ಕೊಲ್ಲಂ:ಜಗತ್ತಿಗೆ ಜಗತ್ತೇ ಕರೊನಾ ವೈರಸ್​ನಿಂದ ತಲ್ಲಣಗೊಂಡಿದ್ದು, ಜನ ಜೀವನ ಹದ ತಪ್ಪಿದೆ. ಆರ್ಥಿಕ ಸಂಕಷ್ಟ, ಆರೋಗ್ಯ ಸಂಕಷ್ಟಗಳ ನಡುವೆಯೇ, ಚುನಾವಣೆಗಳು ಕೂಡ ನಡೆದಿದೆ. ಇದೇ ರೀತಿ, ಕೇರಳದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಮೀಪದಲ್ಲಿದ್ದು, ಕೊಲ್ಲಂ ಕಾರ್ಪೊರೇಷನ್ ಚುನಾವಣೆಯಲ್ಲಿ ಮದಿಲಿಲ್ ವಾರ್ಡ್​ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವುದ ‘ಕೊರೊನಾ’ !
ಕೊರೊನಾ ಹೆಸರಿನ ಹಿನ್ನೆಲೆ
ಥಾಮಸ್​ ಫ್ರಾನ್ಸಿಸ್ ಎಂಬುವವರ ಅವಳಿ ಮಕ್ಕಳ ಪೈಕಿ ಒಬ್ಬಾಕೆ ಈ ಕೊರೊನಾ. ಇನ್ನೊಬ್ಬ ಸಹೋದರ- ಹೆಸರು ಕೋರಲ್​. ನಿಘಂಟು ಪೂರ್ತಿ ಹುಡುಕಿ ತೆಗೆದು ಆಯ್ಕೆ ಮಾಡಿದ ಹೆಸರುಗಳಿವು. ಮುಂದೊಂದು ದಿನ ಈ ಹೆಸರಿನ ವೈರಸ್ ಸೋಂಕು ತಗುಲಬಹುದೆಂಬ ನಿರೀಕ್ಷೆ ನಮಗಾರಿಗೂ ಇರಲಿಲ್ಲ. ಶಾಲಾ ದಿನಗಳಲ್ಲೂ ಹೆಸರಿನ ಕಾರಣಕ್ಕೆ ಮುಜುಗರ ಅನುಭವಿಸಿದ್ದೇನೆ ಎಂದು ಕೊರೊನಾ ಹೇಳಿಕೊಂಡಿದ್ದಾರೆ.
ನನ್ನ ಹೆಸರು ಕೊರೊನಾ. ನಾನು ಬಿಜೆಪಿ ಅಭ್ಯರ್ಥಿಯಾಗಿದ್ದು ನಿಮ್ಮ ಮತ ನನಗೆ ನೀಡಿ ಗೆಲ್ಲಿಸಿ ಕಳುಹಿಸಿ. ನಿಮ್ಮ ಜೊತೆಗಿದ್ದು ಕೆಲಸ ಮಾಡುವೆ ಎನ್ನುತ್ತ ಮದಿಲಿಲ್ ವಾರ್ಡಿನಲ್ಲಿ ಪ್ರತಿ ಮನೆಗೂ ಭೇಟಿ ನೀಡುತ್ತಿದ್ದಾರೆ 24 ವರ್ಷದ ಯುವತಿ ಕೊರೊನಾ ಥಾಮಸ್​. ಪ್ರತಿ ಮನೆಯವರಿಗೂ ಸ್ಯಾನಿಟೈಸರ್, ಮಾಸ್ಕ್​ ಮತ್ತು ಗ್ಲೌಸ್ ನೀಡುತ್ತ ನಗುಮೊಗದಿಂದಲೇ ಮತಯಾಚಿಸುತ್ತ ಗಮನಸೆಳೆದಿದ್ದಾರೆ. ಮುಂದಿನ ತಿಂಗಳು ಕೊಲ್ಲಂ ಕಾರ್ಪೊರೇಷನ್ ಚುನಾವಣೆ ಇದ್ದು, ಪೂರ್ವ ತಯಾರಿ ಜೋರಾಗಿ ನಡೆದಿದೆ.
ಇದನ್ನೂ ಓದಿ:ಸೆನ್ಸೆಕ್ಸ್ 250 ಪಾಯಿಂಟ್ ಜಂಪ್​, ನಿಫ್ಟಿ 12,800ರ ಮೇಲಕ್ಕೆ..
ನನ್ನ ಹೆಸರು ವಿಚಿತ್ರವಾಗಿರುವ ಕಾರಣ ಎಲ್ಲರೂ ಒಮ್ಮೆ ದಂಗಾದವರಂತೆ ನೋಡಿದರೂ, ಬಳಿಕ ಪ್ರೀತಿಯಿಂದ ಮಾತನಾಡಿಸಿದ್ದಾರೆ. ಇದು ನನಗೆ ಪ್ಲಸ್ ಪಾಯಿಂಟ್ ಆಗಬಹುದು. ಕರೊನಾ ಸೋಂಕು ಆರಂಭವಾದ ದಿನಗಳಲ್ಲಿ ಕಿಲ್ ಕರೊನಾ, ಗೋ ಕರೊನಾ ಸ್ಲೋಗನ್​ಗಳು ತುಂಬಾ ಕಿರಿಕಿರಿ ಉಂಟುಮಾಡಿದವು. ಅನೇಕರು ನನ್ನ ಹೆಸರು ಹಿಡಿದು ಅವಮಾನ ಮಾಡಿದರು. ಎಲ್ಲವನ್ನು ಸಹಿಸಿಕೊಂಡೆ. ಈಗ ಜನ ನನ್ನನ್ನು ಬಹುಬೇಗನೆ ಗುರುತಿಸುತ್ತಾರೆ ಎಂದು ಕರೊನಾ ಥಾಮಸ್ ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ:Web Exclusive|ಟಿವಿ ಕೊರಗು ನೀಗಿಸಿದ ಶಾಲೆ – ಸಂವೇದಾ ಇ-ಕ್ಲಾಸ್​ನಿಂದ ವಂಚಿತರಾಗಲ್ಲ ವಿದ್ಯಾರ್ಥಿಗಳು
ಬಿಜೆಪಿಯಲ್ಲಿ ಪತಿ ಜಿನು ಸಕ್ರಿಯ ಕಾರ್ಯಕರ್ತರಾಗಿದ್ದು, ಚುನಾವಣಾ ಕಣದಲ್ಲಿ ನೆರವಾಗುತ್ತಿದ್ದಾರೆ. ನನಗೂ ಕರೊನಾ ವೈರಸ್ ಸೋಂಕು ತಗುಲಿತ್ತು. ಅದೇ ಅವಧಿಯಲ್ಲಿ ಮಗುವಿಗೂ ಜನ್ಮವಿತ್ತಿದ್ದೇನೆ. ಸೋಂಕು ತಗುಲಿದ್ದಾಗ ಎದೆ ಭಾರ, ಉಸಿರಾಟದ ತೊಂದರೆ ಅನುಭವಿಸಿದ್ದೇನೆ. ಈಗ ಸಂಪೂರ್ಣ ಗುಣಮುಖಳಾಗಿರುವೆ. ಚುನಾವಣೆ ಎದುರಿಸಿ ಜನಪ್ರತಿನಿಧಿಯಾಗಿ ಕೆಲಸ ಮಾಡುವ ಆಸೆಯನ್ನು ಮತದಾರರು ಈಡೇರಿಸುವ ನಿರೀಕ್ಷೆ ಇದೆ ಎಂದು ಕೊರೊನಾ ಥಾಮಸ್ ಹೇಳಿದ್ದಾರೆ.(ಏಜೆನ್ಸೀಸ್​)
ಕಾಂಗ್ರೆಸ್​ ಹೊಸ ಅಧ್ಯಕ್ಷರ ಆಯ್ಕೆಗೆ ಡಿಜಿಟಲ್ ಸ್ಪರ್ಶ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
