ನವದೆಹಲಿ:ಭಾರತದಲ್ಲಿ ಕರೊನಾ ಇಳಿಮುಖವಾಗಿದ್ದ ಬೆನ್ನಿಗೆ ದೆಹಲಿ, ಗುಜರಾತ್ ಮತ್ತು ಹರಿಯಾಣಗಳಲ್ಲಿ ದೈನಿಕ ಕೇಸ್​ಗಳಲ್ಲಿ ಹೆಚ್ಚಳ ಕಂಡು ಬಂದಿದೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳಗಳಲ್ಲಿ ಸೋಂಕಿನ ಪ್ರಕರಣಗಳು ಸ್ಥಿರಗೊಂಡಿವೆ.
ದೆಹಲಿಯಲ್ಲಿ 160 ಹೊಸ ಪ್ರಕರಣಗಳು ಪತ್ತೆಯಾಗಿವೆ. ದಿನದ ಪಾಸಿಟಿವಿಟಿ ದರ ಶೇ. 1.55ಕ್ಕೆ ಏರಿಕೆ ಆಗಿದೆ. ಈ ಮೂಲಕ ದೆಹಲಿಯಲ್ಲಿ ಒಟ್ಟಾರೆ ಪ್ರಕರಣಗಳ ಸಂಖ್ಯೆ 18,66,102ಕ್ಕೆ ಮುಟ್ಟಿದೆ. ಕಳೆದ ಮೂರು ದಿನಗಳಿಂದ ಕರೊನಾ ಸೋಂಕಿನ ಪ್ರಕರಣದಲ್ಲಿ ಏರಿಕೆ ಕಂಡು ಬರುತ್ತಿದೆ. ಶುಕ್ರವಾರ 160, ಗುರುವಾರ 176 ಪ್ರಕರಣಗಳು ವ್ಯಕ್ತವಾಗಿತ್ತು ಎಂದು ದೆಹಲಿ ಆರೋಗ್ಯ ಇಲಾಖೆ ತಿಳಿಸಿದೆ. ಹರಿಯಾಣದಲ್ಲಿ ಏಳು ದಿನದಲ್ಲಿ ಸರಾಸರಿ 68 ಪ್ರಕರಣಗಳು ಏರಿಕೆ ಕಂಡಿವೆ. ಗುಜರಾತ್​ನ ವಡೋದರದಲ್ಲಿ ಒಂದು ಎಕ್ಸ್​ಇ ಪ್ರಭೇದದ ಪ್ರಕರಣ ವ್ಯಕ್ತವಾಗಿದೆ. ಇದರ ಜತೆಗೆ ಗುರುವಾರ 8 ಇದ್ದ ದೈನಿಕ ಕೇಸ್ ಶನಿವಾರ 34ಕ್ಕೆ ಏರಿಕೆ ಕಂಡಿದೆ. ಸೋಂಕು ಹೆಚ್ಚಳವಾಗುತ್ತಿರುವ ರಾಜ್ಯಗಳಲ್ಲಿ ಮುನ್ನೆಚ್ಚರಿಕೆಯ ಕ್ರಮಗಳು ಬಿಗಿಯಾಗಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ಸಾವಿರಕ್ಕಿಂತ ತುಸು ವಯಸ್ಕರಿಗೆ ಬೂಸ್ಟರ್ ಡೋಸ್ ಆರಂಭ:ಮೊದಲೆರಡು ಡೋಸ್ ಲಸಿಕೆ ಪಡೆದಿರುವ ವಯಸ್ಕರು ಹಣ ಪಾವತಿಸಿ ಮೂರನೇ ಡೋಸ್ ಪಡೆಯುವ ಅಭಿಯಾನ ಖಾಸಗಿ ಲಸಿಕೆ ವಿತರಣಾ ಕೇಂದ್ರದಲ್ಲಿ ಭಾನುವಾರ ಆರಂಭಗೊಂಡಿತು. ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ 3ನೇ ಡೋಸ್ ದರವನ್ನು ಸರ್ಕಾರ 225 ರೂ.ಗೆ ನಿಗದಿ ಮಾಡಿದ್ದು, 150 ರೂ. ಸೇವಾ ಶುಲ್ಕ ಪಡೆಯಬಹುದು ಎಂದು ಸೂಚಿಸಿದೆ. ಇದರಿಂದ ಲಸಿಕೆಗೆ 375 ರೂ. ವೆಚ್ಚವಾಗಲಿದೆ. ಕೋವಿಶೀಲ್ಡ್ ತಯಾರಿಸುವ ಸೆರಂ ಸಂಸ್ಥೆ 600 ರೂ. ಮತ್ತು ಕೊವ್ಯಾಕ್ಸಿನ್​ಗೆ ಭಾರತ್ ಬಯೋಟೆಕ್ 1,200 ರೂ.ಗಳ ದರವನ್ನು ಮೊದಲು ನಿಗದಿ ಮಾಡಿದ್ದವು. ಇದನ್ನು ಸರ್ಕಾರ ಇಳಿಸಿತು. 2ನೇ ಡೋಸ್ ಪಡೆದು 90 ದಿನಗಳಾಗಿದ್ದರೆ ಅಂಥವರು 3ನೇ ಡೋಸ್ ಲಸಿಕೆ ಪಡೆಯಬಹುದಾಗಿದೆ. ಇದಕ್ಕಾಗಿ ಕೋವಿನ್ ಪೋರ್ಟಲ್ ಅಥವಾ ಆಪ್​ನಲ್ಲಿ ಮತ್ತೆ ನೋಂದಣಿ ಮಾಡಿಕೊಳ್ಳಬೇಕಾದ ಅವಶ್ಯಕತೆ ಇಲ್ಲ.
ಹೆಚ್ಚು ದೈನಿಕ ಕೇಸ್:ಭಾರತದಲ್ಲಿ ಭಾನುವಾರ 1,050 ಹೊಸ ಪ್ರಕರಣಗಳು ವ್ಯಕ್ತವಾಗಿವೆ. ಈ ಮೂಲಕ ಒಟ್ಟಾರೆ ಕೇಸ್​ಗಳ ಸಂಖ್ಯೆ 4,30,35,271ಕ್ಕೆ ಏರಿದೆ. ಪಾಸಿಟಿವಿಟಿ ದರ ಶೇ. 0.25 ಇದೆ. 29 ಸೋಂಕಿತರು ಸಾವನ್ನಪ್ಪಿದ್ದು, ಒಟ್ಟಾರೆ ಸಾವಿನ ಸಂಖ್ಯೆ 5,21,685ಕ್ಕೆ ಮುಟ್ಟಿದೆ. ಈ ಮಧ್ಯೆ, ಸಕ್ರಿಯ ಪ್ರಕರಣಗಳು 11,132ಕ್ಕೆ ಇಳಿಕೆ ಆಗಿದ್ದು, ಇದರ ಪ್ರಮಾಣ ಶೇ. 0.03 ಇದೆ. ಶೇ. 98.76 ಪ್ರಕರಣಗಳು ಚೇತರಿಕೆ ಕಂಡಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಬೇಸಿಗೆಯಲ್ಲಿ ವಾಹನದ ಪೆಟ್ರೋಲ್ ಟ್ಯಾಂಕ್ ಫುಲ್ ಮಾಡಿದ್ರೆ ಬ್ಲಾಸ್ಟ್​ ಆಗುತ್ತಾ?

ಕೋಲಾರ ಏನೂ ಪಾಕಿಸ್ತಾನದಲ್ಲಿ ಇಲ್ಲ..; ಎಚ್ಚರಿಕೆ ನೀಡಿದ ಪ್ರಮೋದ್​ ಮುತಾಲಿಕ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen − eleven =
Remember me
