ಬೆಂಗಳೂರು:ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ ಕರೋನಾ ಸೋಂಕು ಮತ್ತೊಮ್ಮೆ ಆತಂಕ ಸೃಷ್ಟಿಸಿದೆ. ಅಮೆರಿಕಾ, ಚೀನಾ ಬಳಿಕ ಇದೀಗ ನಮ್ಮ ನೆರೆಯ ಕೇರಳದಲ್ಲಿ ಕರೋನಾ ರೂಪಾಂತರಿ ಜೆಎನ್​.1 ಪ್ರಕರಣ ಪತ್ತೆಯಾಗಿ ಭಾರತಕ್ಕೂ ಈ ಹೊಸ ರೂಪಾಂತರಿ ವೈರಸ್ ಕಾಲಿಟ್ಟಿದೆ. ಹೀಗಾಗಿಯೇ ಮತ್ತೊಮ್ಮೆ ಕರ್ನಾಟಕ ಸೇರಿದಂತೆ ಇಡೀ ದೇಶದ ಜನರಲ್ಲಿ ಭಯ ಮನೆಮಾಡಿದೆ.
ಇದನ್ನೂ ಓದಿ:ವಿದ್ವಂಸಕ ಕೃತ್ಯಕ್ಕೆ ಸಂಚು; ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಲ್ಲಿ ಎನ್​ಐಎ ದಾಳಿ: 8 ಮಂದಿ ಶಂಕಿತರು ವಶಕ್ಕೆ
ರೋಗ ಲಕ್ಷಣಗಳೇನು?:ವಿಪರೀತವಾದ ಶೀತ, ಗಂಟಲು ನೋವು, ಜ್ವರ, ಮೈಕೈ ಮತ್ತು ತಲೆನೋವು ಈ ಹೊಸ ರೂಪಾಂತರಿಯ ಪ್ರಮುಖ ರೋಗಲಕ್ಷಣಗಳು.
ಶರವೇಗದಲ್ಲಿ ಹರಡುತ್ತದೆ ವೈರಸ್​:ಸೋಂಕು ಶರವೇಗದಲ್ಲಿ ಹರಡುವುದರಿಂದ ಕಡ್ಡಾಯವಾಗಿ ಮಾಸ್ಕ್​ ಧರಿಸುವುದು, ಕೈಗಳನ್ನು ಶುಭ್ರಗೊಳಿಸುವುದು ಅತ್ಯಗತ್ಯವಾಗಿದೆ. ಇದರ ರೋಗಲಕ್ಷಣ ಸೌಮ್ಯವಾಗಿರುತ್ತದೆ ಎಂದು ಹೇಳಲಾಗುತ್ತಿದ್ದು, ಸೋಂಕು ಕಾಣಿಸಿಕೊಂಡರೆ ಆಸ್ಪತ್ರೆಗೆ ದಾಖಲಾಗಲೇಬೇಕೆಂದೇನೂ ಇಲ್ಲ. ಮನೆಯಲ್ಲೇ ಕ್ವಾರಂಟೈನ್ ಆಗಿ ರೋಗವನ್ನು ಕಡಿಮೆ ಮಾಡಿಕೊಳ್ಳಬಹುದು. ಹೀಗಾಗಿ, ಈ ಹೊಸ ರೂಪಾಂತರಿಯ ಲಕ್ಷಣಗಳು, ತಡೆಗಟ್ಟುವ ಕ್ರಮಗಳ ಬಗ್ಗೆ ತಿಳಿದುಕೊಳ್ಳಬೇಕಾದುದು ಅಗತ್ಯ.
ಯಾರೆಲ್ಲ ಮುನ್ನೆಚ್ಚರಿಕೆ ವಹಿಸಬೇಕು?:ಕರೋನಾ ರೂಪಾಂತರಿ ಜೆಎನ್​.1 ಹೆಚ್ಚಿನ ಟ್ರಾನ್ಸ್ಮಿಸಿಬಿಲಿಟಿ ಮತ್ತು ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುತ್ತದೆ. ಇದು ಹಿಂದಿನ ಒಮಿಕ್ರಾನ್ ತಳಿಯದ್ದೇ ರೋಗಲಕ್ಷಣಗಳನ್ನು ಹೊಂದಿದ್ದರೂ ದುರ್ಬಲ ಆರೋಗ್ಯ ಸ್ಥಿತಿ ಹೊಂದಿರುವವರು, ಗರ್ಭಿಣಿಯರು, ವೃದ್ಧರು ಮತ್ತು ಮಕ್ಕಳಿಗೆ ಈ ಸೋಂಕಿನ ಅಪಾಯ ಹೆಚ್ಚು.
ರೋಗ ತಡೆಗಟ್ಟುವುದು ಹೇಗೆ?:ಈ ರೋಗ ಹರಡದಂತೆ ಮಾಸ್ಕ್ ಧರಿಸುವುದು, ಗ್ಲೌಸ್​ಗಳನ್ನು ಹಾಕಿಕೊಳ್ಳುವುದು, ನೈರ್ಮಲ್ಯ ಕಾಪಾಡಿಕೊಳ್ಳುವುದು ಅಗತ್ಯ. ಹಾಗೇ, ಮುನ್ನೆಚ್ಚರಿಕಾ ಕ್ರಮವಾಗಿ ಬೂಸ್ಟರ್ ವ್ಯಾಕ್ಸಿನ್ ಹಾಕಿಸಿಕೊಳ್ಳಲು ತಜ್ಞರು ಸಲಹೆ ನೀಡಿದ್ದಾರೆ.
ಭಾರತದಲ್ಲಿ ಹೆಚ್ಚಿದ ಆತಂಕ:ಈ ವೈರಸ್​ ಮೊದಲ ಬಾರಿಗೆ ಅಮೆರಿಕಾದಲ್ಲಿ ಸೆಪ್ಟೆಂಬರ್‌ನಲ್ಲಿ ಪತ್ತೆ ಹಚ್ಚಲಾಗಿತ್ತು. ಬಳಿಕ ಚೀನಾದಲ್ಲಿ ಡಿಸೆಂಬರ್ 15ರಂದು 7 ಪ್ರಕರಣಗಳು ಕಂಡುಬಂದದವು. ಇದು ಈ ಸೋಂಕಿನ ಹರಡುವಿಕೆಯ ಬಗ್ಗೆ ಕಳವಳಕ್ಕೆ ಕಾರಣವಾಗಿದೆ. ಕರೋನಾ -19 ಮತ್ತು ಇನ್ಫ್ಲುಯೆನ್ಸದ ತಾಜಾ ಪ್ರಕರಣಗಳು ಅಮೆರಿಕದ ಆರೋಗ್ಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು ಎಚ್ಚರಿಸಿದೆ. ಇನ್ನು ಕರೋನಾ ರೂಪಾಂತರಿ ಜೆಎನ್​.1 ವೈರಸ್​ ಅಮೆರಿಕಾದ ಶೇ. 15ರಿಂದ ಶೇ. 29ರಷ್ಟು ಜನರಲ್ಲಿ ಪತ್ತೆಯಾಗಿದೆ. ಕರೋನಾ ರೂಪಾಂತರಿ ಜೆಎನ್​.1 ವೈರಸ್ ಡಿಸೆಂಬರ್ 8ರಂದು ಕೇರಳದ ತಿರುವನಂತಪುರಂ ಜಿಲ್ಲೆಯ 79 ವರ್ಷದ ಮಹಿಳೆಯಲ್ಲಿ ಕಂಡುಬಂದಿತ್ತು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 6 =
Remember me
