ನವದೆಹಲಿ:ಭಾರತದಲ್ಲಿ 2021ರ ಆರಂಭದಲ್ಲಿ ಒಂದಕ್ಕಿಂತ ಹೆಚ್ಚು ಮೂಲಗಳಿಂದ ಕರೊನಾ ಔಷಧ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ. ನಾಲ್ಕು ಔಷಧಗಳು ಕ್ಲಿನಿಕಲ್ ಟ್ರಯಲ್​ನ ಉತ್ತಮ ಹಂತದಲ್ಲಿದ್ದು, ಒಂದಕ್ಕಿಂತ ಹೆಚ್ಚು ಔಷಧ ಯಶಸ್ವಿಯಾಗುವ ಭರವಸೆಯನ್ನು ಸಚಿವರು ನೀಡಿದ್ದಾರೆ.
ಔಷಧ ವಿತರಣೆಯಲ್ಲಿ ಮೊದಲ ಆದ್ಯತೆ ಯಾರಿಗೆ ನೀಡಬೇಕು ಎನ್ನುವುದರ ಬಗ್ಗೆ ತಜ್ಞರು ಚರ್ಚೆ ನಡೆಸುತ್ತಿದ್ದಾರೆ. ಸೂಕ್ತ ವ್ಯವಸ್ಥೆಗಳೊಂದಿಗೆ ಮುಂದಿನ ವರ್ಷಾರಂಭಕ್ಕೆ ಔಷಧವನ್ನು ಹೊರತರುವ ಭರವಸೆಯಿದೆ ಎಂದು ಅವರು ಹೇಳಿದ್ದಾರೆ.
ದೇಶದಲ್ಲಿ ಸೋಮವಾರ 55 ಸಾವಿರ ಸೋಂಕಿತರು ಪತ್ತೆಯಾಗಿದ್ದಾರೆ. ಎರಡು ತಿಂಗಳ ನಂತರ ಏಕದಿನದ ಪ್ರಕರಣದಲ್ಲಿ ಇದು ಅತ್ಯಂತ ಕನಿಷ್ಠ ದಾಖಲೆಯಾಗಿದೆ. ಕಳೆದ 24 ತಾಸಿನಲ್ಲಿ 706 ಸೋಂಕಿತರು ಸಾವನ್ನಪ್ಪಿದ್ದಾರೆ. ಜುಲೈ 27ಕ್ಕೆ 636 ಜನರ ಸಾವಿನ ನಂತರ ಇದು ಅತ್ಯಂತ ಕನಿಷ್ಠ ದಾಖಲೆಯಾಗಿದೆ. 24 ಗಂಟೆಗಳಲ್ಲಿ 77,700 ಸೋಂಕಿತರು ಗುಣಮುಖರಾಗಿದ್ದು, ಚೇರಿಸಿಕೊಂಡವರ ಸಂಖ್ಯೆ 62.27 ಲಕ್ಷ ದಾಟಿದೆ. 8.38 ಲಕ್ಷ ಸಕ್ರಿಯ ಪ್ರಕರಣಗಳು ಬಾಕಿಯಿವೆ. ಒಟ್ಟಾರೆ ಸೋಂಕಿನ ಸಂಖ್ಯೆ 71.75 ಲಕ್ಷ ಮೀರಿದ್ದು, ಮೃತರ ಸಂಖ್ಯೆ 1.09 ಲಕ್ಷಕ್ಕೂ ಅಧಿಕವಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಒಂದೇ ದಿನದಲ್ಲಿ 25 ಸಾವಿರದಷ್ಟು ಪ್ರಕರಣ ಪತ್ತೆಯಾಗುತ್ತಿದ್ದ ಮಹಾರಾಷ್ಟ್ರದಲ್ಲಿ ಸೋಮವಾರ ಕೇವಲ 7 ಸಾವಿರ ಪ್ರಕರಣಗಳು ದೃಢವಾಗಿವೆ. ಆಂಧ್ರ ಪ್ರದೇಶ, ತಮಿಳುನಾಡಿನಲ್ಲೂ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಆದರೆ, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿದೆ.ಇದನ್ನೂ ಓದಿ:ನಾವು ನಿಮ್ಮಪ್ಪನ ಮನೆ ಆಸ್ತಿ ಕೇಳಿಲ್ಲ: ಸ್ವಾಮೀಜಿ ಹೀಗೆ ಹರಿಹಾಯ್ದಿದ್ದು ಯಾರ ಮೇಲೆ?
ಕರೊನಾ ಸೋಂಕಿಗೆ ಅಮೆರಿಕದ ಜಾನ್ಸನ್ ಆಂಡ್ ಜಾನ್ಸನ್ ಸಂಸ್ಥೆ ತಯಾರಿಸಿರುವ ಔಷಧದ ಕ್ಲಿನಿಕಲ್ ಪರೀಕ್ಷೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪ್ರಯೋಗಕ್ಕೆ ಒಳಗಾದವರ ಪೈಕಿ ಓರ್ವ ಅಸ್ವಸ್ಥನಾದ ಹಿನ್ನೆಲೆಯಲ್ಲಿ ಪ್ರಯೋಗ ಸ್ಥಗಿತಗೊಳಿಸಿರುವುದಾಗಿ ಸಂಸ್ಥೆ ಹೇಳಿದೆ. ಮೊದಲನೇ ಮತ್ತು ಎರಡನೇ ಹಂತದ ಪ್ರಯೋಗದಲ್ಲಿ ಔಷಧವು ಉತ್ತಮ ಫಲಿತಾಂಶ ನೀಡಿತ್ತು.
ಸೋಂಕಿಗೆ ಬಲಿಯಾಗಿರá-ವವರಲ್ಲಿ ಶೇ. 47 ಜನರು 60 ವರ್ಷ್ಕತ ಕೆಳಗಿನವರು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸಾವಿನಲ್ಲಿ ಪುರುಷರು ಶೇ. 70, ಮಹಿಳೆಯರು ಶೇ. 30 ಪಾಲು ಹೊಂದಿದ್ದಾರೆ. ಮೃತರಾದವರಲ್ಲಿ ಶೇ. 53 ಜನರು 60 ವರ್ಷ ಮೇಲ್ಪಟ್ಟವರು, ಶೇ. 35 ಜನರು 45ರಿಂದ 60 ವರ್ಷದವರು ಇದ್ದಾರೆ.
ಧಾರ್ವಿುಕ ಸ್ಥಳಗಳನ್ನು ಇನ್ನೂ ತೆರೆಯದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ನಡುವೆ ಪತ್ರದ ಮೂಲಕ ಜಟಾಪಟಿ ನಡೆದಿದೆ. ‘ಧಾರ್ವಿುಕ ಸ್ಥಳಗಳನ್ನು ತೆರೆಯದಂತೆ ಯಾವುದಾದರೂ ದೈವಿಕ ಶಕ್ತಿ ನಿಮಗೆ ಮುನ್ಸೂಚನೆ ನೀಡುತ್ತಿದೆಯೋ ಅಥವಾ ಏಕಾಏಕಿ ನೀವು ಜಾತ್ಯತೀತರಾಗಿ ಬದಲಾಗಿದ್ದೀರೋ’ ಎಂದು ರಾಜ್ಯಪಾಲರು ಠಾಕ್ರೆಗೆ ಪತ್ರ ಬರೆದಿದ್ದರು. ಇದಕ್ಕೆ ಉತ್ತರಿಸಿರುವ ಉದ್ಧವ್ ಠಾಕ್ರೆ, ‘ನನಗೆ ಹಿಂದುತ್ವದ ಬಗ್ಗೆ ನಿಮ್ಮಿಂದ ಪ್ರಮಾಣ ಪತ್ರ ಬೇಕಾಗಿಲ್ಲ’ ಎಂದು ಹೇಳಿದ್ದಾರೆ.ಇದನ್ನೂ ಓದಿ:‘ಆರ್​ಆರ್​ಆರ್​’ ಹಕ್ಕುಗಳಿಗೆ ಸ್ಟಾರ್​ ನೆಟ್​ವರ್ಕ್​ ಕೊಟ್ಟಿದ್ದೆಷ್ಟು? ಕೇಳಿದ್ರೆ ಬೆಚ್ಚಿಬೀಳ್ತೀರಾ …
ಬ್ರಿಟನ್​ನ ವಿಜ್ಞಾನಿಗಳು ಔಷಧ ಸಿದ್ಧಪಡಿಸುವ ಸಲುವಾಗಿ ಆರೋಗ್ಯವಂತ ಜನರಿಗೆ ಕರೊನಾ ಸೋಂಕನ್ನು ಇಂಜೆಕ್ಟ್ ಮಾಡುವ ಆಲೋಚನೆ ನಡೆಸಿದ್ದಾರೆ. ಕರೊನಾ ಸೋಂಕಿನ ಪ್ರಮಾಣ ಕಡಿಮೆಯಾದರೆ ಪರೀಕ್ಷೆ ಕಷ್ಟವಾಗುತ್ತದೆ. ಸೋಂಕು ಬರುವವರೆಗೆ ಕಾದು, ನಂತರ ಪರೀಕ್ಷೆ ನಡೆಸುವುದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಸೋಂಕನ್ನು ಇಂಜೆಕ್ಟ್ ಮಾಡಲಾಗುವುದು. ಇದಕ್ಕೆ ಸಾಕಷ್ಟು ಜನರು ಸಿದ್ಧವಾಗಿದ್ದಾರೆ ಎನ್ನಲಾಗಿದೆ.
ಡೆಂಘಿ, ಚಿಕನ್​ಗುನ್ಯಾ, ಎಚ್1ಎನ್1, ಮಲೇರಿಯಾದಂತಹ ಕಾಯಿಲೆಗಳನ್ನು ಕರೊನಾ ಜತೆಯಲ್ಲಿ ಹೇಗೆ ನಿಯಂತ್ರಿಸಬೇಕು ಎನ್ನುವುದಕ್ಕೆ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಬೇರೆ ಕಾಯಿಲೆಗಳ ಪತ್ತೆಗೆ ಮಾಡಿಸಬೇಕಾದ ಪರೀಕ್ಷೆ, ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮ, ರೋಗ ಲಕ್ಷಣಗಳ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೆಬ್​ಸೈಟ್ ಞಟಜ್ಛಡಿ.ಜಟಡ.ಜ್ಞಿ ನಲ್ಲಿ ಮಾಹಿತಿ ಲಭ್ಯವಿದೆ.
ಎರಡು ವರ್ಷ ವಿಚಾರಣೆ ಬಳಿಕ ‘ಇದು ನಮ್ಮ ವ್ಯಾಪ್ತಿಗೆ ಬರಲ್ಲ’ ಎಂದ ಕೋರ್ಟ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
