವರಿಗೆ ಕರೊನಾ ಸೋಂಕಿನ ಲಕ್ಷಣ ಕಂಡುಬಂದಿರುವ ಹಿನ್ನೆಲೆಯಲ್ಲಿ ಅವರನ್ನು ರಾಜೀವ್ ಗಾಧಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ:ಒಂದು ಫೋಟೋ ನೂರು ಭಾವ: ಚಿಕಿತ್ಸೆಗಾಗಿ ಬಿಳಿಯನನ್ನು ಒಯ್ಯುತ್ತಿರುವ ಕಪ್ಪುವರ್ಣೀಯರು!
ಸಚಿವರು ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರನ್ನು ಇಂದು ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರನ್ನು ಪರೀಕ್ಷೆಗೆ ಒಳಪಡಿಸಿದ್ದು, ಗಂಟು ದ್ರವವನ್ನು ಸಂಗ್ರಹಿಸಲಾಗಿದೆ. ಇದನ್ನು ಪರೀಕ್ಷೆಗೆ ರವಾನಿಸಲಾಗಿದೆ ಎಂದಿರುವ ವೈದ್ಯರು ವರದಿಯನ್ನು ಎದುರು ನೋಡುತ್ತಿದ್ದಾರೆ.
ಈ ಎಲ್ಲಾ ಲಕ್ಷಣಗಳೂ ಕರೊನಾ ಸೋಂಕಿನ ಲಕ್ಷಣಗಳೆಂದೇ ದೃಢಪಟ್ಟಿರುವುದಾಗಿ ವೈದ್ಯರು ಹೇಳುತ್ತಿದ್ದು, ವರದಿ ಬಂದ ನಂತರ ಚಿಕಿತ್ಸೆ ಮುಂದುವರೆಸುವುದಾಗಿ ವಿವರಿಸಿದ್ದಾರೆ.
ದೆಹಲಿಯಲ್ಲಿ ಇಲ್ಲಿಯವರೆಗೆ 41,182 ಮಂದಿ ಕರೊನಾ ಸೋಂಕಿಗೆ ಒಳಗಾಗಿದ್ದು, 15,823 ಮಂದಿ ಗುಣಮುಖರಾಗಿದ್ದಾರೆ. ಕರೊನಾ ಮಾರಿಗೆ ಇಲ್ಲಿಯವರೆಗೆ ದೆಹಲಿಯಲ್ಲಿ 1,327 ಮಂದಿ ಬಲಿಯಾಗಿದ್ದಾರೆ.(ಏಜೆನ್ಸೀಸ್​)
Delhi's Health Minister Satyendar Jain has been admitted to Rajiv Gandhi Super Speciality Hospital after he complained of high fever and difficulty in breathing. (file pic)pic.twitter.com/77EBj5XrVN— ANI (@ANI)June 16, 2020
Delhi's Health Minister Satyendar Jain has been admitted to Rajiv Gandhi Super Speciality Hospital after he complained of high fever and difficulty in breathing. (file pic)pic.twitter.com/77EBj5XrVN

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × three =
Remember me
