ನವದೆಹಲಿ:ಭಾರತದಲ್ಲಿ ಕರೊನಾ ಸೋಂಕು ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗಿರುವುದು ತುಂಬಾ ಆತಂಕದ ವಿಷಯವೇ ಸರಿ. ಎರಡು ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ, ಅತಿ ಹೆಚ್ಚು ಸೋಂಕು ಹೊಂದಿರುವ ದೇಶಗಳ ಪೈಕಿ ಭಾರತಕ್ಕೆ 7ನೇ ಸ್ಥಾನ ಬಂದಿರುವುದೂ ನೋವಿನ ಸಂಗತಿಯೇ.
ಆದರೆ ಇದರ ನಡುವೆಯೂ ಆರೋಗ್ಯ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದೆ, ಅದೇನೆಂದರೆ, ಭಾರತದಲ್ಲಿ ಶೇ.49ರಷ್ಟು ಮಂದಿ ಗುಣಮುಖರಾಗಿ ಹೋಗುತ್ತಿದ್ದಾರೆ ಎಂಬುದು. ಅಂದರೆ ಇದಾಗಲೇ ಒಂದು ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ.
ಎಲ್ಲರಿಗೂ ತಿಳಿದಿರುವಂತೆ ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳ ಪೈಕಿ ಮೊದಲ ಸ್ಥಾನದಲ್ಲಿ ಇರುವುದು ಚೀನಾ. ಎರಡನೆಯ ಸ್ಥಾನ ಭಾರತ, ಮೂರನೆಯ ಸ್ಥಾನ ಅಮೆರಿಕ ಹಾಗೂ ನಾಲ್ಕನೆಯ ಸ್ಥಾನ ಇಂಡೋನೇಷ್ಯಾ.
ಇದನ್ನೂ ಓದಿ:ಪತ್ನಿ ಮೇಲೆ ಸಂಶಯ: ಇಡೀ ಕುಟುಂಬವನ್ನು ಕೊಡಲಿಯಿಂದ ಕೊಚ್ಚಿದ ಪತಿ; ಇಬ್ಬರ ಕಗ್ಗೊಲೆ!
ಜನಸಂಖ್ಯೆಯ ಆಧಾರವನ್ನು ಪರಿಗಣನೆಗೆ ತೆಗೆದುಕೊಂಡರೆ ಸಹಜವಾಗಿ ಭಾರತದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿಗೆ ಆಗುತ್ತದೆ. ಭಾರತದಲ್ಲಿ 130 ಕೋಟಿ ಜನಸಂಖ್ಯೆ ಇದ್ದರೆ, ಅಮೆರಿಕದಲ್ಲಿ ಇರುವುದು ಕೇವಲ 35 ಕೋಟಿ. ಆದರೆ ಅಮೆರಿಕದ ಸಾವಿನ ಸಂಖ್ಯೆಯನ್ನು ಪರಿಗಣನೆಗೆ ತೆಗೆದುಕೊಂಡರೆ ಭಾರತವು ಸೋಂಕಿನ ಪ್ರಮಾಣವನ್ನು ನಿಯಂತ್ರಿಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.
ಚೀನಾ ತನ್ನ ದೇಶದ ಸೋಂಕಿತರ ಕುರಿತಾಗಿ ನೀಡಿರುವ ವರದಿಯಂತೂ ನಂಬುವುದು ಅಸಾಧ್ಯವೇ ಸರಿ. ಅದರ ಬಗ್ಗೆ ಈಗಾಗಲೇ ಸಾಕಷ್ಟು ಗುಮಾನಿಗಳು ಎದ್ದಿವೆ. ಜನಸಂಖ್ಯೆಯ ಹೊರತಾಗಿಯೂ ಭಾರತದಲ್ಲಿ ಅತ್ಯಧಿಕ ಸಂಖ್ಯೆಯ ಕರೊನಾ ಸೋಂಕಿತರು ಗುಣಮುಖರಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದೇ ವಿಶ್ಲೇಷಿಸಲಾಗಿದೆ.
ಇದನ್ನೂ ಓದಿ:ಜನಪ್ರತಿನಿಧಿಗಳು ಕದ್ದುಮುಚ್ಚಿ ಮಾಡುವುದನ್ನೂ ತಿಳಿಯುವ ಹಕ್ಕು ಮತದಾರರಿಗಿದೆ ಎಂದ ಹೈಕೋರ್ಟ್
ನಿನ್ನೆಯವರೆಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ 2 ಲಕ್ಷದ 7 ಸಾವಿರದ 615 ಇತ್ತು, ಈ ಪೈಕಿ 1 ಲಕ್ಷದ 303 ಮಂದಿ ಗುಣಮುಖರಾಗಿದ್ದಾರೆ. ಅಂದರೆ ಇದರ ಪ್ರಮಾಣ ಶೇ. 48.33ರಷ್ಟು. ದಿನ ನಿತ್ಯ ಗುಣುಮುಖ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಕರೊನಾ ವೈರಸ್​ ಕಾಲಿಟ್ಟು ಮೊದಲ 18 ವಾರಗಳು ಟಾಪ್​ ತ್ರೀ ಜನಸಂಖ್ಯೆ ಹೊಂದಿರುವ ದೇಶಗಳ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಈ ಮೇಲಿನ ಚಿತ್ರದಲ್ಲಿ ಕಾಣಬಹುದು.
ಗಿಳಿ ಹಾರಿಹೋದುದಕ್ಕೆ ಕೆಲಸದ ಬಾಲಕಿಯನ್ನು ಹೊಡೆದು ಸಾಯಿಸಿದ ದಂಪತಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × two =
Remember me
