ಸಂಬಲ್ಪುರ್​ :ಐಸೋಲೇಷನ್​ನಲ್ಲಿದ್ದ ಕರೊನಾ ರೋಗಿಯೊಬ್ಬ ದಿಢೀರ್​ ಹಿಂಸೆಗೆ ಮುಂದಾಗಿ ತನ್ನ ಮೂರು ವರ್ಷದ ಮಗಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಒಡಿಶಾದ ಸಂಬಲ್ಪುರ ಜಿಲ್ಲೆಯಲ್ಲಿ ನಡೆದಿದೆ. ಪತ್ನಿ ಮತ್ತು ಇನ್ನು ಮೂವರು ಮಕ್ಕಳು ಕೂಡ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೌತುಕ್​ಬಹಲ್​ ಗ್ರಾಮದ 50 ವರ್ಷದ ಸುಖಾ ಓರಂಗೆ ಜೂನ್ 5 ರಂದು ಕೋವಿಡ್​ ಪಾಸಿಟಿವ್ ಬಂದಿದ್ದು, ಮನೆಯಲ್ಲೇ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದ. ಜೂನ್ 11 ರ ರಾತ್ರಿ ತನ್ನ ಪತ್ನಿ ಮತ್ತು ಮಕ್ಕಳು ಮಲಗಿದ್ದ ಕೋಣೆಗೆ ಬಂದ ಆತ ತೀಕ್ಷ್ಣವಾದ ಆಯುಧದಿಂದ ಮಗಳು ಸಾಲ್ಮಿಯ ಗಂಟಲು ಕೊಯ್ದಿದ್ದಾನೆ. ತಡೆಯಲು ಹೋದ ಹೆಂಡತಿ ಎತ್ವಾರಿಯ ಮೇಲೂ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ:ಡೇಟಿಂಗ್​ ಆ್ಯಪ್​ ಮೂಲಕ ಪುಸಲಾಯಿಸಿ ಕರೆದರು, ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್​ ಮಾಡಿದರು!
ಇತರ ಮೂವರು ಹೆಣ್ಣುಮಕ್ಕಳು, 12 ವರ್ಷದ ಮಗ ಎಲ್ಲರನ್ನೂ ಕರೆದುಕೊಂಡು ಹೆಂಡತಿಯು ಸಂಬಂಧಿಕರೊಬ್ಬರ ಮನೆಗೆ ಓಡಿಹೋಗಿ, ಪೊಲೀಸರಿಗೆ ವಿಷಯ ತಿಳಿಸಿದ್ದಾಳೆ. ಗೋಬಿಂದಪುರ ಪೊಲೀಸರು ಮನೆ ತಲುಪಿ ಪರಿಶೀಲಿಸಿದಾಗ, 3 ವರ್ಷದ ಮಗು ಸತ್ತಿದ್ದು, ಓರಂ ಕೂಡ ತನ್ನ ಕತ್ತು ಕುಯ್ದುಕೊಂಡು ಗಂಭೀರ ಸ್ಥಿತಿಯಲ್ಲಿರುವುದು ಕಂಡುಬಂದಿತು ಎನ್ನಲಾಗಿದೆ.
ಹಲ್ಲೆ ನಡೆಸಿದ ಓರಂ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಗಾಯಗೊಂಡಿರುವ ಕುಟುಂಬಸ್ಥರನ್ನು ಚಿಕಿತ್ಸೆಗಾಗಿ ದಾಖಲಿಸಿಕೊಳ್ಳಲಾಗಿದೆ. ಘಟನೆಗೆ ನಿರ್ದಿಷ್ಟ ಕಾರಣವೇನು ಎಂಬುದನ್ನು ತನಿಖೆ ನಡೆಸುತ್ತಿರುವ ಪೊಲೀಸರು, ಮೃತನು ಮಾನಸಿಕ ಒತ್ತಡ ಮತ್ತು ಖಿನ್ನತೆಗೆ ಒಳಗಾಗಿರಬಹುದೆಂದು ಊಹಿಸಿದ್ದಾರೆ.(ಏಜೆನ್ಸೀಸ್)
ಸರ್ಕಾರಿ ನಿಯಮ ಪಾಲಿಸದೆ ಕಾನೂನು ಸಂರಕ್ಷಣೆ ಕಳೆದುಕೊಂಡ ಟ್ವಿಟರ್!

ಪುಟ್ಟ ಬಾಲಕನ ಚಿಕಿತ್ಸೆಗೆ ಒದಗಿಬಂತು 16 ಕೋಟಿ ರೂ.ಗಳ ಚುಚ್ಚುಮದ್ದು

ಹೆಂಡತಿ ಇಲ್ಲದ ಸಮಯದಲ್ಲಿ ಮಗಳನ್ನು ರೇಪ್ ಮಾಡಿ ಗರ್ಭಿಣಿ ಮಾಡಿದ… ಆಸ್ಪತ್ರೆಯಲ್ಲಿ ಬಯಲಾಯಿತು ರಹಸ್ಯ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 5 =
Remember me
