ಬೆಂಗಳೂರು:ಕೋವಿಡ್​ ಸಂಕಷ್ಟ ಕಾಲದಲ್ಲೂ ರಿಲಯನ್ಸ್ ಫೌಂಡೇಷನ್​ ವೈದ್ಯಕೀಯ ಸೇವೆ-ಸವಲತ್ತುಗಳ ಮೂಲಕ ಸಾಮಾಜಿಕ ಸೇವೆಯಲ್ಲಿ ನಿರತವಾಗಿದ್ದು, ಕರೊನಾ ಕಗ್ಗಂಟು ಮುಂದುವರಿದಿರುವ ಹಿನ್ನೆಲೆಯಲ್ಲಿ ಅದು ತನ್ನ ಸೇವೆಯನ್ನೂ ಮುಂದುವರಿಸಿದೆ. ಈ ಕುರಿತು ರಿಲಯನ್ಸ್ ಫೌಂಡೇಷನ್​​ನ ಸಂಸ್ಥಾಪಕಿ ಹಾಗೂ ಅಧ್ಯಕ್ಷೆ ನೀತಾ ಅಂಬಾನಿ ಮಾಹಿತಿ ನೀಡಿದ್ದಾರೆ.
ಮುಂಬೈನಾದ್ಯಂತ ಸರ್ ಎಚ್​ಎನ್​ ರಿಲಯನ್ಸ್ ಫೌಂಡೇಷನ್​ ಹಾಸ್ಪಿಟಲ್​ 875 ಹಾಸಿಗೆಗಳನ್ನು ನಿರ್ವಹಿಸುತ್ತಿದೆ. ಮಾತ್ರವಲ್ಲ ಪ್ರತಿನಿತ್ಯ ಗುಜರಾತ್​, ಮಹಾರಾಷ್ಟ್ರ, ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ, ದಾಮನ್​, ದಿಯು ಮತ್ತು ನಗರ್​ ಹವೇಲಿಗಳಿಗೆ ರಿಲಯನ್ಸ್​ ಫೌಂಡೇಷನ್​ ಕಡೆಯಿಂದ 700 ಎಂಟಿ ಆಕ್ಸಿಜನ್​ ಉಚಿತವಾಗಿ ಪೂರೈಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ರಿಲಯನ್ಸ್‌ನ ‘ಒನ್ ಸ್ಟಾಪ್ ಬ್ರೆಸ್ಟ್ ಕ್ಲಿನಿಕ್’ಗೆ ಚಾಲನೆ ನೀಡಿದ ನೀತಾ ಅಂಬಾನಿ
ಅಲ್ಲದೆ ಕರೊನಾ ಕಗ್ಗಂಟು ಮುಂದುವರಿದಿದ್ದು, ಈ ಸಂದರ್ಭದಲ್ಲಿ ನಾವು ಭಾರತೀಯರಾಗಿ ಮುಂಬೈ ಹಾಗೂ ಭಾರತದ ಜನತೆ ಜತೆ ಇದ್ದೇವೆ. ಜನರ ಸೇವೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಾವು ಎಂದಿನಂತೆ ಇನ್ನೂ ಮುಂದೆಯೂ ಬದ್ಧರಾಗಿಯೇ ಇರುತ್ತೇವೆ ಎಂಬುದಾಗಿ ಹೇಳಿರುವ ನೀತಾ ಅಂಬಾನಿ, ‘ಕರೊನಾ ಸೋಲುತ್ತೆ, ಭಾರತ ಗೆಲ್ಲುತ್ತೆ’ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

ಕೇವಲ 14 ದಿನಕ್ಕೆ ಮುಗಿಯಲ್ಲ ಕರ್ನಾಟಕ ಲಾಕ್​ಡೌನ್​​! ಸುದ್ದಿಗೋಷ್ಠಿಯಲ್ಲಿ ಮಹತ್ವದ ಸುಳಿವು ಕೊಟ್ಟ ಸಿಎಂ ಯಡಿಯೂರಪ್ಪ
14 ದಿನದ ಜನತಾ ಕರ್ಫ್ಯೂ: ಏನಿರುತ್ತೆ? ಏನಿರುವುದಿಲ್ಲ? ಮದ್ಯದಂಗಡಿ, ಸಾರಿಗೆ, ಮೆಟ್ರೋ ಕಥೆ ಏನು?


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 11 =
Remember me
