ನವದೆಹಲಿ:ತಿಂಗಳ ಹಿಂದೆ ಪ್ರತಿದಿನ 95 ಸಾವಿರಕ್ಕೂ ಅಧಿಕ ಕರೊನಾ ಪ್ರಕರಣಗಳು ಪತ್ತೆಯಾಗುತ್ತಿದ್ದ ಭಾರತದಲ್ಲಿ ಈಗ ಸೋಂಕಿನ ಸಂಖ್ಯೆ ಗಣನೀಯ ಇಳಿಕೆ ಕಂಡಿದೆ. ಸೋಮವಾರ 46,800 ಪ್ರಕರಣಗಳು ಪತ್ತೆಯಾಗಿವೆ. ಇದು ಸೋಂಕಿನ ಏಕದಿನ ಏರಿಕೆಯಲ್ಲಿ ಮೂರು ತಿಂಗಳಲ್ಲಿ ವರದಿಯಾದ ಅತ್ಯಂತ ಕನಿಷ್ಠ ದಾಖಲೆಯಾಗಿದೆ. ಸತತ ಎರಡನೇ ದಿನವೂ ಮೃತರ ಸಂಖ್ಯೆ 600ಕ್ಕಿಂತ ಕಡಿಮೆ ವರದಿಯಾಗಿದೆ.
25 ಸಾವಿರಕ್ಕೂ ಹೆಚ್ಚು ಪ್ರಕರಣದ ಏಕದಿನ ಏರಿಕೆ ದಾಖಲೆ ಬರೆದಿದ್ದ ಮಹಾರಾಷ್ಟ್ರದಲ್ಲಿ 24 ಗಂಟೆಗಳಲ್ಲಿ 6 ಸಾವಿರ ಪ್ರಕರಣ ಪತ್ತೆಯಾಗಿದೆ. ಕರ್ನಾಟಕ ಮತ್ತು ಕೇರಳದಲ್ಲಿ ತಲಾ 5 ಸಾವಿರ, ಪಶ್ಚಿಮ ಬಂಗಾಳದಲ್ಲಿ ನಾಲ್ಕು ಸಾವಿರ, ತಮಿಳುನಾಡಿನಲ್ಲಿ 3,500 ಮತ್ತು ಆಂಧ್ರಪ್ರದೇಶದಲ್ಲಿ 3 ಸಾವಿರ ಪ್ರಕರಣ ಪತ್ತೆಯಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 75.97 ಲಕ್ಷಕ್ಕೆ ಏರಿಕೆಯಾಗಿದ್ದು, ಅದರಲ್ಲಿ 67.33 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ. 7.48 ಲಕ್ಷ ಸಕ್ರಿಯ ಪ್ರಕರಣಗಳು ಬಾಕಿಯಿವೆ. ಇದುವರೆಗೆ ಮೃತರಾದವರ ಸಂಖ್ಯೆ 1.15 ಲಕ್ಷಕ್ಕೆ ಏರಿಕೆಯಾಗಿದೆ. ಸೆಪ್ಟೆಂಬರ್ 18ಕ್ಕೆ ಶೇ. 92 ಕರೊನಾ ಹೆಚ್ಚಳ ವರದಿಯಾಗಿತ್ತು. ಅದೀಗ ಶೇ. 42ಕ್ಕೆ ಇಳಿದಿದೆ. ಪ್ರಸ್ತುತ ಚೇತರಿಕೆ ಪ್ರಮಾಣ ಶೇ. 88.63ರಷ್ಟಿದೆ. ಮರಣ ಪ್ರಮಾಣ ಶೇ. 1.52 ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸ್ಪುಟ್ನಿಕ್-ವಿ ಔಷಧದ ಮೂರನೇ ಹಂತದ ಪ್ರಯೋಗ ವರದಿಯನ್ನು ನವೆಂಬರ್​ನಲ್ಲಿ ನೀಡುವುದಾಗಿ ರಷ್ಯಾ ತಿಳಿಸಿದೆ. ದೇಶದಲ್ಲಿ 40 ಸಾವಿರ ಜನರ ಮೇಲೆ ಮೂರನೇ ಹಂತದ ಪ್ರಯೋಗ ಮಾಡಲಾಗುತ್ತಿದ್ದು, ನವೆಂಬರ್​ಗೆ 10 ಸಾವಿರ ಜನರ ವರದಿ ನೀಡುವುದಾಗಿ ಹೇಳಿದೆ.. ಭಾರತದಲ್ಲಿ ಡಾ.ರೆಡ್ಡಿ ಲ್ಯಾಬೋರೇಟರಿ ಸ್ಪುಟ್ನಿಕ್-ವಿ ಔಷಧ ಪ್ರಯೋಗ ನಡೆಸಲಿದೆ.
ಭಾರತದಲ್ಲಿ ಕರೊನಾ ಆರಂಭವಾದ ಮೊದಲ ನಾಲ್ಕು ತಿಂಗಳಲ್ಲಿ 122 ಔಷಧಗಳು ಸಿದ್ಧವಾಗಿದ್ದವು ಎಂದು ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ (ಐಜೆಎಂಆರ್) ವರದಿ ನೀಡಿದೆ. ಕ್ಲಿನಿಕಲ್ ಟ್ರಯಲ್ಸ್ ರಿಜಿಸ್ಟ್ರಿ (ಸಿಟಿಆರ್​ಐ)ನಲ್ಲಿ ಕರೊನಾದ 122 ಔಷಧಗಳು ನೋಂದಣಿಯಾಗಿವೆ. ಇದರಲ್ಲಿ 42 ಔಷಧಗಳು ಅಲೋಪಥಿಗೆ ಸಂಬಂಧ ಪಟ್ಟದ್ದಾಗಿದ್ದರೆ, 67 ಔಷಧಗಳು ಹೋಮಿಯೋಪಥಿ, ಆಯುರ್ವೆದ ಮತ್ತು ಯೋಗಾಭ್ಯಾಸಕ್ಕೆ ಸಂಬಂಧಪಟ್ಟವು. ಅದರಲ್ಲಿ 45 ಆಯುರ್ವೆದದ ಔಷಧಗಳಾಗಿದ್ದು, 14 ಹೋಮಿಯೋಪಥಿ ಔಷಧಗಳು. ಈವರೆಗೆ ಸಿಟಿಆರ್​ಐನಲ್ಲಿ ವಿವಿಧ ಕಾಯಿಲೆಯ 27 ಸಾವಿರ ಔಷಧಗಳು ನೋಂದಣಿಯಾಗಿವೆ.
ದೇಶದಲ್ಲಿ ಕರೊನಾ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತಿರುವ ಪ್ಲಾಸ್ಮಾ ಚಿಕಿತ್ಸೆಯನ್ನು ನ್ಯಾಷನಲ್ ಹೆಲ್ತ್ ಕ್ಲಿನಿಕಲ್ ಪ್ರೊಟೊಕಾಲ್​ನಿಂದ ಕೈ ಬಿಡುವ ಚಿಂತನೆ ನಡೆಸಿರುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ. ಈ ಚಿಕಿತ್ಸೆಯಿಂದ ಮರಣ ಪ್ರಮಾಣ ಕಡಿಮೆಯಾಗದ ಹಿನ್ನೆಲೆಯಲ್ಲಿ ಈ ಚಿಂತನೆ ನಡೆಸಲಾಗಿದೆ. ಸೋಂಕಿಗೆ ಒಳಗಾದ ವ್ಯಕ್ತಿಯಲ್ಲಿ ಪ್ರತಿಕಾಯವು 5 ತಿಂಗಳ ಕಾಲ ಜೀವಂತವಾಗಿರದಿದ್ದರೆ ಆತನಿಗೆ ಮತ್ತೊಮ್ಮೆ ಸೋಂಕು ತಗುಲುವ ಸಾಧ್ಯತೆಯಿರುತ್ತದೆ ಎಂದು ಐಸಿಎಂಆರ್ ಹೇಳಿದೆ.
2020ರ ವರ್ಷಾಂತ್ಯದೊಳಗೆ 50 ಕೋಟಿ ಸಿರಿಂಜ್​ನ್ನು ಸಂಗ್ರಹ ಮಾಡುವುದಾಗಿ ಯುನಿಸೆಫ್ ತಿಳಿಸಿದೆ. ಔಷಧ ಸಿದ್ಧವಾದ ತಕ್ಷಣ ಸಿರಿಂಜ್ ಅಗತ್ಯತೆ ಹೆಚ್ಚುತ್ತದೆ. ಹಾಗಾಗಿ ಸಿರಿಂಜ್ ಸಂಗ್ರಹ ಮಾಡಲಾಗುತ್ತಿದೆ. 2021ರಲ್ಲಿ 100 ಕೋಟಿ ಸಿರಿಂಜ್ ಸಂಗ್ರಹಿಸುವ ಗುರಿ ಹೊಂದಿದೆ.
ಚೀನಾ ತಯಾರಿಸಿರುವ ಸಿನೊವ್ಯಾಕ್ ಔಷಧದ ಮೂರನೇ ಹಂತದ ಪ್ರಯೋಗ ಬ್ರೆಜಿಲ್​ನಲ್ಲಿ ನಡೆದಿದ್ದು, ಔಷಧ ಸುರಕ್ಷಿತ ಎಂದು ಬ್ರೆಜಿಲ್ ಹೇಳಿದೆ.. 9 ಸಾವಿರ ಜನರ ಮೇಲೆ ಔಷಧ ಪ್ರಯೋಗ ಮಾಡಲಾಗಿತ್ತು. ಅದರಲ್ಲಿ ಕೆಲವು ಜನರು ಮಾತ್ರ, ಚುಚ್ಚುಮದ್ದಿನಿಂದಾಗಿ ನೋವಾಗಿದ್ದಾಗಿ ತಿಳಿಸಿದ್ದಾರೆ. ಸ್ವಲ್ಪ ಜನರಲ್ಲಿ ತಲೆನೋವು, ದೇಹಬಾಧೆಯಂತಹ ಸಣ್ಣ ಪುಟ್ಟ ತೊಂದರೆ ಕಾಣಿಸಿಕೊಂಡಿದೆ. ಉಳಿದಂತೆ ಔಷಧ ಯಾವುದೇ ಪ್ರಮುಖ ದುಷ್ಪರಿಣಾಮವನ್ನು ಉಂಟುಮಾಡಿಲ್ಲ ಎಂದು ತಿಳಿಸಿದೆ.
ಕರೊನಾ ಔಷಧ ಪಡೆಯಲು ರಾಷ್ಟ್ರೀಯ ಡಿಜಿಟಲ್ ಹೆಲ್ತ್ ಮಿಷನ್​ನ (ಎನ್​ಡಿಎಚ್​ಎಂ) ಗುರುತಿನ ಪತ್ರ ಕಡ್ಡಾಯವಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ. ಡಿಜಿಟಲ್ ಹೆಲ್ತ್ ಕಾರ್ಡ್ ಬಳಸಿಕೊಂಡು ಔಷಧ ವಿತರಣೆ ಮಾಡಲಾಗುವುದು ಎಂದು ಪ್ರಧಾನಿ ಮೋದಿ ಸೋಮವಾರದ ಭಾಷಣದಲ್ಲಿ ಹೇಳಿದ್ದರು. ಆದರೆ ಅದು ಕಡ್ಡಾಯವೇನಲ್ಲ. ವೋಟರ್ ಐಡಿ, ಆಧಾರ್ ಕಾರ್ಡ್ ಸೇರಿ ಯಾವುದಾದರೂ ದಾಖಲೆಯ ಆಧಾರದ ಮೇರೆಗೆ ಔಷಧ ವಿತರಣೆ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಒಂದು ನಿಮಿಷದಲ್ಲಿ ಕರೊನಾ ಪತ್ತೆ ಮಾಡಬಲ್ಲ ಪರೀಕ್ಷೆಯನ್ನು ಸಿಂಗಾಪುರದ ತಜ್ಞರು ಅಭಿವೃದ್ಧಿಪಡಿಸಿದ್ದಾರೆ. ಬಳಸಿ ಬಿಸಾಡಬಹುದಾದಂತಹ ಕೊಳವೆಗಳ ಮೂಲಕ ವ್ಯಕ್ತಿಗಳ ಉಸಿರಿನ ಮಾದರಿಯನ್ನು ಪಡೆಯಲಾಗುತ್ತದೆ. ಬಳಿಕ ಅದನ್ನು ಮಾಸ್ ಸ್ಪೆಕ್ಟ್ರೋಮೀಟರ್​ಗೆ ಹಾಕಿದಾಗ 1 ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ ವರದಿ ದೊರೆಯಲಿದೆ ಎಂದು ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಾಪುರದ ಸಂಶೋಧಕರು ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − seven =
Remember me
