ಕೊಯಮತ್ತೂರು: ಕರೊನಾ ಹಾವಳಿಗೆ ಸಂಬಂಧಿಸಿದಂತೆ ಲಾಕ್‌ಡೌನ್‌ನಲ್ಲಿ ನಿರತರಾಗಿದ್ದ ಹಲವಾರು ಪೊಲೀಸರಿಗೆ ಮಾನವೀಯತೆ ದೃಷ್ಟಿಯಿಂದ ಆಹಾರದ ಪೊಟ್ಟಣಗಳನ್ನು ವಿತರಿಸಿದ್ದ 61 ವರ್ಷದ ವ್ಯಕ್ತಿಯೇ ಈಗ ಕರೊನಾ ಸೋಂಕು ಹೊಂದಿರುವುದು ದೃಢಪಟ್ಟಿದ್ದು, ಆರೋಗ್ಯ ಇಲಾಖೆಗೆ ಮತ್ತು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಸ್ಥಳೀಯ ರಾಜಕಾರಣಿಯೊಬ್ಬರಿಗೆ ಅತ್ಯಂತ ನಿಕಟವರ್ತಿಯಾಗಿರುವ ಈ ವ್ಯಕ್ತಿ ಮಾರ್ಚ್ 23ರಂದು ದೆಹಲಿ ಪ್ರವಾಸದಿಂದ ವಾಪಸ್ ಬಂದಿದ್ದ. ಈತನ ಜತೆ ದೆಹಲಿಯಿಂದ ರೈಲಿನಲ್ಲಿ ಬಂದಿದ್ದ ಕೆಲವು ಸಹಪ್ರಯಾಣಿಕರು ತಬ್ಲಿಘಿ ಜಮಾತ್ ಸಮಾವೇಶದಲ್ಲಿ ಭಾಗವಹಿಸಿದವರಾದ್ದರಿಂದ ಈತನಿಗೂ ಹೋಮ್ ಕ್ವಾರಂಟೈನ್‌ಗೆ ಸೂಚಿಸಲಾಗಿತ್ತು. ಆದರೆ ಈತ ಮನೆಯಲ್ಲಿ ಇರದೇ ಹೊರಗೆ ಮುಕ್ತವಾಗಿ ಓಡಾಡುತ್ತಿದ್ದ ಎನ್ನಲಾಗಿದೆ. ಈತನನ್ನು ಪುನಃ ಪರೀಕ್ಷೆಗೆ ಒಳಪಡಿಸಿದಾಗ ಕರೊನಾ ಪಾಸಿಟಿವ್ ಇರುವುದು ಏಪ್ರಿಲ್ 9ರಂದು ಬೆಳಕಿಗೆ ಬಂದಿದೆ.
ಇದರಿಂದಾಗಿ ಆರೋಗ್ಯ ಇಲಾಖೆ ತೀವ್ರವಾಗಿ ತಲೆ ಕೆಡಿಸಿಕೊಂಡಿದ್ದು, ಈತನ ಸಂಪರ್ಕಕ್ಕೆ ಬಂದ ಪೊಲೀಸರು ಮತ್ತು ಇತರರಿಗಾಗಿ ಹುಡುಕಾಡತೊಡಗಿದೆ. ‘‘ಈಗಾಗಲೇ ಕೆಲವರು ಸಿಕ್ಕಿದ್ದು ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ’’ ಎಂದು ಆರೋಗ್ಯ ಇಲಾಖೆ ಉಪನಿರ್ದೇಶಕ ಡಾ. ಜಿ. ರಮೇಶ್‌ಕುಮಾರ್ ತಿಳಿಸಿದ್ದಾರೆ.
ಲಾಕ್​ಡೌನ್​ನಲ್ಲಿ ಸಿಕ್ಕಿಕೊಂಡು ಕಾರಿನಲ್ಲೇ 21 ದಿನ ಕಳೆದ ಪುತ್ತೂರಿನ ಯುವಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
