ನವದೆಹಲಿ:ಗಾಳಿಯಲ್ಲಿ ಇರುವ ಕೋವಿಡ್ ವೈರಾಣು 20 ನಿಮಿಷಗಳಲ್ಲಿ ತನ್ನ ಶಕ್ತಿಯನ್ನು ಕಳೆದುಕೊಂಡು ದುರ್ಬಲ ಆಗುತ್ತದೆ ಮತ್ತು ಹೆಚ್ಚು ದೂರ ಕೂಡ ಪ್ರಸರಣ ಆಗುವುದಿಲ್ಲ ಎಂದು ಬ್ರಿಸ್ಟಲ್ ವಿಶ್ವವಿದ್ಯಾಲಯದ ಏರೋಸೋಲ್ ಸಂಶೋಧಕರು ಹೇಳಿದ್ದಾರೆ. ವಾತಾವರಣದಲ್ಲಿ ತೇಲಾಡುವ ಸೋಂಕಿನ ಶೇ. 90ರಷ್ಟು ಸಾಮರ್ಥ್ಯ 20 ನಿಮಿಷದಲ್ಲಿ ನಶಿಸುತ್ತದೆ. ವೈರಸ್ ಗಾಳಿಗೆ ಹೊಕ್ಕ ನಂತರ ಸೋಂಕಿನ ಸಾಂಕ್ರಾಮಿಕತ್ವವು ಐದು ನಿಮಿಷದಲ್ಲೇ ದುರ್ಬಲ ಆಗಲು ಆರಂಭವಾಗುತ್ತದೆ ಎಂದು ಸಂಶೋಧಕರು ವಿಶ್ಲೇಷಿಸಿದ್ದಾರೆ. ಬ್ರಿಟನ್ ಸಂಶೋಧಕರು ಈ ಹಿಂದಿನ ಕರೊನಾದ ಮೂರು ರೂಪಾಂತರಿಗಳನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡು ವಿಶ್ಲೇಷಿಸಿದ್ದಾರೆ. ಇದರಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ಒಮಿಕ್ರಾನ್ ತಳಿ ಸೇರಿಲ್ಲ ಎಂದು ಸಂಶೋಧನಾ ಕೇಂದ್ರದ ನಿರ್ದೇಶಕ ಜೊನಾಥನ್ ರೀಡ್ ಹೇಳಿದ್ದಾರೆ.
ಕರೊನಾ ಸಾಂಕ್ರಾಮಿಕ ಜಾಗತಿಕವಾಗಿ ವೇಗ ಪಡೆದುಕೊಳ್ಳುತ್ತಿದೆ. ಮುಂದಿನ ಮೂರು ತಿಂಗಳಲ್ಲಿ 300 ಲಕ್ಷ ಹೊಸ ಕೇಸ್​ಗಳು ವ್ಯಕ್ತವಾಗಬಹುದು ಎಂದು ಅಂದಾಜಿಸಲಾಗಿದೆ. ಇದರಲ್ಲಿ ಒಮಿಕ್ರಾನ್ ತಳಿಯ ಪ್ರಕರಣಗಳೇ ಲಕ್ಷಾಂತರ ಆಗಬಹುದು ಎಂದು ಹೇಳಲಾಗಿದೆ. ಲಸಿಕೆ ಪಡೆಯುವುದಕ್ಕೆ ಮೊದಲೇ ಒಮಿಕ್ರಾನ್​ಗೆ ತುತ್ತಾದವರಲ್ಲಿ ಆತಂಕಕಾರಿ ಆಗಬಹುದು.
ಲಸಿಕೆ ಕೊರತೆ ಎಂಬುದು ನಿಜವಲ್ಲ:ಮಹಾರಾಷ್ಟ್ರದಲ್ಲಿ ಲಸಿಕೆ ಕೊರತೆ ಉಂಟಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಆದರೆ, ಇದು ನಿಜವಲ್ಲ. ರಾಜ್ಯಕ್ಕೆ ಶುಕ್ರವಾರ ಹೆಚ್ಚುವರಿಯಾಗಿ 6.35 ಲಕ್ಷ ಡೋಸ್ ರವಾನೆ ಆಗಿದೆ. ಈ ಹಿಂದಿನನ ಪೂರೈಕೆಯಲ್ಲಿ 24 ಲಕ್ಷ ಡೋಸ್ ಲಸಿಕೆ ಇನ್ನೂ ಬಳಕೆಯೇ ಆಗಿಲ್ಲ. ಕೋವಿನ್ ಡೇಟಾ ಪ್ರಕಾರ ರಾಜ್ಯದಲ್ಲಿ ಲಸಿಕೆ ಸರಾಸರಿ ಬಳಕೆ ಮೂರೂವರೆ ಲಕ್ಷಕ್ಕೂ ತುಸು ಹೆಚ್ಚಿದೆ. ಇದರ ಲೆಕ್ಕ ಹಿಡಿದರೂ ಇನ್ನೂ 10 ದಿನಕ್ಕೆ ಆಗುವಷ್ಟು ಲಸಿಕೆ ರಾಜ್ಯದಲ್ಲಿ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
2.64 ಲಕ್ಷ ದಾಟಿದ ದೈನಿಕ ಕೇಸ್:ದೇಶದಲ್ಲಿ ಶುಕ್ರವಾರ 2.64 ಲಕ್ಷ ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, ಗುರುವಾರಕ್ಕಿಂತ ಶೇ. 6.7ರಷ್ಟು ಹೆಚ್ಚಳ ಕಂಡಿದೆ. 239 ದಿನಗಳ ನಂತರ ದೈನಿಕ ಕೇಸ್ 2.64 ಲಕ್ಷ ದಾಟಿದೆ. ನಿತ್ಯದ ಪಾಸಿಟಿವಿಟಿ ದರ ಶೇ. 13ರಿಂದ ಶೇ. 14.78ಕ್ಕೆ ಏರಿಕೆ ಆಗಿದೆ. 24 ತಾಸಿನಲ್ಲಿ 315 ಮಂದಿ ಮೃತರಾಗಿದ್ದು, ಒಟ್ಟು ಸಾವಿನ ಸಂಖ್ಯೆ 4,85,350ಕ್ಕೆ ಮುಟ್ಟಿದೆ. ಒಮಿಕ್ರಾನ್ ಸೋಂಕಿನ ಒಟ್ಟು ಸಂಖ್ಯೆ 5,753ಕ್ಕೆ ಏರಿದ್ದು, ಗುರುವಾರಕ್ಕಿಂತ ಶೇ. 4.83ರಷ್ಟು ಹೆಚ್ಚಳ ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 12,72,073ಕ್ಕೆ ಏರಿದ್ದು, 220 ದಿನಗಳಲ್ಲಿ ಹೆಚ್ಚಿನ ಮುಟ್ಟದಾಗಿದೆ. ಒಟ್ಟು ಸೋಂಕಿತ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ. 3.48ಕ್ಕೆ ಏರಿಕೆ ಕಂಡಿದೆ. ದೇಶದ ಒಟ್ಟಾರೆ ಚೇತರಿಕೆ ಪ್ರಮಾಣ ಶೇ. 95.20 ಇದೆ ಎಂದು ಸಚಿವಾಲಯ ತಿಳಿಸಿದೆ.
ಸಾವಿನ ಸಂಖ್ಯೆ ಹೆಚ್ಚಿದೆ ಎಂಬುದು ವದಂತಿ:ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ಕಾಣಿಸಿಕೊಂಡ ನಂತರ ಮರಣ ಪ್ರಮಾಣ ಅಧಿಕವಾಗಿದೆ. ಅನೇಕ ಕೋವಿಡ್ ಸಾವಿನ ಪ್ರಕರಣಗಳು ದಾಖಲು ಆಗುತ್ತಿಲ್ಲ ಎಂಬ ಟೀಕೆ ಕೇಳಿರುತ್ತಿದೆ. ಆದರೆ, ಜನನ ಮತ್ತು ಸಾವಿನ ನೋಂದಣಿಯು ಗ್ರಾಮ ಪಂಚಾಯಿತಿಯಿಂದ ಹಿಡಿದು ಜಿಲ್ಲೆ, ರಾಜ್ಯಗಳ ಮಟ್ಟದಲ್ಲಿ ಪರಿಶೀಲನೆಗೆ ಒಳಪಡುವ ಕಾರಣ ಸತ್ತವರ ಮಾಹಿತಿ ದಾಖಲೆಯಿಂದ ಬಿಟ್ಟುಹೋಗುವುದಿಲ್ಲ. ಜನನ ಮತ್ತು ಮರಣದ ನೋಂದಣಿ ಅತ್ಯಂತ ಪಾರದರ್ಶವಾಗಿ ನಡೆಯತ್ತದೆ. ಕರೊನಾ ಮೊದಲೆರಡು ಅಲೆಗಳಲ್ಲಿನ ಸಾವಿನ ಲೆಕ್ಕಾಚಾರದಲ್ಲಿ ತಪ್ಪಿದೆ ಎಂಬುದು ಸಮಂಜಸ ಅಲ್ಲ ಎಂದು ಕೇಂದ್ರ ತಿಳಿಸಿದೆ.
ಶೇ. 15 ಹಾಸಿಗೆಗಳು ಭರ್ತಿ:ದೆಹಲಿಯಲ್ಲಿ 28,876 ಹೊಸ ಕೇಸ್​ಗಳು ದೃಢಪಟ್ಟಿದ್ದು, ಪಾಸಿಟಿವಿಟಿ ಪ್ರಮಾಣ ಶೇ.29ಕ್ಕೆ ಏರಿದೆ. ಅಂದರೆ ಟೆಸ್ಟ್​ಗೆ ಒಳಪಟ್ಟ ಪ್ರತಿ ಮೂವರಲ್ಲಿ ಒಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಗುರುವಾರಕ್ಕೆ (30 ಸಾವಿರ) ಹೋಲಿಸಿದರೆ ಕೇಸ್​ಗಳ ಸಂಖ್ಯೆ ಕಡಿಮೆ ಆಗಿದೆ. ಹೀಗಾಗಿ ಆಸ್ಪತ್ರೆಗಳಲ್ಲಿ ಕಾಯ್ದಿರಿಸಿದ್ದ ಹಾಸಿಗೆಗಳ ಪೈಕಿ ಶೇ. 15 ಅಷ್ಟೆ ಭರ್ತಿಯಾಗಿದೆ, 13 ಸಾವಿರ ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗಾಗಿ ರಾಜ್ಯ ಸರ್ಕಾರ ಮೀಸಲು ಇರಿಸಿದೆ ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ.
ನಿಯಂತ್ರಣಕ್ಕೆ ಸಿಗದ ಕರೊನಾ; ಇಂದು ಒಂದೇ ದಿನದಲ್ಲಿ 28 ಸಾವಿರಕ್ಕೂ ಅಧಿಕ ಪ್ರಕರಣ…

ಹುಷಾರು.. ಕರೊನಾ ಮೂರನೇ ಅಲೆ ಮೊದಲೆರಡು ಅಲೆಗಳಿಂತಲೂ ವೇಗವಾಗಿ ದುಪ್ಪಟ್ಟಾಗುತ್ತಿದೆ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + eleven =
Remember me
