ನವದೆಹಲಿ:ಕರೊನಾ ವೈರಸ್​ ಸೋಂಕು ಭಾರತದಲ್ಲಿ ಇನ್ನೂ ಮೂರನೇ ಹಂತ ಅಂದರೆ ಸಾಮುದಾಯಿಕ ಹರಡುವಿಕೆ ಹಂತ ತಲುಪಿಲ್ಲ. ಅದು ಇನ್ನೂ ಸ್ಥಳಿಯ ಮಟ್ಟದಲ್ಲಿ ಮಾತ್ರ ಅಂದರೆ ಸೋಂಕಿತ ವ್ಯಕ್ತಿಯ ಕುಟುಂಬ ವರ್ಗದವರಿಗೆ ಹರಡುವಿಕೆ ಹಂತದಲ್ಲಿದೆ ಎಂದು ಭಾರತೀಯ ವೈದ್ಯಕಿಯ ಸಂಶೋಧನಾ ಮಂಡಳಿ (ಐಸಿಎಂಆರ್​) ಸೋಮವಾರ ಸ್ಪಷ್ಟಪಡಿಸಿದೆ.
ಸುದ್ದಿಗಾರರ ಜತೆ ಮಾತನಾಡಿದ ಐಸಿಎಂಆರ್​ನ ಲವ ಅಗರ್​ವಾಲ್​ ಈ ವಿಷಯ ತಿಳಿಸಿದ್ದಾರೆ. ಒಂದು ವೇಳೆ ಸಮುದಾಯಿಕ ಹರಡುವಿಕೆ ಎಂಬ ಪದ ಬಳಸಿದರೆ ಅದು ಆಧಾರರಹಿತ ವದಂತಿ ಎನಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ.ಭಾರತದಲ್ಲಿ ಇದುವರೆಗೆ 1,100 ಜನರು ಕರೊನಾ ವೈರಸ್​ ಸೋಂಕಿಗೆ ಒಳಗಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪಿಡುಗಿಗೆ 29 ಜನ ಬಲಿಯಾಗಿದ್ದಾರೆ.
ವಿದೇಶಗಳಿಂದ ಬಂದವರು ಕರೊನಾ ಸೋಂಕಿಗೆ ಒಳಗಾಗಿರುವುದು ಮೊದಲ ಹಂತವಾಗಿರುತ್ತದೆ. ಸೋಂಕಿತನ ಕುಟುಂಬ ವರ್ಗದವರು ಸೋಂಕಿಗೆ ತುತ್ತಾಗುವುದು ಸ್ಥಳಿಯ ಅಥವಾ ನಿಯಂತ್ರಿತ ಸಾಮುದಾಯಿಕ ಹರಡುವಿಕೆ ಎರಡನೇ ಹಂತ ಎನಿಸಿಕೊಳ್ಳುತ್ತದೆ. ಇದರ ಪರಿಣಾಮ ಕೂಡ ಸೀಮಿತವಾಗಿರುತ್ತದೆ. ಆದರೆ ಸಾಮುದಾಯಿಕ ಹರಡುವಿಕೆ ಎಂಬ ಮೂರನೇ ಹಂತದಲ್ಲಿ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ಈ ಹಂತದಲ್ಲಿ ವಿದೇಶಕ್ಕೆ ಹೋಗದಿರುವ ವ್ಯಕ್ತಿಗಳು ಕೂಡ ಸೋಂಕಿಗೆ ಒಳಗಾಗುತ್ತಾರೆ. ಹಾಗೂ ತಮಗೆ ಎಲ್ಲಿ ಸೋಂಕು ತಗುಲಿತು ಎಂಬುದನ್ನು ಗುರುತಿಸಲು ಜನರು ವಿಲರಾಗುತ್ತಾರೆ ಎಂದು ವಿವರಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
