ಐಜಾಲ್:ಸಚಿವರೆಂದರೆ ಹೇಗಿರಬೇಕು? ಎಸಿ ಕಾರಿನಲ್ಲೇ ಓಡಾಟ, ಕೈಗೊಂದು ಕಾಲಿಗೊಬ್ಬ ಆಳು.. ಇವೆಲ್ಲ ಸಾಮಾನ್ಯರ ಕಲ್ಪನೆ. ಆದರೆ ಅದಕ್ಕೆ ವಿರುದ್ಧವೆನ್ನುವಂತೆ ನಮ್ಮಲ್ಲಿ ಕೆಲ ಸಚಿವರಿದ್ದಾರೆ. ಸಚಿವರೊಬ್ಬರು ತಾವು ದಾಖಲಾಗಿದ್ದ ಆಸ್ಪತ್ರೆಯ ವಾರ್ಡ್​ ಅನ್ನು ತಾವೇ ಕ್ಲೀನ್​ ಮಾಡಿದ್ದು, ಅದರ ಫೋಟೋ ಇದೀಗ ವೈರಲ್​ ಆಗಿದೆ.
ಈ ರೀತಿಯ ಘಟನೆ ನಡೆದಿರುವುದು ಮಿಜೋರಾಂನಲ್ಲಿ. ಅಲ್ಲಿನ ಇಂಧನ ಸಚಿವ ಆರ್ ಲಾಲ್ಜಿರ್ಲಿಯಾನಾ ನಾವು ಹೇಳುತ್ತಿರುವ ವಿಶೇಷ ವ್ಯಕ್ತಿತ್ವದ ಸಚಿವರು. ಲಾಲ್ಜಿರ್ಲಿಯಾನಾ ಅವರಿಗೆ ಮೇ 11ರಂದು ಕರೊನಾ ಸೋಂಕು ದೃಢವಾಗಿತ್ತು. ಅವರೊಂದಿಗೆ ಅವರ ಹೆಂಡತಿ ಮತ್ತು ಮಗನಲ್ಲೂ ಸೋಂಕು ಪತ್ತೆಯಾಗಿತ್ತು. ಮನೆಯಲ್ಲೇ ಐಸೋಲೇಟ್​ ಆಗಿದ್ದ ಸಚಿವರ ಆಕ್ಸಿಜನ್​ ಲೆವೆಲ್​ ಕಡಿಮೆಯಾದ ಹಿನ್ನೆಲೆಯಲ್ಲಿ ಅವರನ್ನು ಜೋರಂ ಮೆಡಿಕಲ್​ ಕಾಲೇಜಿನಲ್ಲಿ ದಾಖಲಿಸಲಾಗಿದೆ.
ಸಚಿವರು ದಾಖಲಾಗಿದ್ದ ವಾರ್ಡ್​ನಲ್ಲಿ ಸ್ವಲ್ಪ ಕಸ, ಧೂಳು ಬಿದ್ದಿದ್ದಂತೆ. ಅದನ್ನು ಸ್ವಚ್ಛ ಮಾಡಲೆಂದು ನೆಲ ಒರೆಸುವ ಸಿಬ್ಬಂದಿಗೆ ಹೇಳಿ ಕಳಿಸಲಾಗಿತ್ತು. ಆದರೆ ಸಿಬ್ಬಂದಿ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ವಾರ್ಡ್​ಗೆ ಬರಲಾಗಿಲ್ಲ. ಆಗ ಬೇರೇನೂ ಯೋಚಿಸದ ಸಚಿವರು, ತಾವೇ ನೆಲವನ್ನು ಒರೆಸಿ ಸ್ವಚ್ಛಗೊಳಿಸಿದ್ದಾರೆ. ವಾರ್ಡ್​ನಲ್ಲಿದ್ದವರು ಇದರ ಫೋಟೋವನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Mizoram Minister Pu.R Lalzirliana who admitted to Zoram Medical College(ZMC) Aizawl, for covid treatment on 11th May, 2021 is seen here mopping the hospital floor.. p.c.@mizozeitgeistSo inspiringpic.twitter.com/pCJ0MO4euP
— Nixon Joseph (@NixonJoseph1708)May 14, 2021

ಈ ಕುರಿತಾಗಿ ಸಚಿವರು ಪ್ರತಿಕ್ರಿಯಿಸಿದ್ದಾರೆ. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಈಗಾಗಲೇ ಒತ್ತಡದಲ್ಲಿದ್ದಾರೆ. ಅವರಿಗೆ ಇನ್ನಾವುದೇ ಚಿಂತೆಯನ್ನು ಕೊಡಲು ನನಗೆ ಮನಸ್ಸಿರಲಿಲ್ಲ. ಆಸ್ಪತ್ರೆಯಲ್ಲಿ ಮಾತ್ರವಲ್ಲ, ಮನೆಯಲ್ಲೂ ಸಣ್ಣ ಪುಟ್ಟ ಕೆಲಸವನ್ನು ನಾನು ಮಾಡುತ್ತೇನೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)
‘ಕರೊನಾ ಹರಡಿಸ್ತೀರಾ’ ಎಂದು ನರ್ಸಿಂಗ್ ವಿದ್ಯಾರ್ಥಿನಿ ಮತ್ತು ಕುಟುಂಬದವರ ಮೇಲೆ ಹಲ್ಲೆ

ನರ್ಸ್​ ಕೆನ್ನೆಗೆ ಹೊಡೆದ ವೈರಲ್​ ವಿಡಿಯೋದಲ್ಲಿದ್ದ ಡಾಕ್ಟರ್​ ಶವ ಪತ್ತೆ! ಕುಟುಂಬದವರು ಹಾಗೆ ಮಾಡಿದ್ದಾದರೂ ಏಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 18 =
Remember me
