ಬೆಂಗಳೂರು:ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರಾನ್ ಎಂಬ ಹೊಸ ಪ್ರಭೇದ ಪತ್ತೆಯಾದ ಬೆನ್ನಲ್ಲೇ ವಿಶ್ವದ ಹಲವು ರಾಷ್ಟ್ರಗಳು ಬೆಚ್ಚಿವೆ. ಡೆಲ್ಟಾ ರೂಪಾಂತರಿಗಿಂತ ಹೆಚ್ಚು ಅಪಾಯಕಾರಿಯಾದ ಈ ಸೋಂಕು ತಡೆಗೆ ಅನೇಕ ದೇಶಗಳು ದಿಢೀರ್ ತುರ್ತು ಕ್ರಮ ಕೈಗೊಂಡಿವೆ. ಅಮೆರಿಕದ ನ್ಯೂಯಾರ್ಕ್​ನಲ್ಲಿ ಕರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಅತ್ತ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ದಿಢೀರ್ ಸಭೆಯಲ್ಲಿ ಆಗ್ನೇಯ ಏಷ್ಯಾ ರಾಷ್ಟ್ರಗಳ ಮೇಲೆ ನಿಗಾ ಇಡುವ ಮಹತ್ವದ ತೀರ್ಮಾನ ಹೊರಬಿದ್ದಿದೆ.
ಅಮೆರಿಕ ತತ್ತರ:ಕರೊನಾ ಸೋಂಕಿನ ಪ್ರಕರಣ ಹಾಗೂ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿರುವುದರಿಂದ ನ್ಯೂಯಾರ್ಕ್​ನಲ್ಲಿ ತುರ್ತು ಪರಿಸ್ಥಿತಿ ಹೇರಿ ರಾಜ್ಯಪಾಲೆ ಕ್ಯಾಥಿ ಹೊಚುಲ್ ಆದೇಶ ಹೊರಡಿಸಿದ್ದಾರೆ. ನ್ಯೂಯಾರ್ಕ್​ನಾದ್ಯಂತ 2022ರ ಜ.15ರವರೆಗೆ ಎಮರ್ಜೆನ್ಸಿ ಜಾರಿಯಲ್ಲಿರುತ್ತದೆ. ಕಳೆದ ವರ್ಷದ ಏಪ್ರಿಲ್​ನಿಂದೀಚೆಗೆ ಇದೇ ಮೊದಲ ಬಾರಿಗೆ ಸೋಂಕು ಹರಡುವ ದರ ಆತಂಕಕಾರಿ ರೀತಿಯಲ್ಲಿ ಏರುತ್ತಿದೆ. ಕಳೆದ ಒಂದು ತಿಂಗಳಿಂದ ಪ್ರತಿ ದಿನ ಸುಮಾರು 300ಕ್ಕೂ ಹೆಚ್ಚು ಕರೊನಾ ಸೋಂಕಿತರು ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ.
ಪ್ರಯಾಣಿಕರಲ್ಲಿ ವೈರಸ್:ದಕ್ಷಿಣ ಆಫ್ರಿಕಾದಿಂದ ಆಗಮಿಸಿದ ಅನೇಕ ವಿಮಾನ ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ ಎಂದು ನೆದರ್​ಲ್ಯಾಂಡ್ಸ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಅವರಲ್ಲಿ ಹೊಸ ಪ್ರಭೇದ ಒಮಿಕ್ರಾನ್ ಇದೆಯೇ ಎನ್ನುವುದನ್ನು ಪತ್ತೆ ಹಚ್ಚಲು ಪರೀಕ್ಷೆ ನಡೆಯುತ್ತಿವೆ. ಆಮ್್ಟರ್​ಡಾಂನ ಷಿಫೋಲ್ ಏರ್​ಪೋರ್ಟ್​ಗೆ 600 ಪ್ರಯಾಣಿಕರು ಶುಕ್ರವಾರ ಬಂದಿಳಿದಿದ್ದರು. ಹೊಸ ಪ್ರಭೇದ ಕುರಿತ ಆತಂಕದಿಂದಾಗಿ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದ್ದು, 85 ಜನರು ಕರೊನಾ ಪಾಸಿಟಿವ್ ಆಗಿರುವುದು ದೃಢಪಟ್ಟಿದೆ.
ವಿಮಾನ ಪ್ರಯಾಣ ನಿಷೇಧ:ಆಸ್ಟ್ರಿಯಾ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ನೆದರ್​ಲ್ಯಾಂಡ್, ಅಮೆರಿಕ ದಕ್ಷಿಣ ಆಫ್ರಿಕಾ ಮೇಲೆ ಪ್ರಯಾಣ ನಿಷೇಧ ಹೇರಿದ್ದರೆ, ಆಫ್ರಿಕಾ ಖಂಡದ 6 ದೇಶಗಳ ವಿಮಾನಯಾನಕ್ಕೆ ಓಮಾನ್, ಥಾಯ್ಲೆಂಡ್ , ಶ್ರೀಲಂಕಾ ಸೇರಿ ಅನೇಕ ರಾಷ್ಟ್ರಗಳು ನಿರ್ಬಂಧ ಹೇರಿವೆ.
ಎಲ್ಲೆಲ್ಲಿ ಹೊಸ ಸೋಂಕು?:ದಕ್ಷಿಣ ಆಫ್ರಿಕಾ, ಬೋಟ್ಸ್​ವಾನಾ, ಜಿಂಬಾಬ್ವೆ, ನಮೀಬಿಯಾ, ಲೆಸೊಥೊ, ಇಸ್ವಾಟಿನಿಯಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ.
ಒಮಿಕ್ರಾನ್ ನಾಮಕರಣ:ದಕ್ಷಿಣ ಆಫ್ರಿಕಾದಲ್ಲಿ ಮೊದಲಿಗೆ ಪತ್ತೆಯಾಗಿ ಜಗತ್ತನ್ನು ಮತ್ತೆ ಆತಂಕದ ಅಲೆಗೆ ತಳ್ಳಿರುವ ಕರೊನಾ ವೈರಸ್​ನ ಹೊಸ ಪ್ರಭೇದ ಬಿ1.1.529ಕ್ಕೆ ‘ಒಮಿಕ್ರಾನ್’ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಹೆಸರಿಸಿದ್ದು ಇದು ‘ಅತ್ಯಂತ ವೇಗವಾಗಿ ಹರಡುವ’ ಆತಂಕಕಾರಿ (ವಿಒಐ) ರೂಪಾಂತರಿ ಎಂದು ವರ್ಗೀಕರಿಸಿದೆ. ವೈರಸ್ ಪ್ರಭೇದಗಳ ನಾಮಕರಣಕ್ಕೆ ಗ್ರೀಕ್ ಅಕ್ಷರಮಾಲೆಯನ್ನು ಬಳಸುವ ಪದ್ಧತಿಯಂತೆ, ಶುಕ್ರವಾರ ನಡೆದ ಸಭೆಯಲ್ಲಿ ಹೊಸ ಪ್ರಭೇದಕ್ಕೆ ‘ಒಮಿಕ್ರಾನ್’ ಎಂದು ಹೆಸರಿಡಲಾಗಿದೆ.
ದಕ್ಷಿಣ ಆಫ್ರಿಕಾ ಆಕ್ರೋಶ:ಹೊಸ ತಳಿ ಪ್ರಸರಣ ತಡೆಯುವ ಕಾರಣ ಹೇಳಿ ವಿಶ್ವ ರಾಷ್ಟ್ರಗಳು ಹೇರುತ್ತಿರುವ ಪ್ರಯಾಣ ನಿಷೇಧವನ್ನು ದಕ್ಷಿಣ ಆಫ್ರಿಕಾ ಟೀಕಿಸಿದೆ. ಇದು ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಳಿಗೆ ವಿರುದ್ಧವಾದದ್ದೆಂದು ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ಹೆಚ್ಚಾದ ಕರೊನಾ ಆತಂಕ; ಸಿಎಂ ಸಭೆಯಲ್ಲಿ ಹೊರಬಿತ್ತು ಹೊಸ ಗೈಡ್​​ಲೈನ್ಸ್​: ಇಲ್ಲಿದೆ ವಿವರ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 16 =
Remember me
