ಮುಂಬೈ :ಕರೊನಾ ಸೋಂಕು ಹೆಚ್ಚುತ್ತಿದ್ದರೂ ಸುಖಾಸುಮ್ಮನೇ ಶಾಪಿಂಗ್​ಗೆಂದು ಮಾಲ್​ ಕಡೆ ಹೆಜ್ಜೆ ಹಾಕುವ ಜನರು ಇನ್ನು ಮುಂದೆ ಮತ್ತೊಮ್ಮೆ ಯೋಚಿಸಬೇಕಾಗುತ್ತದೆ. ಏಕೆಂದರೆ ಮುಂಬೈ ನಗರದಲ್ಲಿ ಮಾಲ್​ಗಳನ್ನು ಪ್ರವೇಶಿಸುವ ಜನರಿಗೆ ಕರೊನಾ ಪರೀಕ್ಷೆ ನಡೆಸಲು ನಗರ ಪಾಲಿಕೆಯ ಸಿಬ್ಬಂದಿ ಕಾದು ಕೂರಲಿದ್ದಾರೆ. ಅಷ್ಟೇ ಅಲ್ಲ, ಆ ಪರೀಕ್ಷೆಯ ವೆಚ್ಚವನ್ನು ಸಹ ಅಂತಹ ಜನರಿಂದಲೇ ಪಡೆಯಲಿದ್ದಾರೆ.
ಜನರು ಓಡಾಡುವುದನ್ನು ಕಡಿಮೆ ಮಾಡಲು ಮತ್ತು ಸೋಂಕು ಪತ್ತೆ ಕಾರ್ಯವನ್ನು ತ್ವರಿತಗೊಳಿಸಲು ಬೃಹನ್​ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಯು ಜನನಿಬಿಡ ಪ್ರದೇಶಗಳಲ್ಲಿ ರಾಂಡಮ್ ಆಗಿ ಕರೊನಾ ಪರೀಕ್ಷೆ ನಡೆಸುವ ನಿರ್ಧಾರ ತೆಗೆದುಕೊಂಡಿದೆ. ರೈಲು ನಿಲ್ದಾಣ, ಬಸ್ ಡಿಪೋ, ಗಲ್ಲಿ ಮಾರ್ಕೆಟ್, ಮಾಲ್​ ಮುಂತಾದೆಡೆ ಯಾವುದೇ ವ್ಯಕ್ತಿಯನ್ನು ನಿಲ್ಲಿಸಿ ಕರೊನಾ ಪರೀಕ್ಷೆಗೊಳಪಡಿಸುವ ಅಧಿಕಾರವನ್ನು ಪಾಲಿಕೆ ಸಿಬ್ಬಂದಿಗೆ ನೀಡಲಾಗಿದೆ. ರಾಪಿಡ್ ಆ್ಯಂಟಿಜನ್ ಟೆಸ್ಟಿಂಗ್ ಮೂಲಕ ನಡೆಸಲಾಗುವ ಈ ಪರೀಕ್ಷೆಗೆ ಜನರ ಅನುಮತಿ ಬೇಕಿಲ್ಲ. ಬಿಎಂಸಿ ಸಿಬ್ಬಂದಿ ಪರೀಕ್ಷೆ ಮಾಡಿಸಲು ಆಯ್ಕೆ ಮಾಡಿದಲ್ಲಿ, ಅದು ಕಡ್ಡಾಯವಾಗಿರುತ್ತದೆ.
ಇದನ್ನೂ ಓದಿ:ಮನೆ-ಸೈಟು ಮಾರಾಟದ ಮೋಸಕ್ಕೆ ಬ್ರೇಕ್! 100 ವಾರ್ಡ್‌ಗಳಲ್ಲಿ ಇ-ಆಸ್ತಿ ಸಾಫ್ಟ್​​ವೇರ್​​ ಜಾರಿ
ವಿಶೇಷವೆಂದರೆ, ಬೇರೆಲ್ಲಾ ಸ್ಥಳಗಳಲ್ಲಿ ಬಿಎಂಸಿ ನಡೆಸುವ ಈ ರಾಂಡಮ್ ಪರೀಕ್ಷೆ ಉಚಿತವಾಗಿ ನಡೆಯಲಿದೆ. ಆದರೆ, ಮಾಲ್​ಗಳಲ್ಲಿ ಮಾತ್ರ ಪರೀಕ್ಷೆಯ ವೆಚ್ಚವನ್ನು ಜನರೇ ಭರಿಸಬೇಕಾಗಿದೆ. ಮಾಲ್​ ಪ್ರವೇಶಿಸಿದ ಮೇಲೆ ಪಾಲಿಕೆ ಸಿಬ್ಬಂದಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದಲ್ಲಿ, ದುಡ್ಡು ಕೊಟ್ಟು ಕಡ್ಡಾಯವಾಗಿ ಪರೀಕ್ಷೆಗೊಳಪಡಬೇಕು. ಹೀಗಾಗಿ ಮಾಲ್​ಗೆ ಹೆಜ್ಜೆಯಿಡುವ ಮುನ್ನ ಜನರು ಚೆನ್ನಾಗಿ ಯೋಚಿಸುವುದಲ್ಲದೆ ತಮ್ಮ ಜೇಬನ್ನೂ ಮತ್ತಷ್ಟು ತುಂಬಿಸಿಕೊಂಡು ಹೋಗಬೇಕಾದೀತು.
ಪರೀಕ್ಷೆ ಮಾಡಿಸಿಕೊಳ್ಳಲು ನಿರಾಕರಿಸುವುದು ಇಲ್ಲವೇ ಹಣ ಭರಿಸದಿರುವುದಕ್ಕೂ ಅವಕಾಶವಿಲ್ಲ. ಏಕೆಂದರೆ ಅದು ಸಾಂಕ್ರಾಮಿಕ ಕಾಯ್ದೆ, 1897 ರ ಅಡಿಯಲ್ಲಿ ಅಪರಾಧವಾಗುತ್ತದೆ. ಅಂತಹವರ ವಿರುದ್ಧ ಬಿಎಂಸಿ ಕಾನೂನು ಕ್ರಮ ಕೈಗೊಳ್ಳಬಹುದು. ಈ ರೀತಿಯಾಗಿ ಮುಂಬೈನ 27 ಮಾಲ್​ಗಳಲ್ಲಿ ಒಟ್ಟು 10,800 ಪರೀಕ್ಷೆಗಳನ್ನು ಪ್ರತಿದಿನ ನಡೆಸಲು ಉದ್ದೇಶಿಸಲಾಗಿದೆ. ಪ್ರತಿ ಮಾಲ್​​ನಲ್ಲಿ 400 ಜನರ ಮೇಲೆ ಕಡ್ಡಾಯ ಕರೊನಾ ಪರೀಕ್ಷೆ ನಡೆಸುವ ಟಾರ್ಗೆಟ್​ಅನ್ನು ಬಿಎಂಸಿ ಸಿಬ್ಬಂದಿಗೆ ನೀಡಲಾಗಿದೆ.(ಏಜೆನ್ಸೀಸ್)
ಯಾರೀ ಮತ್ಸ್ಯಕನ್ಯೆ ? ಮತ್ತೊಮ್ಮೆ ನೋಡಿ…
ರೇಪ್ ಮಾಡಲು ಯತ್ನಿಸಿದವನ ಮರ್ಮಾಂಗವನ್ನೇ ತುಂಡರಿಸಿದ ಮಹಿಳೆ; ಬುಕ್ಕಾದವು ಎರಡು ಕೇಸು !
ಇಂದು ವರ್ಲ್ಡ್ ಓರಲ್ ಹೆಲ್ತ್ ಡೇ… ನಿಮ್ಮ ಬಾಯಿಯ ಬಗ್ಗೆ ಹುಷಾರು!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 5 =
Remember me
