ನವದೆಹಲಿ: ಭಾರತದಲ್ಲಿ ಸೋಂಕಿತರ ಸಂಖ್ಯೆ 12 ಸಾವಿರದತ್ತ ಸಾಗುತ್ತಿದ್ದು, ಮೃತರ ಸಂಖ್ಯೆ 405ಕ್ಕೆ ಏರಿದೆ. ಕಳೆದ 24 ತಾಸಿನಲ್ಲಿ 15 ಮಂದಿ ಸಾವನ್ನಪ್ಪಿದ್ದು, ಮೃತರ ಒಟ್ಟು ಸಂಖ್ಯೆ 405ಕ್ಕೆ ಹೆಚ್ಚಳವಾಗಿದೆ. ಬುಧವಾರ 450 ಹೊಸ ಪ್ರಕರಣ ಬೆಳಕಿಗೆ ಬಂದಿದ್ದು, ಒಟ್ಟಾರೆ ಪಾಸಿಟಿವ್ ಸಂಖ್ಯೆ 11,906ಕ್ಕೆ ಮುಟ್ಟಿದೆ. ಈ ಪೈಕಿ 1,443 ಮಂದಿ ಗುಣಮುಖರಾಗಿದ್ದು, 10,058 ಸಕ್ರಿಯ ಪ್ರಕರಣಗಳು ಇವೆ.
ದೇಶದಲ್ಲಿ 170 ಹಾಟ್‌ಸ್ಪಾಟ್ ಜಿಲ್ಲೆ/ನಗರ ಗುರುತಿಸಲಾಗಿದೆ. 207 ಜಿಲ್ಲೆ/ನಗರ ಕಿತ್ತಳೆ ವಲಯದಲ್ಲಿ ಇವೆ. ಸೋಂಕಿತ ಪ್ರಕರಣ ಇಲ್ಲದ ಜಿಲ್ಲೆ/ನಗರ ಹಸಿರು ವಲಯದಲ್ಲಿ ಗುರುತಿಸಲಾಗಿದೆ ಎಂದು ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಲವ ಅಗರವಾಲ್ ತಿಳಿಸಿದ್ದಾರೆ.
ಸೋಂಕಿತರ ಸಂಖ್ಯೆ ಹೆಚ್ಚಿರುವ ಪ್ರದೇಶವನ್ನು ಹಾಟ್‌ಸ್ಪಾಟ್ (ಕೆಂಪು ವಲಯ) ಎಂದು ಗುರುತಿಸಲಾಗಿದೆ. ನಾಲ್ಕು ದಿನಕ್ಕಿಂತ ಕಡಿಮೆ ಅವಧಿಯಲ್ಲಿ ಸೋಂಕಿತ ಪ್ರಕರಣಗಳು ದ್ವಿಗುಣವಾಗುವ ಪ್ರದೇಶಗಳು ಈ ವ್ಯಾಪ್ತಿಗೆ ಬರುತ್ತವೆ. ಹಾಲಿ 170 ಹಾಟ್‌ಸ್ಪಾಟ್‌ಗಳ ಪೈಕಿ 123 ಪ್ರದೇಶಗಳಲ್ಲಿ ಅತಿ ಹೆಚ್ಚಿನ ಪ್ರಕರಣಗಳು ಇವೆ. 47 ಜಿಲ್ಲೆ/ನಗರಗಳು ಕ್ಲಸ್ಟರ್ ವರ್ಗದಲ್ಲಿ ಇವೆ. ಈಗಾಗಲೇ ಸೋಂಕಿತ ಪ್ರಕರಣಗಳು ವರದಿಯಾಗಿದ್ದು ಆದರೆ, ಕಳೆದ 14 ದಿನಗಳಿಂದ ಹೊಸ ಪ್ರಕರಣಗಳು ಪತ್ತೆಯಾಗದ ಪ್ರದೇಶಗಳನ್ನು ಕಿತ್ತಳೆ ವಲಯದಲ್ಲಿ ಗುರುತಿಸಲಾಗಿದೆ. 28 ದಿನಗಳಿಂದ ಯಾವುದೇ ಪಾಸಿಟಿವ್ ಪ್ರಕರಣ ವರದಿಯಾಗದ ಪ್ರದೇಶಗಳನ್ನು ಹಸಿರು ವಲಯದಲ್ಲಿ ಗುರುತಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ ಮಾಹಿತಿ ನೀಡಿದೆ.
ಈ ಪೈಕಿ ದೊಡ್ಡ ಸಂಖ್ಯೆಯಲ್ಲಿ ಕೇಸು ಪತ್ತೆಯಾಗುವ ಸಂಭವನೀಯತೆ ಇರುವ ಹಾಟ್‌ಸ್ಪಾಟ್‌ಗಳ ಪಟ್ಟಿಯಲ್ಲಿ ಕರ್ನಾಟಕದ ಬೆಂಗಳೂರು, ಬೆಳಗಾವಿ ಮತ್ತು ಮೈಸೂರು ಇವೆ. ಗುಂಪುಗುಂಪು ಕೇಸುಗಳು ಪತ್ತೆಯಾಗುವ ಕ್ಲಸ್ಟರ್ ಪಟ್ಟಿಯಲ್ಲಿ ಬೀದರ್, ಕಲಬುರಗಿ, ಬಾಗಲಕೋಟೆ, ದಕ್ಷಿಣ ಕನ್ನಡ ಮತ್ತು ಧಾರವಾಡ ಜಿಲ್ಲೆಗಳು ಇವೆ.
ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಕರಣ:ಮಹಾರಾಷ್ಟ್ರದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ 3 ಸಾವಿರದತ್ತ ಸಾಗಿದೆ. ಬುಧವಾರ 232 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,916ಕ್ಕೆ ಮುಟ್ಟಿದೆ. 178 ಜನರು ಮರಣ ಹೊಂದಿದ್ದಾರೆ.
ಅಮೆರಿಕದಲ್ಲಿ 6 ಲಕ್ಷ ದಾಟಿತು: ಅಮೆರಿಕದಲ್ಲಿ ಹೊಸದಾಗಿ 2,282 ಮಂದಿ ಸೋಂಕಿತರು ಪತ್ತೆಯಾಗಿದ್ದು, ಒಟ್ಟು ಸಂಖ್ಯೆ 6.16 ಲಕ್ಷ ದಾಟಿದೆ. ಮೃತರ ಒಟ್ಟು ಸಂಖ್ಯೆ 26,200ಕ್ಕೆ ತಲುಪಿದೆ. ಬ್ರಿಟನ್‌ನಲ್ಲಿ ಸೋಂಕಿತರ ಸಂಖ್ಯೆ ಒಂದು ಲಕ್ಷದ ಸಮೀಪಕ್ಕೆ ಬಂದಿದ್ದು, ಮೃತರ ಸಂಖ್ಯೆ 13 ಸಾವಿರದ ಸನಿಹದಲ್ಲೇ ಇದೆ. ಸ್ಪೇನ್‌ನಲ್ಲಿ 24 ತಾಸಿನ ಅವಧಿಯಲ್ಲಿ 324 ಮಂದಿ ಅಸುನೀಗಿದ್ದು, ಒಟ್ಟು ಮೃತರ ಸಂಖ್ಯೆ 18,579ಕ್ಕೆ ಮುಟ್ಟಿದೆ. ಸೋಂಕಿತರ ಹೊಸ ಪ್ರಕರಣ 3,573ಕ್ಕೆ ಏರಿದ್ದು, ಒಟ್ಟು ಸಂಖ್ಯೆ 1.77 ಲಕ್ಷ ದಾಟಿದೆ. ವಿಶ್ವದ್ಯಾದ್ಯಂತ 24 ತಾಸಿನಲ್ಲಿ 2,500 ಜನರು ಮೃತ ಪಟ್ಟಿದ್ದು ಒಟ್ಟು ಸಂಖ್ಯೆ 1.29 ಲಕ್ಷಮೀರಿದೆ. 28 ಸಾವಿರಕ್ಕೂ ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸಂಖ್ಯೆ 20.26 ಲಕ್ಷಕ್ಕೂ ಹೆಚ್ಚಿದೆ.
ಈ ಚಿತ್ರದಲ್ಲಿ ಅಡಗಿರುವ ಹಾವನ್ನು ಪತ್ತೆ ಹಚ್ಚುವಿರಾ?: ನಿಮ್ಮಕಣ್ಣಿನ ದೃಷ್ಟಿ, ತಾಳ್ಮೆಗೊಂದು ಸವಾಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 3 =
Remember me
