ವಾಷಿಂಗ್ಟನ್‌:ಕರೊನಾ ವೈರಸ್‌ ಈ ಬಿಕ್ಕಟ್ಟಿನ ಸ್ಥಿತಿಯಲ್ಲಿಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾಡುತ್ತಿರುವ ಕಿತಾಪತಿಗಳು, ಹೇಳುತ್ತಿರುವ ಮಾತುಗಳು, ನಡೆದುಕೊಳ್ಳುತ್ತಿರುವ ರೀತಿಗಳು ಬೇರೆ ದೇಶಗಳ ತಲೆಕೆಡಿಸುತ್ತಿರುವುದಂತೂ ನಿಜ.
ಇಂಥ ಸಮಯದಲ್ಲಿ ಇಡೀ ವಿಶ್ವವೇ ಕಂಗಾಲಾಗುವಂಥ ಹೇಳಿಕೆಯನ್ನು ಟ್ರಂಪ್‌ ನೀಡಿದ್ದಾರೆ. ಅದೇನೆಂದರೆ ಕರೊನಾ ವೈರಸ್‌ ಚಿಕಿತ್ಸೆಗೆಂದು ಸದ್ಯ ಉಪಯೋಗಿಸಲಾಗುತ್ತಿರುವ ಔಷಧ ’ರೆಮೆಡೆಸಿವಿರ್’ ಅನ್ನು ಸಂಪೂರ್ಣವಾಗಿ ಅಮೆರಿಕವೇ ಕೊಂಡುಕೊಳ್ಳಲಿದೆ ಎಂಬ ಹೇಳಿಕೆ ನೀಡಿದ್ದಾರೆ. ಇಡೀ ವಿಶ್ವದಲ್ಲಿ ಇರುವ ಈ ಔಷಧವನ್ನು ತಾವು ಖರೀದಿ ಮಾಡಿರುವುದಾಗಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯನ್ನೂ ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ ಬಿಡುಗಡೆ ಮಾಡಿದೆ. ಈ ಕ್ರಮಕ್ಕೆ ಒಂದು ವೇಳೆ ಟ್ರಂಪ್‌ ಮುಂದಾಗಿದ್ದೇ ಹೌದಾದರೆ ಮುಂದೆ ಕನಿಷ್ಠ ಮೂರು ತಿಂಗಳು ಇಡೀ ವಿಶ್ವಕ್ಕೆ ಕರೊನಾ ಔಷಧ ಇಲ್ಲದಂತಾಗುತ್ತದೆ!
ಇದನ್ನೂ ಓದಿ:ಅಪಾಯದಲ್ಲಿ 96,321 ಮಂದಿ; ಆರೋಗ್ಯ ಇಲಾಖೆ ಸಾರ್ವತ್ರಿಕ ಸಮೀಕ್ಷೆ; 232 ಮಂದಿಗೆ ಕರೊನಾ ಸೋಂಕಿನ ಲಕ್ಷಣ
ಮುಂದಿನ ಸೆಪ್ಟೆಂಬರ್ ವರೆಗೆ ಅಮೆರಿಕದ ಆಸ್ಪತ್ರೆಗಳಿಗೆ 5 ಲಕ್ಷಕ್ಕೂ ಅಧಿಕ ’ರೆಮೆಡೆಸಿವಿರ್’ ತರಿಸಲು ಚಿಂತನೆ ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಅಮೆರಿಕದಲ್ಲಿ ಸದ್ಯ 25 ಲಕ್ಷದ 73 ಸಾವಿರದ 393 ಕೋವಿಡ್ -19 ಪ್ರಕರಣಗಳು ಪತ್ತೆಯಾಗಿವೆ. ಈ ಸಂಖ್ಯೆ ಇನ್ನಷ್ಟು ಉಲ್ಬಣಗೊಳ್ಳಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿರುವ ಕಾರಣ ತಾವು ಜಾಗೃತೆಯಿಂದ ಇರಬೇಕು ಎನ್ನುವ ಹಿನ್ನೆಲೆಯಲ್ಲಿ ಈ ಮುಂಜಾಗರೂಕತಾ ಕ್ರಮ ತೆಗೆದುಕೊಳ್ಳುವುದಾಗಿ ಟ್ರಂಪ್‌ ಹೇಳಿದ್ದು, ಬೇರೆ ದೇಶಗಳಿಗೆ ಏನೂ ಉಳಿಯದಂತೆ ಮಾಡಿದೆ!
ಕರೊನಾ ವೈರಸ್‌ಗೆ ಸದ್ಯ ಹಲವಾರು ಪ್ರಯೋಗಗಳು ನಡೆಯುತ್ತಿದ್ದರೂ ರೆಮ್‌ಡೆಸಿವಿರ್ಗೆ ಹೆಚ್ಚಿನ ಬೇಡಿಕೆಯಿದೆ. ಆದ್ದರಿಂದ ಅಮೆರಿಕ ಇಂಥದ್ದೊಂದು ಕುಕೃತ್ಯಕ್ಕೆ ಕೈಹಾಕಿದೆ.
ತೀವ್ರ ಮೂತ್ರಪಿಂಡದ ದುರ್ಬಲತೆ ಇರುವವರು, ಪಿತ್ತಜನಕಾಂಗದ ಸಮಸ್ಯೆಯಿಂದ ಬಳಲುತ್ತಿರುವವರು, ಗರ್ಭಿಣಿ ಮತ್ತು ಬಾಳಂತಿಯರು, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಹೊರತುಪಡಿಸಿ ಉಳಿದವರಿಗೆ ಈ ಔಷಧ ಬಹಳಷ್ಟು ಉಪಕಾರಿಯಾಗಿದೆ ಎಂದಿದೆ ವರದಿ.(ಏಜೆನ್ಸೀಸ್‌)
ಲಾಕ್‌ಡೌನ್‌ನಿಂದ ಕಂಗೆಟ್ಟ ಅಪ್ಪನಿಗೆ ನೆರಳಾದ ಬಾಲಕಿಯೀಗ ಬಹುಭಾಷಾ ನಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + eighteen =
Remember me
