ನವದೆಹಲಿ:ದೇಶದ ರಾಜಧಾನಿ ದೆಹಲಿಯಲ್ಲಿ ಕರೊನಾ ಮೂರನೇ ಅಲೆ ಉತ್ತುಂಗ ಮಟ್ಟದಲ್ಲಿದೆ. ಶೀಘ್ರದಲ್ಲೇ ಹೊಸ ಸೋಂಕಿತರ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯನ್ನು ಇದು ಸೂಚಿಸುತ್ತದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಹೇಳಿದ್ದಾರೆ. ಕರೊನಾದ ಮೊದಲ ಅಲೆಯಲ್ಲಿ ಜೂನ್ 23ರಂದು 3,947 ಪ್ರಕರಣ ದಾಖಲಾಗಿತ್ತು. ಎರಡನೇ ಅಲೆ ವೇಳೆ ಸೆಪ್ಟೆಂಬರ್ 17ರಂದು 4,473 ಪ್ರಕರಣ ವರದಿಯಾಗಿತ್ತು. ಈಗ ಮೂರನೇ ಅಲೆ ಆರಂಭವಾಗಲಿದ್ದು, ಸದ್ಯ ಪ್ರತಿದಿನ 7 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇನ್ನು ಕೆಲ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆ ಇದೆ. ಇತ್ತೀಚೆಗೆ ಪ್ರತಿದಿನದ ಪ್ರಕರಣಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡು ಬರುತ್ತಿದೆ ಎಂದು ಸತ್ಯೇಂದರ್ ಜೈನ್ ಹೇಳಿದ್ದಾರೆ.
ಗುಣಮುಖ ಪ್ರಮಾಣ ಏರಿಕೆ:ಕರೊನಾ ಸೋಂಕಿತರ ಗುಣಮುಖ ಪ್ರಮಾಣ ನಿರಂತರವಾಗಿ ಏರಿಕೆ ಕಾಣುತ್ತಿರುವುದರಿಂದ ಸಕ್ರಿಯ ಪ್ರಕರಣಗಳಲ್ಲಿ ಗಣನೀಯ ಕುಸಿತ ಕಂಡು ಬರುತ್ತಿದೆ. ಹೊಸ ಪ್ರಕರಣಗಳಿಗಿಂತ ಗುಣಮುಖರ ಸಂಖ್ಯೆ ಸತತ 37ನೇ ದಿನವಾದ ಶನಿವಾರವೂ ಏರಿಕೆಯಲ್ಲೇ ಮುಂದುವರಿದಿದೆ. ಒಟ್ಟು ಸೋಂಕು ಪ್ರಕರಣಗಳಲ್ಲಿ ಸದ್ಯ ಶೇಕಡ 6.03ರಷ್ಟು ಮಾತ್ರ ಸಕ್ರಿಯ ಪ್ರಕರಣಗಳಿವೆ. ಅಂದರೆ ಈವರೆಗೆ 85.10 ಲಕ್ಷ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 5.13 ಲಕ್ಷ ಸಕ್ರಿಯ ಪ್ರಕರಣಗಳಿವೆ. ಈವರೆಗೆ ಒಟ್ಟು 78.68 ಲಕ್ಷ ಸೋಂಕಿತರು ಗುಣಮುಖರಾಗಿದ್ದು, 1.26 ಲಕ್ಷ ಮಂದಿ ಕರೊನಾಗೆ ಬಲಿಯಾಗಿದ್ದಾರೆ. ಶನಿವಾರ ಹೊಸದಾಗಿ 46 ಸಾವಿರ ಪ್ರಕರಣಗಳು ವರದಿಯಾಗಿದ್ದು, ಇದೇ ವೇಳೆ 48 ಸಾವಿರ ರೋಗಿಗಳು ಗುಣಮುಖರಾಗಿದ್ದಾರೆ. ಸದ್ಯ ಪ್ರತಿದಿನ ಮೃತಪಡುತ್ತಿರುವವರ ಸಂಖ್ಯೆ ಸರಾಸರಿ 500ಕ್ಕೆ ಇಳಿಕೆಯಾಗಿದೆ.
ಮಹಾರಾಷ್ಟ್ರದಲ್ಲಿ ಪೂಜಾ ಸ್ಥಳಗಳು ಶೀಘ್ರ ಆರಂಭ:ಲಾಕ್​ಡೌನ್​ನಿಂದಾಗಿ ಮಹಾರಾಷ್ಟ್ರದಲ್ಲಿ ಕಳೆದ ಮಾರ್ಚ್ ತಿಂಗಳಿನಿಂದಲೂ ಬಾಗಿಲು ಮುಚ್ಚಿರುವ ದೇವಸ್ಥಾನಗಳು ಹಾಗೂ ಇತರ ಎಲ್ಲ ಧಾರ್ವಿುಕ ಪೂಜಾ ಸ್ಥಳಗಳನ್ನು ಶೀಘ್ರದಲ್ಲೇ ತೆರೆಯಲಾಗುತ್ತದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ದೀಪಾವಳಿ ಹಬ್ಬದ ಬಳಿಕ ಈ ಕುರಿತು ಹೊಸ ನಿಯಮಗಳನ್ನು ಬಿಡುಗಡೆ ಮಾಡಲಾಗುತ್ತದೆ. ವಯಸ್ಸಾದವರು ದೇವಾಲಯಗಳಿಗೆ ತೆರಳುವುದರಿಂದ ಅವರು ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚು. ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕಿದೆ. ಓರ್ವ ಸೋಂಕಿತ ವ್ಯಕ್ತಿ ಮಾಸ್ಕ್ ಧರಿಸದೇ ಜನಸಂದಣಿಯಲ್ಲಿ ಓಡಾಡಿದರೆ ಸುಮಾರು 400 ಜನರಿಗೆ ಸೋಂಕು ತಗುಲಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + four =
Remember me
