ಬೆಂಗಳೂರು:ಜೆಡಿಎಸ್​ ವರಿಷ್ಠ ಎಚ್​.ಡಿ. ದೇವೇಗೌಡ ಮತ್ತು ಅವರ ಪತ್ನಿ ಚೆನ್ನಮ್ಮಗೆ ಕರೊನಾ ಸೋಂಕು ದೃಢಪಟ್ಟಿದ್ದು, ಮಣಿಪಾಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ದೇವೇಗೌಡರಿಗೆ ಕರೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಆರೋಗ್ಯ ವಿಚಾರಿಸಿದರು.
ಶೀಘ್ರ ಗುಣಮುಖರಾಗಿ ಎಂದು ಹಾರೈಸಿದ ಪ್ರಧಾನಿ ಮೋದಿ, ದೇಶದ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನೀವು ಇಚ್ಚಿಸಿದಲ್ಲಿ, ಅಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಮಾಜಿ ಪ್ರಧಾನಿ ಎಚ್​ಡಿಡಿ, ಬೆಂಗಳೂರಿನಲ್ಲೇ ಚಿಕಿತ್ಸೆ ಪಡೆಯುವುದಾಗಿ ತಿಳಿಸಿದರು. ಈ ಕುರಿತು ಸ್ವತಃ ದೇವೇಗೌಡರೇ ಟ್ವೀಟ್​ ಮೂಲಕ ಹಂಚಿಕೊಂಡಿದ್ದಾರೆ.ಇದನ್ನೂ ಓದಿರಿಸುಳ್ಳು‌ ದೂರಿಗೆ ನನ್ನಿಂದ ಹೆಂಡತಿ‌-ಮಕ್ಕಳು ದೂರವಾದರು: ಆರ್​. ಅಶೋಕ್​ ವಿರುದ್ಧ ಸಿಡಿ ಲೇಡಿ ವಕೀಲ ಜಗದೀಶ್​ ವಾಗ್ದಾಳಿ
ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರಿಗೆ ಕರೆ ಮಾಡಿ ಅವರ ಮತ್ತು ಅವರ ಧರ್ಮಪತ್ನಿಯ ಆರೋಗ್ಯದ ಬಗ್ಗೆ ವಿಚಾರಿಸಿದೆ. ಅವರು ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿದ್ದಾರೆ.
I am grateful to Prime Minister@narendramodifor calling and enquiring after my health. I am also deeply moved by his offer to get me treated in any hospital of my choice in any city. I assured him that I am being looked after well in Bangalore, but will keep him informed.
— H D Devegowda (@H_D_Devegowda)March 31, 2021

Spoke to former PM Shri@H_D_DevegowdaJi and enquired about his and his wife’s health. Praying for their quick recovery.
— Narendra Modi (@narendramodi)March 31, 2021

ವೈದ್ಯಕೀಯ ಮತ್ತು ಆರೋಗ್ಯ ಸಚಿವ ಡಾ‌. ಕೆ.ಸುಧಾಕರ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಅವರ ಧರ್ಮಪತ್ನಿಗೆ ಕರೊನಾ ಸೋಂಕು ದೃಢಪಟ್ಟಿರುವ ಸುದ್ದಿ ತಿಳಿಯಿತು. ವೈದ್ಯರೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಅವರ ಆರೋಗ್ಯದ ಬಗ್ಗೆ ಖುದ್ದಾಗಿ ಮಾಹಿತಿ ಪಡೆಯಲಿದ್ದೇನೆ. ಅವರು ಶೀಘ್ರವಾಗಿ ಗುಣಮುಖರಾಗುವಂತೆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ.
ನಾನು ನಂದಿ ಅಲ್ಲ, ಜಗದೀಶ! ನಾನು ಮೂರನೇ ಕಣ್ಣು ಬಿಟ್ರೆ ಭಸ್ಮ ಆಗ್ತೀರಿ: ಸಿಡಿ ಲೇಡಿ ವಕೀಲರ ಖಡಕ್​ ವಾರ್ನಿಂಗ್​ ಯಾರಿಗೆ?

ಮೂರು ಪುಟ್ಟ ಕಂದಮ್ಮಗಳ ಕಣ್ಣೆದುರಲ್ಲೇ ತಾಯಿ ದುರಂತ ಸಾವು! ‘ನನ್ನನ್ನು ಎತ್ತಿಕೊಳ್ಳಮ್ಮಾ…’ ಎಂದು ಶವದ ಮುಂದೆ ಕಣ್ಣೀರಿಟ್ಟ ಮಕ್ಕಳು

2005ರ ಚಾಮರಾಜಪೇಟೆ ಉಪಚುನಾವಣೆ ವೇಳೆ ‘ಮುಸ್ಲಿಂ ಅಭ್ಯರ್ಥಿ’ ಕಾಣೆಯಾಗಿದ್ದೇಕೆ? ಜಮೀರ್​ಗೆ ಎಚ್​ಡಿಕೆ ಟಾಂಗ್​

ಪತಿಯನ್ನ ಕೊಂದು ಹೋಮಕುಂಡದಲ್ಲಿ ಸುಟ್ಟಿದ್ದ ಪತ್ನಿ! ಬೇಲ್​ ಮೇಲೆ ಹೊರ ಬಂದವಳಿಂದ ಮತ್ತೊಂದು ನೀಚ ಕೃತ್ಯ

ಸುಳ್ಳು‌ ದೂರಿಗೆ ನನ್ನಿಂದ ಹೆಂಡತಿ‌-ಮಕ್ಕಳು ದೂರವಾದರು: ಆರ್​. ಅಶೋಕ್​ ವಿರುದ್ಧ ಸಿಡಿ ಲೇಡಿ ವಕೀಲ ಜಗದೀಶ್​ ವಾಗ್ದಾಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
