ನವದೆಹಲಿ:ಭಾರತದಲ್ಲಿ ಕರೊನಾ ಪ್ರಕರಣಗಳ ದೈನಂದಿನ ಏರಿಕೆ ದರ ಕ್ಷೀಣಿಸುತ್ತಿದೆ ಹಾಗೂ ಹೆಚ್ಚು ಕರೊನಾ ಪ್ರಕರಣಗಳು ಕೆಲ ರಾಜ್ಯಗಳಿಗೆ ಮಾತ್ರ ಸೀಮಿತವಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಬೆಳವಣಿಗೆ ದರ ಇಳಿಕೆಯಾದರೂ ಸೋಂಕು ಪ್ರಕರಣಗಳ ಏರಿಕೆ ಮುಂದುವರಿದಿದ್ದು, ದೇಶದಲ್ಲಿನ ಸೋಂಕಿತರ ಸಂಖ್ಯೆ 9 ಲಕ್ಷಕ್ಕೂ ಅಧಿಕವಾಗಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಕರೊನಾ ಪ್ರಕರಣಗಳ ದೈನಂದಿನ ಬೆಳವಣಿಗೆ ದರ ಶೇ. 31 ಇತ್ತು. ಇದು ಮೇ ತಿಂಗಳಿನಲ್ಲಿ ಶೇ. 9ಕ್ಕೆ ಇಳಿಕೆಯಾಯಿತು. ಬಳಿಕ ಮೇ ಅಂತ್ಯದ ವೇಳೆಗೆ ಶೇ. 5ಕ್ಕಿಳಿದಿದ್ದು, ಜುಲೈ 12ರಂದು ಶೇ.3ಕ್ಕೆ ತಲುಪಿದೆ. ಪ್ರತಿದಿನದ ಕರೊನಾ ಪ್ರಕರಣಗಳ ಬೆಳವಣಿಗೆ ದರದಲ್ಲಿ ಇಳಿಕೆ ಕಂಡು ಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.
ಸಕ್ರಿಯ ಪ್ರಕರಣಗಳು ಹಾಗೂ ಗುಣಮುಖ ಪ್ರಕರಣಗಳ ನಡುವಿನ ಅಂತರ ಹೆಚ್ಚಾಗುತ್ತಿದೆ. ದೇಶದಲ್ಲಿ ಈವರೆಗೆ ದಾಖಲಾದ ಎಲ್ಲ ಪ್ರಕರಣಗಳಲ್ಲಿ ಶೇ. 86 ಪ್ರಕರಣಗಳು 10 ರಾಜ್ಯಗಳಿಗೆ ಸೀಮಿತವಾಗಿವೆ. ಇವುಗಳಲ್ಲಿ ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲೇ ಶೇ. 50ರಷ್ಟು ಪ್ರಕರಣಗಳಿವೆ. ಶೇ. 36 ಪ್ರಕರಣಗಳು ಕರ್ನಾಟಕ, ದೆಹಲಿ, ಆಂಧ್ರಪ್ರದೇಶ, ಉತ್ತರ ಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಅಸ್ಸಾಂನಿಂದ ವರದಿಯಾಗಿವೆ. ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ಉತ್ತರಾಖಂಡ, ಕೇರಳ ಮತ್ತು ಹಿಮಾಚಲ ಪ್ರದೇಶದಂತಹ ಹಲವಾರು ದೊಡ್ಡ ರಾಜ್ಯಗಳ ಪರಿಸ್ಥಿತಿ ಉತ್ತಮವಾಗಿದೆ ಎಂದು ಭೂಷಣ್ ಹೇಳಿದ್ದಾರೆ.
ರಷ್ಯಾ ಲಸಿಕೆ ಬಗ್ಗೆ ಅನುಮಾನ
ವಿಶ್ವದ ಅನೇಕ ರಾಷ್ಟ್ರಗಳು ಕರೊನಾ ಲಸಿಕೆ ಕಂಡುಹಿಡಿಯಲು ಶತಪ್ರಯತ್ನ ನಡೆಸುತ್ತಿರುವ ನಡುವೆಯೇ ರಷ್ಯಾದ ಸೆಚೆನೋವ್ ವಿಶ್ವವಿದ್ಯಾಲಯ, ಕರೊನಾ ವಿರುದ್ಧದ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ಘೊಷಿಸಿದೆ. ಆದರೆ ಈ ಬಗ್ಗೆ ಹಲವು ತಜ್ಞರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಜುಲೈ 7ರಂದು, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲು್ಯಎಚ್​ಒ) ರಷ್ಯಾ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಇನ್ನೂ ಮೊದಲ ಹಂತದಲ್ಲಿದೆ ಎಂದು ತಿಳಿಸಿತ್ತು. ಇದರರ್ಥ ಲಸಿಕೆ ಕ್ಲಿನಿಕಲ್ ಪ್ರಯೋಗಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಇನ್ನೂ ಕನಿಷ್ಠ 3-4 ಪ್ರಯೋಗ ಹಂತಗಳನ್ನು ದಾಟಬೇಕು.
ಸದ್ಯಕ್ಕೆ ಪರಿಸ್ಥಿತಿ ಸಾಮಾನ್ಯವಾಗಿಲ್ಲ
ಹಲವು ರಾಷ್ಟ್ರಗಳ ಕರೊನಾ ಪರಿಸ್ಥಿತಿ ನಿರ್ವಹಣೆ ಕುರಿತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲು್ಯಎಚ್​ಒ) ಅಸಮಾಧಾನ ವ್ಯಕ್ತಪಡಿಸಿದೆ. ಕರೊನಾ ಪಸರಿಸುವಿಕೆ ತಡೆಗಟ್ಟುವಲ್ಲಿ ಸರ್ಕಾರಗಳು ವಿಫಲವಾಗಿವೆ. ಭವಿಷ್ಯದಲ್ಲಿ ಪರಿಸ್ಥಿತಿ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳಲು ಸದ್ಯಕ್ಕೆ ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದೆ. ಅಮೆರಿಕದಿಂದಲೇ ಪ್ರತಿದಿನದ ಸುಮಾರು ಅರ್ಧದಷ್ಟು ಪ್ರಕರಣಗಳು ವರದಿಯಾಗುತ್ತಿವೆ. ಕರೊನಾ ಹೆಚ್ಚಿರುವ ದೇಶಗಳು ಸಮಗ್ರ ಕಾರ್ಯತಂತ್ರ ಅಳವಡಿಸಿಕೊಳ್ಳಬೇಕೆಂದು ಡಬ್ಲು್ಯಎಚ್​ಒ ತಿಳಿಸಿದೆ.
ದೇಹದ ಶಕ್ತಿ ಕುಂಠಿತ
ಕರೊನಾದಿಂದ ಚೇತರಿಸಿಕೊಂಡಿರು ವವರ ದೇಹದಲ್ಲಿನ ರೋಗನಿರೋಧಕ ಶಕ್ತಿ ಕಾಲಾಂತರದಲ್ಲಿ ಕಡಿಮೆಯಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. 90ಕ್ಕೂ ಹೆಚ್ಚು ಕರೊನಾ ಸೋಂಕಿತರ ಮೇಲೆ ಅಧ್ಯಯನ ನಡೆಸಲಾಗಿದ್ದು, ಗುಣಮುಖರಾದ ಬಳಿಕ ಕಾಲಾಂತರದಲ್ಲಿ ಅವರ ಆಂಟಿಬಾಡಿಗಳು ಕಡಿಮೆಯಾಗಿರುವುದು ಕಂಡು ಬಂದಿವೆ.
ಬಿಹಾರ ಮತ್ತೆ ಲಾಕ್​ಡೌನ್
ಕಳೆದ ಕೆಲ ದಿನಗಳಿಂದ ಬಿಹಾರದಲ್ಲಿ ಕರೊನಾ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿರುವುದರಿಂದಾಗಿ ಸಿಎಂ ನಿತೀಶ್ ಕುಮಾರ್ ಮತ್ತೆ ಸಂಪೂರ್ಣ ಲಾಕ್​ಡೌನ್ ಘೊಷಿಸಿದ್ದಾರೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬಿಹಾರದ ಎಲ್ಲ ಶಾಲಾ ಕಾಲೇಜುಗಳು, ಅಂಗಡಿಗಳು, ಮಾಲ್​ಗಳು, ಧಾರ್ವಿುಕ ಸ್ಥಳಗಳು ಜುಲೈ 16ರಿಂದ ಜುಲೈ 31ರವರೆಗೆ ಬಾಗಿಲು ಮುಚ್ಚಲಿವೆ.
ಸಾವಿರದ ಗಡಿ ದಾಟಿದ ಚೇತರಿಕೆ ಸಂಖ್ಯೆ; ರಾಜ್ಯದಲ್ಲಿ 1,142 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 9 =
Remember me
