ನವದೆಹಲಿ: ವಿಶ್ವದಾದ್ಯಂತ ತಲ್ಲಣ ಸೃಷ್ಟಿಸಿರುವ ಮಹಾಮಾರಿ ಕರೊನಾ ಸೋಂಕಿಗೆ ಒಳಗಾದವರ ಸಂಖ್ಯೆ ಬರೋಬ್ಬರಿ 10 ಲಕ್ಷ ದಾಟಿದ್ದು, ಆತಂಕ ಮತ್ತಷ್ಟು ಉಲ್ಬಣವಾಗುವಂತೆ ಮಾಡಿದೆ. ನಾಲ್ಕು ತಿಂಗಳಲ್ಲಿ ಕರೊನಾ ವೈರಸ್ ಚೀನಾದ ವುಹಾನ್​ನಿಂದ 150ಕ್ಕೂ ಹೆಚ್ಚು ರಾಷ್ಟ್ರಗಳ ಮೂಲೆ ಮೂಲೆ ತಲುಪಿದೆ. ಕಳೆದ 24 ತಾಸಿನಲ್ಲಿ 25,434 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 10,40,499ಕ್ಕೆ ಏರಿಕೆಯಾಗಿದೆ.
ಕರೊನಾಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ವೇಗ ಪಡೆದುಕೊಳ್ಳುತ್ತಿದ್ದು, ಕಳೆದ 24 ತಾಸಿನಲ್ಲಿ 2,013 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಮೃತರ ಸಂಖ್ಯೆ 55,180ಕ್ಕೆ ಏರಿಕೆಯಾಗಿದೆ.
ಕಳೆದ ವರ್ಷ ಡಿಸೆಂಬರ್ 1ರಂದು ವುಹಾನ್​ನ ಮಾಂಸ ಮಾರುಕಟ್ಟೆಯಲ್ಲಿನ ಓರ್ವ ವ್ಯಕ್ತಿಯಲ್ಲಿ ಕಾಣಿಸಿಕೊಂಡಿದ್ದ ಕರೊನಾ ನಂತರ ವುಹಾನ್ ಪ್ರಾಂತ್ಯದ ಮೂಲೆ ಮೂಲೆಗೂ ಹಬ್ಬಿತ್ತು. ಈ ನಡುವೆ ಅಲ್ಲಿಗೆ ಭೇಟಿ ನೀಡಿ ಇತರ ದೇಶಗಳಿಗೆ ಪ್ರಯಾಣ ಮಾಡಿದ್ದವರಿಂದ ವೈರಸ್ ವಿಶ್ವದ ಅನೇಕ ರಾಷ್ಟ್ರಗಳನ್ನು ಆಕ್ರಮಿಸಿಕೊಂಡಿದೆ. ಏಷ್ಯಾದ ಬಳಿಕ ಯುರೋಪ್​ಗೆ ಕಾಲಿಟ್ಟ ಕರೊನಾ ಜ. 14ರಂದು ಮೊದಲ ಬಲಿ ಪಡೆದಿತ್ತು. ಅಂದಿನಿಂದ ಇಂದಿನವರೆಗೆ ಅಲ್ಲಿ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ನಿರಂತರವಾಗಿ ಏರಿಕೆ ಕಾಣುತ್ತಲೇ ಇದೆ. ಅಮೆರಿಕದಲ್ಲಿ ಫೆ. 29ರಂದು ಮೊದಲ ವೈರಸ್ ಪತ್ತೆಯಾದಾಗ ಅಲ್ಲಿನ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರಿಂದ ಸಾವಿರಾರು ಜನರು ಇದರ ವ್ಯಾಪ್ತಿಗೆ ಬಂದರು. ಕರೊನಾ ವೈದ್ಯಕೀಯ ಪರೀಕ್ಷೆಯೂ ಮಂದಗತಿಯಲ್ಲಿ ಸಾಗಿದ್ದರಿಂದಾಗಿ ಇಂದು ಜಾಗತಿಕವಾಗಿ ಅತೀ ಹೆಚ್ಚು ಸೋಂಕಿತರನ್ನು ಅಮೆರಿಕ ಹೊಂದಿದೆ. ಅಮೆರಿಕವೊಂದರಲ್ಲೇ ಎರಡೂವರೆ ಲಕ್ಷ ಜನ ಸೋಂಕಿಗೆ ಒಳಗಾಗಿದ್ದು, ಅಲ್ಲಿ ಸಾವನ್ನಪ್ಪಿದವರ ಸಂಖ್ಯೆ 6 ಸಾವಿರಕ್ಕೂ ಹೆಚ್ಚಾಗಿದೆ. ಸ್ಪೇನ್ ಮತ್ತು ಇಟಲಿಯಲ್ಲಿ ತಲಾ 1 ಲಕ್ಷದಷ್ಟು ಜನರು ಕರೊನಾಗೆ ಒಳಗಾಗಿದ್ದು, ಅಧಿಕ ಪ್ರಮಾಣದಲ್ಲಿ ಜನರು ಸಾವನ್ನಪು್ಪತ್ತಿದ್ದಾರೆ. ಫ್ರಾನ್ಸ್, ಇರಾನ್, ಬ್ರಿಟನ್​ನಲ್ಲೂ ಕರೊನಾ ತನ್ನ ವ್ಯಾಪ್ತಿ ವಿಸ್ತರಿಸುತ್ತಿದೆ. ಕರೊನಾ ಅಟ್ಟಹಾಸದ ನಡುವೆ ಗುಣಮುಖರಾಗುತ್ತಿರುವವರ ಸಂಖ್ಯೆ ಏರಿಕೆ ಕಾಣುತ್ತಿರುವುದು ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ. ಕರೊನಾ ಸೋಂಕಿಗೆ ಒಳಗಾಗಿ ಈವರೆಗೆ 2,22,240 ಜನರು ಗುಣಮುಖರಾಗಿದ್ದಾರೆ.
ನ್ಯೂಯಾರ್ಕ್ ಪರಿಸ್ಥಿತಿ ಗಂಭೀರ
ಅಮೆರಿಕದ ನ್ಯೂಯಾರ್ಕ್​ವೊಂದರಲ್ಲೇ ಸುಮಾರು 50 ಸಾವಿರಕ್ಕಿಂತ ಹೆಚ್ಚು ಸೋಂಕಿತರಿದ್ದು, ಒಟ್ಟು ಮೃತರ ಸಂಖ್ಯೆಯಲ್ಲಿ 1,562 ಜನರು ನ್ಯೂಯಾರ್ಕ್​ನವರೇ ಆಗಿದ್ದಾರೆ. ಈ ಹಿನ್ನೆಲೆ ಜನರು ಮನೆಯಿಂದ ಆಚೆ ಬಂದಾಗ ಹಾಗೂ ಇನ್ನೊಬ್ಬರೊಂದಿಗೆ ಮಾತನಾಡುತ್ತಿರುವಾಗ ಕಡ್ಡಾಯವಾಗಿ ಮುಖ ಮುಚ್ಚಿಕೊಂಡಿರಬೇಕು ಎಂದು ಆದೇಶಿಸಲಾಗಿದೆ. 10,590 ಸೋಂಕಿತರಿಗೆ ನ್ಯೂಯಾರ್ಕ್​ನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಿಕ್ಕವರನ್ನು ಹೋಮ್ ಐಸೋಲೆಷನ್​ಗೆ ಒಳಪಡಿಸಲಾಗಿದೆ. ಅಮೆರಿಕದ 21 ರಾಜ್ಯಗಳಲ್ಲಿ ನ್ಯೂಯಾರ್ಕ್​ನ ಪರಿಸ್ಥಿತಿಯೇ ಅತೀ ಹೆಚ್ಚು ಗಂಭೀರ ಸ್ವರೂಪದಲ್ಲಿದೆ.
ಸಿಂಗಾಪುರ ಒಂದು ತಿಂಗಳು ಲಾಕ್​ಡೌನ್
ಕರೊನಾ ಭೀತಿ ಹಿನ್ನೆಲೆಯಲ್ಲಿ ಸಿಂಗಾಪುರದಲ್ಲಿ ಬುಧವಾರದಿಂದ ಒಂದು ತಿಂಗಳ ಕಾಲ ಲಾಕ್​ಡೌನ್ ಘೋಷಿಸಲಾಗಿದೆ. ಶಾಲೆ-ಕಾಲೇಜು ಸೇರಿ ಎಲ್ಲ ಕಂಪನಿಗಳು, ಬಿಜಿನೆಸ್​ಗಳು ಬುಧವಾರದಿಂದ ಬಾಗಿಲು ಮುಚ್ಚಲಿವೆ. ಅತ್ಯಗತ್ಯ ವಸ್ತುಗಳ ಉತ್ಪಾದನೆ, ಪೂರೈಕೆ ಹಾಗೂ ಪ್ರಮುಖ ಆರ್ಥಿಕ ವಿಭಾಗಗಳಿಗೆ ಈ ಲಾಕ್​ಡೌನ್​ನಿಂದ ವಿನಾಯಿತಿ ನೀಡಲಾಗಿದೆ ಎಂದು ಪ್ರಧಾನಿ ಲೀ ಹ್ಸೀನ್ ಲೂಂಗ್ ಹೇಳಿದ್ದಾರೆ. ಕಳೆದ ಕೆಲ ವಾರಗಳಿಂದ ಸಿಂಗಾಪುರದಲ್ಲಿ ಕರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿನ ಪ್ರಸರಣ ಕೊಂಡಿಯನ್ನು ಕಳಚುವ ಉದ್ದೇಶದಿಂದ ಲಾಕ್​ಡೌನ್ ಘೋಷಿಸಲಾಗಿದೆ.
ನಿರುದ್ಯೋಗಿಗಳಾದ 1 ಕೋಟಿ ಅಮೆರಿಕನ್ನರು!
ಕರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್​ಡೌನ್ ಘೋಷಿಸಿರುವುದರಿಂದ ಅಮೆರಿಕದ ಶೇ.90 ಜನತೆ ಮನೆಯಲ್ಲೇ ಇದ್ದಾರೆ. ಹೀಗಾಗಿ ಪ್ರಮುಖ ಉದ್ದಿಮೆಗಳು, ಹೋಟೆಲ್​ಗಳು ಸೇರಿ ಬಹುತೇಕ ಎಲ್ಲ ಕಂಪನಿ, ಕಾರ್ಖಾನೆಗಳು ಬಾಗಿಲು ಮುಚ್ಚಿವೆ. ಲಾಕ್​ಡೌನ್​ನಿಂದಾಗಿ ಕಳೆದ 2 ವಾರಗಳಲ್ಲಿ 1 ಕೋಟಿ ಜನರು ಉದ್ಯೋಗವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ರೀತಿಯ ಪರಿಸ್ಥಿತಿ, 1930ರಲ್ಲಿ ಉಂಟಾಗಿದ್ದ ಉದ್ಯೋಗ ನಷ್ಟ ಬಿಕ್ಕಟ್ಟಿನ ನಂತರ ಎಂದೂ ಉದ್ಭವವಾಗಿರಲಿಲ್ಲ ಎಂದು ತಜ್ಞರು ಹೇಳಿದ್ದಾರೆ. ಸ್ಪೇನ್, ಫ್ರಾನ್ಸ್​ನಲ್ಲೂ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದು, ನಿರುದ್ಯೋಗದ ಪ್ರಮಾಣ ಇನ್ನೂ ಏರಿಕೆಯಾಗುವ ಸಂಭವವಿದೆ. ಇಡೀ ಜಗತ್ತಿನ ಆರ್ಥಿಕತೆಗೆ ಕರೊನಾ ನೀಡಿರುವ ಹೊಡೆತದಿಂದಾಗಿ ಸುಮಾರು 4.1 ಟ್ರಿಲಿಯನ್ ಡಾಲರ್ ನಷ್ಟ ಸಂಭವಿಸಬಹುದು ಎಂದು ಏಷ್ಯನ್ ಡೆವಲಪ್​ವೆುಂಟ್ ಬ್ಯಾಂಕ್ ಎಚ್ಚರಿಸಿದೆ.
ಎರಡನೇ ಅಲೆ ಏಳಬಹುದು ಎಂಬ ಆತಂಕ
ಮಾರಕ ವೈರಸ್​ನ್ನು ಸಮರ್ಥವಾಗಿ ನಿರ್ವಹಿಸಿರುವ ಚೀನಾ ಮತ್ತು ದಕ್ಷಿಣ ಕೊರಿಯಾ ತಮ್ಮ ಆರ್ಥಿಕತೆ, ವ್ಯಾಪಾರ ವಹಿವಾಟನ್ನು ಮತ್ತೆ ಹಳಿಗೆ ತರುವ ಸಲುವಾಗಿ ನಿರ್ಬಂಧಗಳನ್ನು ಹಂತಹಂತವಾಗಿ ತೆರವುಗೊಳಿಸುತ್ತಿವೆ. ಆದರೆ ಸರ್ಕಾರದ ಕ್ರಮದಿಂದಾಗಿ ಮತ್ತೆ ಕರೊನಾ ಅಲೆ ಏಳಬಹುದು ಎಂದು ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈಗ ಗುಣಮುಖರಾಗಿರುವವರು ಸಂಪೂರ್ಣ ರೋಗನಿರೋಧಕತೆಯನ್ನು ಹೊಂದಿಲ್ಲವೆಂಬುದು ಮತ್ತಷ್ಟು ಆತಂಕಕಾರಿಯಾಗಿದೆ.
ನರ್ಸ್​ ಸರಸ್ವತಿ ಕ್ವಾರಂಟೈನ್​ನಲ್ಲಿದ್ದರು, ಬಹಿಷ್ಕಾರ ಹಾಕಿಲ್ಲ: ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸ್ಪಷ್ಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + seven =
Remember me
