ನವದೆಹಲಿ:ಎಂಟು ವಾರಗಳ ಯೋಜಿತ ಲಾಕ್​ಡೌನ್ ಹಾಗೂ ಸಮರೋಪಾದಿಯಲ್ಲಿ ಕೈಗೊಂಡ ಆರೋಗ್ಯ ಸುರಕ್ಷಾ ಕ್ರಮಗಳಿಂದಾಗಿ ಕರೊನಾ ಮಹಾಮಾರಿ ತೀವ್ರ ಸ್ವರೂಪದಲ್ಲಿ ಅಪ್ಪಳಿಸುವುದನ್ನು ಮುಂದೂಡಿದ್ದರೂ, ನವೆಂಬರ್ ತಿಂಗಳ ಮಧ್ಯಭಾಗದಲ್ಲಿ ದೇಶದಲ್ಲಿ ಸೋಂಕು ಹರಡುವಿಕೆ ಚರಮಘಟ್ಟ ತಲುಪುವ ಸಾಧ್ಯತೆ ಇದೆ ಎಂಬ ಆತಂಕಕಾರಿ ಸಂಗತಿ ಬಯಲಾಗಿದೆ.
ಈಗಾಗಲೇ ಜಾಗತಿಕವಾಗಿ ನಾಲ್ಕನೇ ಅತೀ ಹೆಚ್ಚು ಕರೊನಾ ಪೀಡಿತ ರಾಷ್ಟ್ರವಾಗಿರುವ ಭಾರತನಲ್ಲಿ ನವೆಂಬರ್​ವರೆಗೂ ಕರೊನಾ ಹಾವಳಿ ಮುಂದುವರಿಯುವ ಸಾಧ್ಯತೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಅಧ್ಯಯನ ವರದಿ ಎಚ್ಚರಿಸಿದೆ. ಹಾಗಾದಲ್ಲಿ ನವೆಂಬರ್ ಮಧ್ಯಭಾಗದಲ್ಲಿ ಐಸಿಯು ಬೆಡ್ ಹಾಗೂ ವೆಂಟಿಲೇಟರ್​ಗಳಿಗೂ ಕೊರತೆ ಕಾಡುವುದು ನಿಶ್ಚಿತ ಎಂದು ವರದಿ ಹೇಳಿದೆ.
ಚಿಕಿತ್ಸೆಯದ್ದೇ ಚಿಂತೆ:ಕರೊನಾ ರೋಗಿಗಳ ಚಿಕಿತ್ಸೆ ಭಾರತಕ್ಕೆ ಪ್ರಮುಖ ಸವಾಲಾಗಿ ಪರಿಣಮಿಸಲಿದೆ. ನವೆಂಬರ್ ಮೊದಲ ವಾರದ ಬಳಿಕ ರೋಗಿಗಳಿಗೆ 5.4 ತಿಂಗಳವರೆಗೆ ಪ್ರತ್ಯೇಕ ಹಾಸಿಗೆಗಳು, 4.6 ತಿಂಗಳವರೆಗೆ ಐಸಿಯು ಹಾಸಿಗೆಗಳು, 3.9 ತಿಂಗಳವರೆಗೆ ವೆಂಟಿಲೇಟರ್ ಹಾಸಿಗೆಗಳ ಕೊರತೆ ಅಥವಾ ಅಸಮರ್ಪಕತೆ ಉಂಟಾಗ ಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಸದ್ಯ ದೇಶದಲ್ಲಿರುವ ವೈದ್ಯಕೀಯ ವ್ಯವಸ್ಥೆಗಳು ನವೆಂಬರ್​ನ ಮೊದಲ ವಾರದವರೆಗೂ ಸೋಂಕಿತರ ಚಿಕಿತ್ಸೆ ಬೇಡಿಕೆ ಪೂರೈಸಲು ಸಾಕಾಗುತ್ತದೆ.ಇದನ್ನೂ ಓದಿ:10 ವರ್ಷಗಳಿಂದ ನಕ್ಸಲರೊಂದಿಗೆ ನಂಟು ಹೊಂದಿದ್ದ ಬಿಜೆಪಿ ಮುಖಂಡ ಅರೆಸ್ಟ್​
ಆದಾಗ್ಯೂ ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಈಗಲೇ ಕರೊನಾ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಹಾಸಿಗೆಗಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಆರೋಗ್ಯ ವ್ಯವಸ್ಥೆ ಸುಧಾರಣೆ:ಲಾಕ್​ಡೌನ್ ಅವಧಿಯಲ್ಲಿ ಕರೊನಾ ತೀವ್ರತೆ ಕಡಿಮೆ ಇದ್ದಿದ್ದರಿಂದ ದೇಶದಲ್ಲಿ ಕ್ವಾರಂಟೈನ್, ಸೋಂಕು ಪರೀಕ್ಷೆ ಹಾಗೂ ವೈದ್ಯಕೀಯ ಸೇವೆಗಳನ್ನು ಸಮರ್ಪಕವಾಗಿ ಹೆಚ್ಚಿಸಲಾಗಿದೆ. ಇದರಿಂದಾಗಿ ನವೆಂಬರ್​ನಲ್ಲಿ ಎದುರಾಗಬಹುದಾದ ಚಿಕಿತ್ಸಾ ಸೌಲಭ್ಯ ಕೊರತೆ ಕೊಂಚ ಕಡಿಮೆಯಾಗಬಹುದುದೆಂದು ಅಂದಾಜಿಸಲಾಗಿದೆ. ಜತೆಗೆ ಈಗಾಗಲೇ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳಿಂದಾಗಿ ಆ ವೇಳೆ ವರದಿಯಾಗಬಹುದಾದ ಪ್ರಕರಣಗಳ ಸಂಖ್ಯೆ ಶೇ.27 ಹಾಗೂ ಮರಣ ಪ್ರಮಾಣ ಶೇ.60 ತಗ್ಗುವ ನಿರೀಕ್ಷೆಯನ್ನು ವರದಿ ಹೇಳಿದೆ.ಇದನ್ನೂ ಓದಿ:‘ಆತ ನನ್ನನ್ನು ತುಂಬ ಪ್ರೀತಿಸುತ್ತಿದ್ದ…ನಾನು ಅವನ ಮಿಸ್​ ಮಾಡಿಕೊಳ್ಳುತ್ತೇನೆ…’: ಶಾರುಖ್​ ಖಾನ್​ ಕಣ್ಣೀರು
ಕರೊನಾ ಸೋಂಕು ಪಸರಿಸುವಿಕೆ ಭೀತಿ ಹಿನ್ನೆಲೆ ಮಾರ್ಚ್​ನಲ್ಲಿ ಘೋಷಿಸಲಾಗಿದ್ದ ಲಾಕ್​ಡೌನ್, ದೇಶದಲ್ಲಿ ಕರೊನಾ ತೀವ್ರತೆಯನ್ನು ಆರಂಭಿಕವಾಗಿ ತಡೆಹಿಡಿಯಲು ಯಶಸ್ವಿಯಾಗಿತ್ತಾದರೂ, ನವೆಂಬರ್ ಮಧ್ಯದಲ್ಲಿ ಕರೊನಾ ಆರ್ಭಟ ಹೆಚ್ಚು ತೀವ್ರ ಸ್ವರೂಪಕ್ಕೆ ತಿರುಗುವ ಎಲ್ಲ ಸಾಧ್ಯತೆಗಳಿವೆ.
ದೇಶಕ್ಕೆ ಕರೊನಾ ಕಾಲಿಟ್ಟ ಬಳಿಕ 34 ದಿನಗಳಲ್ಲಿ ಅದರ ಆರ್ಭಟ ಹೆಚ್ಚಾಗಬಹುದು ಎಂದು ಈ ಮೊದಲು ಅಂದಾಜಿಸಲಾಗಿತ್ತು. ಅದನ್ನು ಲಾಕ್​ಡೌನ್ ಮೂಲಕ 76 ದಿನಗಳಿಗೆ ವಿಳಂಬಿಸಲಾಯಿತು. ಇದೇ ವೇಳೆ ಸೋಂಕಿಗೆ ಒಳಗಾಗುವವರ ಸಂಖ್ಯೆಯನ್ನೂ ಶೇ.69 ರಿಂದ 97ರಷ್ಟು ಕಡಿಮೆಗೊಳಿಸಿತು. ಕರೊನಾದ ಅಸಲಿ ಆರ್ಭಟ ತಡವಾಗಿದೆಯಾದರೂ ದೇಶಕ್ಕೆ ಇದರ ತೀವ್ರತೆಯ ಕಂಟಕ ತಪ್ಪಿದ್ದಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ನವದೆಹಲಿ:ಭಾರತದಲ್ಲಿ ಕಳೆದ 24 ತಾಸಿನಲ್ಲಿ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3.31 ಲಕ್ಷಕ್ಕೇರಿದೆ. ಹೊಸದಾಗಿ 286 ಸಾವು ಸಂಭವಿಸಿದ್ದು, ಮೃತರ ಸಂಖ್ಯೆ 9,485ಕ್ಕೆ ಏರಿಕೆಯಾಗಿದೆ. ಈವರೆಗೆ 1.68 ಲಕ್ಷ ಸೋಂಕಿತರು ಗುಣಮುಖರಾಗಿದ್ದು, ಇನ್ನೂ 1.53 ಲಕ್ಷ ಸಕ್ರಿಯ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 1.07 ಲಕ್ಷಕ್ಕೇರಿದ್ದು, ಮೃತರ ಸಂಖ್ಯೆ 3,950ಕ್ಕೆ ಏರಿಕೆಯಾಗಿದೆ.
ಕರೊನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಪ್ರಕರಣಗಳ ಹೆಚ್ಚಳವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ನರೇಂದ್ರ ಮೋದಿ ಜೂ.16,17ರಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೋ ಸಂವಾದ ಏರ್ಪಡಿಸಿರುವ ಬೆನ್ನಲ್ಲೇ ಈ ಐಸಿಎಂಆರ್ ವರದಿ ಬಹಿರಂಗಗೊಂಡಿರುವುದು ಕುತೂಹಲ ಹೆಚ್ಚಿಸಿದೆ. ದೇಶದಲ್ಲಿ ಮತ್ತೆ ಲಾಕ್​ಡೌನ್ ಹೇರಿಕೆ ಆಗಬಹುದೆಂಬ ವದಂತಿ ಇದೆಯಾದರೂ ಕರ್ನಾಟಕದ ಹಲವು ಸಚಿವರು ಈ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ. ಏತನ್ಮಧ್ಯೆ ಕರೊನಾ ವೈರಸ್ ವಿರುದ್ಧದ ಹೋರಾಟವನ್ನು ಮತ್ತಷ್ಟು ಕ್ರಿಯಾಶೀಲಗೊಳಿಸಲು ದೇಶದ ಜನರ ಅಭಿಪ್ರಾಯದ ಅವಶ್ಯಕತೆ ಇರುವುದಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 12 =
Remember me
